ತಮ್ಮ ವಿರುದ್ದ ಸಂದೇಶ್ ಪ್ರಿನ್ಸ್ ಹೋಟೆಲ್ ಸಪ್ಲೇಯರ್ ಮೇಲೆ ಹಲ್ಲೆ ಮಾಡಿರುವ ಆರೋಪ ಮಾಡಿರುವ ನಿರ್ದೇಶಕ ಇಂದ್ರಜಿತ್ ಲಂಕೇಶ್ ಗೆ ನಟ ದರ್ಶನ್ ತಿರುಗೇಟು ನೀಡಿದ್ದಾರೆ.
ಈ ಕುರಿತು ಮಾಧ್ಯಮಗಳಿಗೆ ಸ್ಪಷ್ಟನೆ ನೀಡಿರುವ ನಟ ದರ್ಶನ್, ಹೋಟೆಲ್ ನಲ್ಲಿ ಊಟ ಕೊಡೋದು ಲೇಟ್ ಆಗಿತ್ತು. ಅದಕ್ಕೆ ಯಾಕಪ್ಪ ಲೇಟಾಯ್ತು ಎಂದು ಕೇಳಿದ್ದೆ. ಅಷ್ಟೆ. ಅದನ್ನ ದೊಡ್ಡು ಮಾಡ್ತಿದ್ದಾರೆ. ನಾನು ಹಲ್ಲೆ ಮಾಡಿದ್ದೇನೆ ಎಂಬುದು ಆರೋಪ ಮಾತ್ರ. ಸಾಬೀತಾಗಿದೆಯಾ ಇಲ್ಲಾ. ಇಂದ್ರಜಿತ್ ಲಂಕೇಶ್ ಆರೋಪವನ್ನ ಸಾಬೀತು ಮಾಡಲಿ ಎಂದು ಸವಾಲು ಹಾಕಿದ್ದಾರೆ.
ಇಂದ್ರಜಿತ್ ದೊಡ್ಡ ಇನ್ವೆಸ್ಟಿಗೇಟರ್. ಇಂದ್ರಜಿತ್ ಗೆ ದೊಡ್ಡ ದೊಡ್ಡ ಕಾಂಟ್ಯಾಕ್ಟ್ ಇರಬಹುದು. ಅವರು ಏನಾದರೂ ಮಾಡಿಕೊಳ್ಳಲಿ..ಯಾವುದೇ ಊಹಾಪೂಹ ನಂಬಬೇಡಿ. ನನ್ನದು ಸಂದೇಶ್ ನಾಗರಾಜ್ ದು ಸಾವಿರ ಗಲಾಟೆ ಇದೆ. ಏನೋ ಎಗರಾಡಿರ್ಬೋದು ಅಷ್ಟೆ ಹಲ್ಲೆ ಮಾಡಿಲ್ಲ. ಸಿನಿಮಾ ಇದ್ದರೇ ಹೊರಗೆ ಬರ್ತೀನಿ. ಇಲ್ಲಂದ್ರೆ ಈ ರೀತಿ ವಿಷಯ ಇದ್ರೆ ಹೊರಗೆ ಬರ್ತೀನಿ ಎಂದು ನಟ ದರ್ಶನ್ ತಿಳಿಸಿದರು.
ಸೆಲೆಬ್ರಟಿಗಳ ವರ್ತನೆ ಸರಿ ಇಲ್ಲ ಎಂಬ ಆರೋಪಕ್ಕೆ ಕಿಡಿಕಾರಿದ ನಟ ದರ್ಶನ್, ರಫ್ ಆಗಿ ಮಾತನಾಡಿದ್ರೆ ನಾನೂ ರಫ್ ಆಗಿ ಮಾತನಾಡುತ್ತೇನೆ. ಇದರ ಹಿಂದ ಕಾಣದ ಕೈಗಳು ಕೆಲಸ ಮಾಡುತ್ತಿವೆ ಎಂದು ಹೇಳಿದರು.