ಸಂದೇಶ್ ಪ್ರಿನ್ಸ್ ಹೋಟೆಲ್ ನಲ್ಲಿ ಸಪ್ಲೇಯರ್ ಮೇಲೆ ನಟ ದರ್ಶನ್ ಹಲ್ಲೆ ಮಾಡಿದ್ದಾರೆಂದು ಆರೋಪಿಸಿ ನಿರ್ದೇಶಕ ಇಂದ್ರಜಿತ್ ಲಂಕೇಶ್ ದೂರು ನೀಡಿರುವ ವಿಚಾರ ಕುರಿತು ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ ಪ್ರತಿಕ್ರಿಯಿಸಿದ್ದಾರೆ. ಇದು ಮತ್ತೊಂದು ರೀತಿ ತಿರುವು ಪಡೆಯಲಿದೆ. ಈ ಬಗ್ಗೆ ಸರ್ಕಾರ ಕಾನೂನು ರೀತಿ ಕ್ರಮ ತೆಗೆದುಕೊಳ್ಳಲಿ. ಸಾರ್ವಜನಿಕ ಜೀವನದಲ್ಲಿವವರು ಅವರೇ ತಿಳಿದುಕೊಳ್ಳಬೇಕು. ಜನರ ಜತೆ ಹೇಗೆ ನಡೆದುಬೇಕು ಎಂಬುದನ್ನ ಅವರೇ ತಿಳಿದುಕೊಳ್ಳಬೇಕು ಎಂದು ಹೆಚ್.ಡಿ ಕುಮಾರಸ್ವಾಮಿ ಹೇಳಿದ್ದಾರೆ. Read More
ಮೈದಾನದಲ್ಲಿ ದಾದಾ ಆರ್ಭಟ ನೋಡಿದ ಅಭಿಮಾನಿಗಳೇ… ಶೀಘ್ರವೇ ತೆರೆ ಮೇಲೆಯೂ ಅವರ ಆಟ ನೋಡುವ ಅವಕಾಶ ಸಿಗಲಿದೆ. ಹೌದು. ಬಂಗಾಳದ ‘ದಾದಾ’ ಸೌರವ್ ಗಂಗೂಲಿ ಜೀವನಚರಿತ್ರೆ ತೆರೆಮೇಲೆ ಬರಲು ಸಿದ್ಧತೆ ನಡೆಸಲಾಗಿದೆ. ತನ್ನ ಜೀವನವನ್ನು ಸಿನಿಮಾ ಮಾಡಲು ದಾದಾ ಗಂಗೂಲಿ ಅನುಮತಿ ನೀಡಿದ್ದಾರೆ. ಮೂಲಗಳ ಪ್ರಕಾರ ಗಂಗೂಲಿ ಪಾತ್ರದಲ್ಲಿ ನಟ ರಣ್ಬೀರ್ ಕಪೂರ್ ಕಾಣಿಸಿಕೊಳ್ಳಲಿದ್ದಾರೆ ಎನ್ನಲಾಗುತ್ತಿದೆ. ಚಿತ್ರದಲ್ಲಿ ಗಂಗೂಲಿ ಬಾಲ್ಯ, ಜೀವನ, ಕ್ರಿಕೆಟ್ ಮತ್ತು ಬಿಸಿಸಿಐ ಅಧ್ಯಕ್ಷರಾಗುವವರೆಗಿನ ಜೀವನ ಸಿನಿಮಾ ಮೂಲಕ ಅಭಿಮಾನಿಗಳ ಮುಂದೆ ಬರಲಿದೆ. ಈಗಾಗಲೇ […]Read More
ಕರ್ನಾಟಕ ಸರ್ಕಾರ ಮಾಜಿ ಸಚಿವ ಆರ್. ರೋಷನ್ ಬೇಗ್ ಅವರಿಗೆ ಸಂಬಂಧಿಸಿದ ಯಾವ ಸ್ಥಿರ ಹಾಗೂ ಚರಾಸ್ತಿಗಳನ್ನು ಜಪ್ತಿ ಮಾಡುತ್ತಿದೆ ಎಂಬ ವಿಷಯಕ್ಕೆ ಸಂಬಂಧಪಟ್ಟಂತೆ ಸಾರ್ವಜನಿಕ ಅಧಿಸೂಚನೆಯನ್ನು ಹೊರಡಿಸಿದೆ. ಮಾಜಿ ಸಚಿವ ರೋಷನ್ ಬೇಗ್ ಅವರು ಹಗರಣಪೀಡಿತ ಐಎಂಎ ಸಮೂಹವನ್ನು ಬೆಂಬಲಿಸಿದ ಆರೋಪವನ್ನು ಎದುರಿಸುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಅವರ ಆರು ವಿವಿಧ ಬ್ಯಾಂಕ್ ಖಾತೆಗಳಲ್ಲಿರುವ ಠೇವಣಿ ಮೊತ್ತ ರೂ.