Warning: array_intersect(): Expected parameter 2 to be an array, null given in /home/u327821803/domains/todayexpress.in/public_html/wp-content/plugins/page-or-post-clone/page-or-post-clone.php on line 123

Warning: include_once(/home/u327821803/domains/todayexpress.in/public_html/wp-includes/header.php): failed to open stream: No such file or directory in /home/u327821803/domains/todayexpress.in/public_html/wp-config.php on line 91

Warning: include_once(): Failed opening '/home/u327821803/domains/todayexpress.in/public_html/wp-includes/header.php' for inclusion (include_path='.:/opt/alt/php74/usr/share/pear') in /home/u327821803/domains/todayexpress.in/public_html/wp-config.php on line 91
ಐಎಂಎ ಹಗರಣ: ಮಾಜಿ ಸಚಿವ ರೋಷನ್ ಬೇಗ್ ಮನೆ, ಇತರೆ ಆಸ್ತಿ ಜಪ್ತಿ. – Today Express

ಐಎಂಎ ಹಗರಣ: ಮಾಜಿ ಸಚಿವ ರೋಷನ್ ಬೇಗ್ ಮನೆ, ಇತರೆ ಆಸ್ತಿ ಜಪ್ತಿ.

 ಐಎಂಎ ಹಗರಣ: ಮಾಜಿ ಸಚಿವ ರೋಷನ್ ಬೇಗ್ ಮನೆ, ಇತರೆ ಆಸ್ತಿ ಜಪ್ತಿ.

ಕರ್ನಾಟಕ ಸರ್ಕಾರ ಮಾಜಿ ಸಚಿವ ಆರ್. ರೋಷನ್ ಬೇಗ್ ಅವರಿಗೆ ಸಂಬಂಧಿಸಿದ ಯಾವ ಸ್ಥಿರ ಹಾಗೂ ಚರಾಸ್ತಿಗಳನ್ನು ಜಪ್ತಿ ಮಾಡುತ್ತಿದೆ ಎಂಬ ವಿಷಯಕ್ಕೆ ಸಂಬಂಧಪಟ್ಟಂತೆ ಸಾರ್ವಜನಿಕ ಅಧಿಸೂಚನೆಯನ್ನು ಹೊರಡಿಸಿದೆ.

ಮಾಜಿ ಸಚಿವ ರೋಷನ್ ಬೇಗ್ ಅವರು ಹಗರಣಪೀಡಿತ ಐಎಂಎ ಸಮೂಹವನ್ನು ಬೆಂಬಲಿಸಿದ ಆರೋಪವನ್ನು ಎದುರಿಸುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಅವರ ಆರು ವಿವಿಧ ಬ್ಯಾಂಕ್ ಖಾತೆಗಳಲ್ಲಿರುವ ಠೇವಣಿ ಮೊತ್ತ ರೂ.೨.೦೩ ಕೋಟಿ, ರೂ.೬.೮ ಲಕ್ಷ ಹೂಡಿಕೆಗಳು (ಈಕ್ವಿಟಿ ಶೇರುಗಳು), ರೂ.೪೨.೪೦ ಲಕ್ಷ ಮೌಲ್ಯದ ಚಿನ್ನ ಹಾಗೂ ಬೆಳ್ಳಿ ಆಭರಣಗಳು, ರೂ.೮.೯ ಕೋಟಿ ಮೌಲ್ಯದ ನಿವೇಶನಗಳು, ರೂ.೧.೭೩ ಕೋಟಿ ಮೌಲ್ಯದ ವಾಣಿಜ್ಯ ಆಸ್ತಿ, ಮಾಜಿ ಸಚಿವ ಹೂಡಿಕೆ ಮಾಡಿರುವಂತಹ ರೂ.೩.೬೪ ಕೋಟಿ ಮೌಲ್ಯದ ಒಂದು ಮನೆಯ ಜೊತೆಗೆ ಅವರು ಫ್ರೇಜರ್ ಟೌನ್‌ನಲ್ಲಿ ವಾಸಿಸುತ್ತಿದ್ದಂತಹ ಇನ್ನೂ ಮೌಲ್ಯ ಅಂದಾಜಿಸಬೇಕಾಗಿರುವಂತಹ ಮನೆಯನ್ನು ಜಪ್ತಿ ಮಾಡಲಾಗಿದೆ.

ಜಪ್ತಿ ಮಾಡಿರುವ ಆಸ್ತಿಗಳ ಹೂಡಿಕೆ ಮೊತ್ತ ರೂ. ೧೬.೮೧ ಕೋಟಿಗಳಾಗಿದ್ದು, ಇದರ ಮಾರುಕಟ್ಟೆ ಮೌಲ್ಯ ಉಪನೋಂದಣಾಧಿಕಾರಿಗಳ ವರದಿ ಬಂದ ನಂತರ ತಿಳಿಯುತ್ತದೆ.

ಐಎಂಎ ಹಗರಣ ಪ್ರಕರಣದಲ್ಲಿ ಸಿಬಿಐ ಚಾರ್ಜ್ ಶೀಟ್ ಹಾಗೂ ವಿಶೇಷ ಅಧಿಕಾರಿ ಹಾಗೂ ಅಧಿಸೂಚಿತ ಪ್ರಾಧಿಕಾರಗಳ ವರದಿಯನ್ನು ಪರಿಗಣಿಸಿದ ನಂತರ ಸರ್ಕಾರ ಮಾಜಿ ಸಚಿವ ರೋಷನ್ ಬೇಗ್ ಐಎಂಎ ಸಮೂಹದ ಪ್ರೋತ್ಸಾಹಕ ಹಾಗೂ ಪಲಾನುಭವಿಯ ಪಾತ್ರವನ್ನು ನಿರ್ವಹಿಸಿದ್ದಾರೆ ಎಂಬ ನಿರ್ಣಯಕ್ಕೆ ಬಂದಿದೆ.

ಕರ್ನಾಟಕ ಹಣಕಾಸು ಸಂಸ್ಥೆಗಳಲ್ಲಿ ಠೇವಣಿದಾರರ ಹಿತಾಸಕ್ತಿ ರಕ್ಷಣೆ ಕಾಯ್ದೆಯ, ಕಲಂ ೩ರಡಿ (cited Section 3 of Karnataka Protection of Interest of Depositors in Financial Establishments (KPIDFE) Act) ಆಸ್ತಿಯನ್ನು ಜಪ್ತಿ ಮಾಡಲಾಗಿದೆ. ಈ ಎಲ್ಲಾ ಆಸ್ತಿಗಳು ಈಗ ಸರ್ಕಾರ ನೇಮಕ ಮಾಡಿರುವ ಪ್ರಾಧಿಕಾರದ ನಿಯಂತ್ರಣದಲ್ಲಿರುತ್ತದೆ ಎನ್ನಲಾಗಿದೆ.