ಕೋಲಾರ: ಬಯಲುಸೀಮೆ ಕೋಲಾರದ ಮಿನಿ ಕೆ.ಆರ್.ಎಸ್ ಎಂದೇ ಖ್ಯಾತಿಯ ಮಾರ್ಕೆಂಡೇಯ ಡ್ಯಾಂ ತುಂಬಿ ಹರಿಯುತ್ತಿದ್ದು, ಮತ್ತೆ ಜೀವಕಳೆ ಬಂದಿದೆ. ಹಲವು ವರ್ಷಗಳ ಬಳಿಕ ಕಳೆದ ವರ್ಷ ಡ್ಯಾಂ ತುಂಬಿ ಹರಿದಿತ್ತು. ಆದರೆ ಈ ಬಾರಿ ಮುಂಗಾರು ಆರಂಭದಲ್ಲೆ ಡ್ಯಾಂ ಕೋಡಿ ಹರಿದಿದ್ದು, ಪ್ರವಾಸಿಗರನ್ನು ಕೈಬಿಸಿ ಕರೆಯುತ್ತಿದೆ. ಮೈಸೂರು ಮಹಾರಾಜರ ಕಾಲದಲ್ಲಿ ನಿರ್ಮಾಣವಾದ, ಡ್ಯಾಂ, ಕೆ.ಆರ್.ಎಸ್ ರೀತಿಯಲ್ಲಿ ಮಿನಿ ಕೆ.ಆರ್.ಎಸ್ ಎಂದೇ ಪ್ರಸಿದ್ದಿ. ಆದರೆ ಮಳೆ ಇಲ್ಲದೆ ಹತ್ತಾರು ವರ್ಷಗಳಿಂದ ಬರಡಾಗಿತ್ತು. ಕಳೆದ ವರ್ಷದಿಂದ ಡ್ಯಾಂನಲ್ಲಿ ನೀರು ತುಂಬಿದ್ದೇ […]Read More
ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯಡಿ ಕೂಲಿ ಕೆಲಸ ಮಾಡುವ ರಾಜ್ಯದ ಕಾರ್ಮಿಕರ ದಿನದ ಕೂಲಿ ಹಣದಲ್ಲಿ ಹೆಚ್ಚಳವಾಗಿದೆ. ಏಪ್ರಿಲ್ 1ರಿಂದ ಕೂಲಿ ದರ 309 ರೂ.ಗೆ ಹೆಚ್ಚಳ ಮಾಡಲಾಗಿದೆ. ಈ ಹಿಂದೆ 289 ರೂಪಾಯಿ ಇತ್ತು. ಸದ್ಯ ಬೇಸಿಗೆ ದುಡಿಯೋಣ ಬಾ ಅಭಿಯಾನದ ಆರಂಭವಾಗಿದ್ದು ನರೇಗಾ ಯೋಜನೆಯಡಿ ಹಲವು ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲಾಗುತ್ತದೆ. ಮಳೆಯಿಲ್ಲದೆ ಕೃಷಿ ಚಟುವಟಿಕೆಗಳು ಕಡಿಮೆಯಾಗುವ ಈ ಸಮಯದಲ್ಲಿ ಕೂಲಿ ದರ ಹೆಚ್ಚಳ ರೈತರಿಗೆ ವರದಾನವಾಗಲಿದೆ. ಜೂನ್ ಅಂತ್ಯದವರೆಗೆ ನಡೆಯುವ ದುಡಿಯೋಣ […]Read More
ಮುಂಬೈ: ಗಾನ ಕೋಗಿಲೆ, ಖ್ಯಾತ ಗಾಯಕಿ ಲತಾ ಮಂಗೇಶ್ಕರ್ ಪಂಚಭೂತಗಳಲ್ಲಿ ಲೀನರಾಗಿದ್ದಾರೆ. ಭಾನುವಾರ ಸಂಜೆ ಮುಂಬೈನಲ್ಲಿ ಸಕಲ ಸರ್ಕಾರಿ ಗೌರವಗಳೊಂದಿಗೆ ಅಂತ್ಯಕ್ರಿಯೆ ನೆರವೇರಿತು. ಪ್ರಧಾನಿ ಮೋದಿ ಸೇರಿದಂತೆ ಬಾಲಿವುಡ್ ದಂಡೇ ಹರಿದು ಬಂದಿತ್ತು. ಹಾಗಾದ್ರೆ, ಯಾವೆಲ್ಲಾ ಬಾಲಿವುಡ್ ನಟ- ನಟಿಯರು ಭಾಗವಹಿಸಿದ್ದರು ಅಂತ ಇಲ್ಲಿದೆ ನೋಡಿ… ಬಾಲಿವುಡ್ ಬಾದ್ ಶಾ ಶಾರುಕ್ ಖಾನ್ ಅಂತಿಮ ನಮನ ಸಲ್ಲಿಸಿದರು. ಗಾನ ಕೋಗಿಲೆಗೆ ರಣಬಿರ್ ಕಪೂರ್ ಅಂತಿಮ ನಮನ ಸಲ್ಲಿಸಿದರು. ಶ್ರದ್ಧಾ ಕಪೂರ್.. ಇನ್ನು, ಬೆಳಗ್ಗೆ ಬಿಗ್ ಬಿ ಅಮಿತಾಬ್ ಬಚ್ಚನ್, […]Read More