೨.೦೩ ಕೋಟಿ, ರೂ.೬.೮ ಲಕ್ಷ ಹೂಡಿಕೆಗಳು (ಈಕ್ವಿಟಿ ಶೇರುಗಳು), ರೂ.೪೨.೪೦ ಲಕ್ಷ ಮೌಲ್ಯದ ಚಿನ್ನ ಹಾಗೂ ಬೆಳ್ಳಿ ಆಭರಣಗಳು, […]Read More
ಸಿದ್ಧರಾಮಯ್ಯ ನುಡಿದಂತೆ ನಡೆದಿದ್ದಾರೆ: ಬೇಕಿದ್ರೆ ನಳೀನ್ ಕುಮಾರ್ ಕಟೀಲ್ ಈ ಬಗ್ಗೆ ನೇರ
ಮಾಜಿ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರು ನುಡಿದಂತೆ ನಡೆದಿದ್ದಾರೆ, ಮಾತು ತಪ್ಪಿಲ್ಲ. ಪ್ರಣಾಳಿಕೆಯಲ್ಲಿ ನೀಡಿದ್ದ ಭರವಸೆ ಪೈಕಿ ಶೇ.99ರಷ್ಟು ಈಡೇರಿಸಿದ್ದಾರೆ. ಈ ಬಗ್ಗೆ ಬೇಕಿದ್ದರೇ ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್ ಚರ್ಚೆಗೆ ಬರಲಿ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಆಹ್ವಾನಿಸಿದರು. ಮಾಜಿ ಸಿಎಂ ಸಿದ್ಧರಾಮಯ್ಯ ವಂಚನೆ ಮಾಡಿದ್ದಾರೆ ಎಂದು ಆರೋಪಿಸಿದ್ದ ನಳಿನ್ ಕುಮಾರ್ ಕಟೀಲ್ ಗೆ ಇಂದು ಮಾಧ್ಯಮಗಳ ಜತೆ ಮಾತನಾಡಿ ತಿರುಗೇಟು ನೀಡಿದ ಡಿ.ಕೆ ಶಿವಕುಮಾರ್, ಬಸವ ಜಯಂತಿ ದಿನ ಪ್ರಮಾಣ ವಚನ ಸ್ವೀಕರಿಸಿ […]Read More
ಜುಲೈ 17 ರಂದು ದಿವಂಗತ ನಟ ಸಂಚಾರಿ ವಿಜಯ್ ಹುಟ್ಟುಹಬ್ಬ. ಹೀಗಾಗಿ ಆ ದಿನವನ್ನು ವಿಶೇಷವಾಗಿ ಆಚರಿಸಲು ವಿಜಯ್ ಆಪ್ತರು ನಿರ್ಧರಿಸಿದ್ದಾರೆ. ಈ ವಿಶೇಷ ದಿನಕ್ಕೆ ಉಡುಗೊರೆಯಾಗಿ ಸಂಚಾರಿ ವಿಜಯ್ ಕುರಿತಾದ ಪುಸ್ತಕ ಬಿಡುಗಡೆಯಾಗುತ್ತಿದೆ ಎನ್ನಲಾಗಿದೆ. ಪತ್ರಕರ್ತ, ಲೇಖಕ ಶರಣು ಹುಲ್ಲೂರು ಸಂಪಾದಕತ್ವದಲ್ಲಿ ರಾಜ್ಯ ಪ್ರಶಸ್ತಿ ವಿಜೇತ ನಟನ ‘ಅನಂತವಾಗಿರು’ ಎಂಬ ಪುಸ್ತಕ ಹೊರತರಲಾಗುತ್ತಿದೆ. ಪುಸ್ತಕದಲ್ಲಿ ರಾಷ್ಟ್ರ ಪ್ರಶಸ್ತಿ ವಿಜೇತ ಕಲಾವಿದನ ಬಾಲ್ಯ, ಜೀವನದ ಬಗ್ಗೆ ಸಹೋದರರು, ಕುಟುಂಬದವರು ಹೇಳಿರುವ ವಿಷಯಗಳಿವೆ ಎಂದು ಶರಣು ಹುಲ್ಲೂರು ತಿಳಿಸಿದ್ದಾರೆ. […]Read More
ನವದೆಹಲಿ: 2026ರಲ್ಲಿ ನಡೆಯಲಿರುವ ಪ್ರತಿಷ್ಠಿತ ಬ್ಯಾಡ್ಮಿಂಟನ್ ವಿಶ್ವ ಚಾಂಪಿಯನ್ಶಿಪ್ಗೆ ಆತಿಥ್ಯ ವಹಿಸಲು ಭಾರತಕ್ಕೆ ಬ್ಯಾಡ್ಮಿಂಟನ್ ವರ್ಲ್ಡ್ ಫೆಡರೇಶನ್(ಬಿಡಬ್ಲ್ಯೂಎಫ್) ಒಪ್ಪಿಸಿದೆ ಎಂದು ಅಧಿಕೃತ ಘೋಷಣೆ ಮಾಡಲಾಗಿದೆ. ಒಲಿಂಪಿಕ್ ವರ್ಷವನ್ನು ಹೊರತುಪಡಿಸಿ ಪ್ರತಿವರ್ಷ ನಡೆಯುವ ಈ ಟೂರ್ನಿಯನ್ನು ಭಾರತ ಎರಡನೇ ಬಾರಿಗೆ ಆಯೋಜಿಸುತ್ತದೆ. ಭಾರತ ಕೊನೆಯ ಬಾರಿಗೆ 2009ರಲ್ಲಿ ಹೈದರಾಬಾದ್ನಲ್ಲಿ ನಡೆದ ಬಿಡಬ್ಲ್ಯೂಎಫ್ ವಿಶ್ವ ಚಾಂಪಿಯನ್ಶಿಪ್ಗೆ ಆತಿಥ್ಯ ವಹಿಸಿತ್ತು. ಭಾರತವು 2014 ರ ಥಾಮಸ್ ಮತ್ತು ಉಬರ್ ಕಪ್ ಫೈನಲ್ಸ್, ಏಷ್ಯನ್ ಚಾಂಪಿಯನ್ಶಿಪ್ಗಳು ಮತ್ತು ವಾರ್ಷಿಕ ಬಿಡಬ್ಲ್ಯೂಎಫ್ ಸೂಪರ್ 500 ಈವೆಂಟ್, […]Read More
ಟೆನ್ನಿಸ್ ಪ್ರಿಯರಿಗೆ ಕಹಿ ಸುದ್ದಿ: ಮೊಣಕಾಲಿನ ಗಾಯದಿಂದಾಗಿ ಟೋಕಿಯೋ ಒಲಿಂಪಿಕ್ಸ್ ಕೂಟದಿಂದ ಹಿಂದೆ
ನವದೆಹಲಿ: ಟೆನ್ನಿಸ್ ಪ್ರಿಯರಿಗೆ ಕಹಿ ಸುದ್ದಿಯೊಂದು ಎದುರಾಗಿದ್ದು ಬಹು ನಿರೀಕ್ಷಿತ ಟೋಕಿಯೋ ಒಲಿಂಪಿಕ್ಸ್ ಕ್ರೀಡಾಕೂಟದಿಂದ ಸ್ವಿಸ್ ಟೆನ್ನಿಸ್ ಆಟಗಾರ ರೋಜರ್ ಫೆಡರರ್ ಹಿಂದೆ ಸರಿದಿದ್ದಾರೆ. ಈ ಕುರಿತಂತೆ ಟ್ವೀಟ್ ಮಾಡಿರುವ ಸ್ವಿಸ್ ಮೇಸ್ಟ್ರೋ, 2 ಬಾರಿ ಒಲಿಂಪಿಕ್ಸ್ ಪದಕ ವಿಜೇತ ರೋಜರ್ ಫೆಡರರ್ ಟೋಕಿಯೊ ಒಲಿಂಪಿಕ್ಸ್ʼನಿಂದ ಹಿಂದೆ ಸರಿಯುವ ನಿರ್ಧಾರವನ್ನ ಮಂಗಳವಾರ ಘೋಷಿಸಿದ್ದಾರೆ. ತಾವು ಮೊಣಕಾಲು ನೋವಿನಿಂದ ಬಳಲುತ್ತಿರುವುದಾಗಿ ಅವರು ಹೇಳಿದ್ದು, ಇದೇ ಕಾರಣದಿಂದ ತಾವು ಒಲಿಂಪಿಕ್ಸ್ ಟೂರ್ನಿಯಿಂದ ಹಿಂದೆ ಸರಿಯುತ್ತಿರುವುದಾಗಿ ಹೇಳಿದ್ದಾರೆ. 20 ಬಾರಿ ಗ್ರ್ಯಾಂಡ್ ಸ್ಲ್ಯಾಮ್ ಚಾಂಪಿಯನ್ […]Read More