ನವದೆಹಲಿ: ಪಂಜಾಬ್ ವಿಧಾನಸಭೆ ಚುನಾವಣೆಯ ಮತದಾನಕ್ಕೆ ಕ್ಷಣಗಣನೆ ಇರುವಂತೆಯೇ ಕಾಂಗ್ರೆಸ್ ಮುಖ್ಯಮಂತ್ರಿ ಅಭ್ಯರ್ಥಿಯನ್ನ ಘೋಷಣೆ ಮಾಡಲಾಗಿದೆ. ಇದೇ ಮೊದಲ ಬಾರಿಗೆ ಪಕ್ಷದ ಸಂಪ್ರದಾಯ ಮುರಿದು ಮುಖ್ಯಮಂತ್ರಿ ಅಭ್ಯರ್ಥಿ ಹೆಸರು ಘೋಷಣೆ ಮಾಡಿದ್ದಾರೆ ರಾಹುಲ್ ಗಾಂಧಿ. ಈವರೆಗೆ ಪಕ್ಷವು ಬಹುಮತ ಪಡೆದ ನಂತರವಷ್ಟೇ ಮುಖ್ಯಮಂತ್ರಿ ಯಾರು ಎಂಬುದನ್ನ ಆಯ್ಕೆ ಮಾಡಲಾಗುತ್ತಿತ್ತು. ಆದರೆ, ಪಂಜಾಬ್ ನಲ್ಲಿ ಹಳೆಯ ಸಂಪ್ರದಾಯಕ್ಕೆ ಇತಿಶ್ರೀಯ ಹಾಡಲಾಗಿದೆ. ಹಾಲಿ ಮುಖ್ಯಮಂತ್ರಿ ಚರಣ್ ಜಿತ್ ಚನ್ನಿ ಸಿಎಂ ಅಭ್ಯರ್ಥಿಯಾಗಿ ಹೊರಹೊಮ್ಮಿದ್ದಾರೆ. ಪಂಜಾಬ್ ಪ್ರದೇಶ ಕಾಂಗ್ರೆಸ್ ಸಮಿತಿ ಅಧ್ಯಕ್ಷ […]Read More
ಬೆಂಗಳೂರು: ಕೊರೋನಾದಿಂದ ಕಂಗೆಟ್ಟಿದ್ದ ನಾಡಿನ ಜನ ಇಂದು ಕೊಂಚ ಸಮಾಧಾನ ಪಡುವ ಸುದ್ದಿ ಬಂದಿದೆ. ರಾಜ್ಯದಲ್ಲಿ ಇಂದು ಹೊಸ ಕೊರೊನಾ ಪ್ರಕರಣಗಳ ಸಂಖ್ಯೆಯಲ್ಲಿ ಇಳಿಕೆ ಕಂಡಿದೆ. ಕಳೆದ 24 ಗಂಟೆಯಲ್ಲಿ ಬೆಂಗಳೂರಿನಲ್ಲಿ 3,822 ಮಂದಿ ಸೇರಿ ರಾಜ್ಯಾದ್ಯಂತ 8,425 ಜನರಿಗೆ ಕೊರೊನಾ ಸೋಂಕು ದೃಢಪಟ್ಟಿದೆ. ಈ ಕುರಿತು ಟ್ವೀಟ್ ಮೂಲಕ ಮಾಹಿತಿ ನೀಡಿದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಡಾ.ಕೆ.ಸುಧಾಕರ್ ಕಳೆದ 24 ಗಂಟೆಯಲ್ಲಿ 1,29,337 ಮಂದಿಗೆ ಕೋವಿಡ್ ಪರೀಕ್ಷೆ ನಡೆಸಲಾಗಿದೆ. ಇವರಲ್ಲಿ ಬೆಂಗಳೂರಿನಲ್ಲಿ 3,822 […]Read More
ನಂಜನಗೂಡು:, ಮಹಿಳೆಯರು ತಮ್ಮದೇ ಅಸ್ತಿತ್ವ ಕಟ್ಟಿಕೊಳ್ಳಲು ಸಾವಿತ್ರಿ ಬಾಯಿಫುಲೆ ಶಿಕ್ಷಕಿಯರ ಸಂಘ ಸಹಕಾರಿಯಾಗಿದೆ ಎಂದು ಸಂಘದ ಜಿಲ್ಲಾ ಘಟಕದ ಅಧ್ಯಕ್ಷೆ ಸರಸ್ವತಿ ಹೇಳಿದರು. ಪಟ್ಟಣದ ರಾಜ್ಯ ಸರ್ಕಾರಿ ನೌಕರರ ಭವನದಲ್ಲಿ ಸಂಘದ ತಾಲೂಕು ಘಟಕದ ವತಿಯಿಂದ ಹಮ್ಮಿಕೊಂಡಿದ್ದ ಸಾವಿತ್ರಿಬಾಯಿ ಫುಲೆ ಜನ್ಮದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಸಂಘವು ಸಾಂಸ್ಕೃತಿಕ, ಶೈಕ್ಷಣಿಕ ಹಾಗೂ ಸಾಮಾಜಿಕವಾಗಿ ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದೆ. , ಸಾವಿತ್ರಿ ಬಾಯಿಫುಲೆ ಶಿಕ್ಷಕಿಯರ ಸಂಘದ ರಾಜ್ಯದ ಮೊದಲ ಮಹಿಳಾ ಶಿಕ್ಷಕಿಯರ ಸಂಘವಾಗಿದ್ದು, ತನ್ನ ಉದ್ದೇಶಿತ ಯೋಜನೆಯ ಈಡೇರಿಕೆಗೆ […]Read More
ಬೆಂಗಳೂರು: ರಾಜ್ಯದಲ್ಲಿ ಇಂದು ಕೊರೋನಾ ಸ್ಫೋಟ ಮುಂದುವರೆದಿದೆ. ಬೆಂಗಳೂರಿನಲ್ಲಿ 22,284 ಸೇರಿದಂತೆ ರಾಜ್ಯಾಧ್ಯಂತ 32,793 ಜನರಿಗೆ ಕೋವಿಡ್ ಸೋಂಕು ತಗುಲಿದೆ. ಈ ಬಗ್ಗೆ ರಾಜ್ಯ ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ರವರು ತಮ್ಮ ಟ್ವಿಟ್ಟರ್ ನಲ್ಲಿ ಮಾಹಿತಿ ನೀಡಿದ್ದಾರೆ. ಕಳೆದ 24 ಗಂಟೆಯಲ್ಲಿ 2,18,479 ಜನರನ್ನು ಕೋವಿಡ್ ಪರೀಕ್ಷೆಗೆ ಒಳಪಡಿಸಲಾಗಿದೆ. ಇವರಲ್ಲಿ ಬೆಂಗಳೂರಿನಲ್ಲಿ 22,284 ಸೇರಿದಂತೆ ರಾಜ್ಯದಲ್ಲಿ 32,793ಜನರಿಗೆ ಕೋವಿಡ್ ದೃಢಪಟ್ಟಿದೆ. ರಾಜ್ಯದಲ್ಲಿ ಸಕ್ರೀಯ ಪ್ರಕರಣಗಳ ಸಂಖ್ಯೆ 1,69,850ಕ್ಕೆ ಏರಿಕೆಯಾಗಿವೆ. ಇಂದು ರಾಜ್ಯದಲ್ಲಿ 32,793 […]Read More
ಬೆಂಗಳೂರು: ರಾಜ್ಯದಲ್ಲಿ ಮತ್ತೆ ಕೊರೋನಾ ಸ್ಪೋಟಗೊಂಡಿದೆ. ಇಂದು ಹೊಸದಾಗಿ 707 ಜನರಿಗೆ ಕೋವಿಡ್ ಪಾಸಿಟಿವ್ ದೃಢಪಟ್ಟಿದ್ದು, ಸೋಂಕಿನಿಂದ ಮೂವರು ಸಾವನ್ನಪ್ಪಿದ್ದಾರೆ. ಈ ಬಗ್ಗೆ ರಾಜ್ಯ ಆರೋಗ್ಯ ಇಲಾಖೆ ಮಾಹಿತಿ ಬಿಡುಗಡೆ ಮಾಡಿದ್ದು, ಬೆಂಗಳೂರು ನಗರದಲ್ಲಿ 565, ದಕ್ಷಿಣ ಕನ್ನಡ 11, ಹಾಸನ 17, ಕೊಡಗು 12, ಮೈಸೂರು 16, ಉಡುಪಿ 19 ಸೇರಿದಂತೆ ರಾಜ್ಯಾಧ್ಯಂತ 707 ಜನರಿಗೆ ಕೋವಿಡ್ ಪಾಸಿಟಿವ್ ಎಂಬುದಾಗಿ ದೃಢಪಟ್ಟಿದೆ. ಇದರಿಂದಾಗಿ ಸೋಂಕಿತರ ಸಂಖ್ಯೆ 3006505ಗೆ ಏರಿಕೆಯಾಗಿದೆ. ಇಂದು 252 ಸೇರಿದಂತೆ ಇದುವರೆಗೆ 2959926 […]Read More