ಬೆಂಗಳೂರು: ಬೆಂಗಳೂರಲ್ಲಿ 8 ವರ್ಷದ ಬಳಿಕ ಆಟೋ ಪ್ರಯಾಣ ದರದಲ್ಲಿ ಹೆಚ್ಚಳ ಆಗಿದೆ. ಕನಿಷ್ಠ ದರವನ್ನು 25 ರಿಂದ 30 ರೂಪಾಯಿಗೆ ಏರಿಕೆ ಮಾಡಲಾಗಿದೆ. ಕನಿಷ್ಠ ದರದ ನಂತರ ಪ್ರತಿ ಕಿ.ಮೀ.ಗೆ 12 ರೂಪಾಯಿ ಇದ್ದ ದರ 15 ರೂ.ಗೆ ಏರಿಕೆ ಆಗಿದೆ. ಗ್ಯಾಸ್, ಡಿಸೇಲ್, ಪೆಟ್ರೋಲ್ ದರ 8 ವರ್ಷದಲ್ಲಿ ಗಗನಕ್ಕೇರಿವೆ. ಆಟೋ ಗ್ಯಾಸ್ ದರವೂ ಏರಿಕೆ ಕಂಡಿದ್ದು, ಆಟೋ ಚಾಲಕರು ಸಂಕಷ್ಟಕ್ಕೀಡಾಗಿದ್ದರು. ಮೀಟರ್ ಹಾಕಿ ಬಾಡಿಗೆ ಓಡಿಸೋದು ಕಷ್ಟ ಆಗ್ತಿದೆ. ಆಟೋ ಮೀಟರ್ ದರ ಹೆಚ್ಚಳ […]Read More
ಬೆಂಗಳೂರು: ರಾಜ್ಯದಲ್ಲಿ ಮುಂದಿನ ಎರಡು ದಿನಗಳು ಭಾರೀ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.ಅರಬ್ಬಿ ಸಮುದ್ರದಲ್ಲಿ ಉಂಟಾಗಿರುವ ವಾಯುಭಾರ ಕುಸಿತದ ಪರಿಣಾಮ ಕರ್ನಾಟಕ ಸೇರಿದಂತೆ ದಕ್ಷಿಣ ರಾಜ್ಯಗಳಲ್ಲಿ ಮಳೆಯಾಗುತ್ತಿದೆ. ಮುಂದಿನ 48 ಗಂಟೆಗಳ ಕಾಲ ರಾಜ್ಯದ ದಕ್ಷಿಣ ಒಳನಾಡಿನಲ್ಲಿ ಭಾರೀ ಮಳೆ ಎಚ್ಚರಿಕೆ ನೀಡಲಾಗಿದೆ. ಅರಬ್ಬಿ ಸಮುದ್ರದ ಪೂರ್ವ ಮಧ್ಯಭಾಗದಲ್ಲಿ ಪ್ರಬಲ ವಾಯುಭಾರ ಕುಸಿತ ಉಂಟಾಗಿದೆ. ಇದರಿಂದಾಗಿ ಕರ್ನಾಟಕದ ದಕ್ಷಿಣ ಒಳನಾಡಿನಲ್ಲಿ ಇಂದು-ನಾಳೆ ಗುಡುಗು, ಸಿಡಿಲಿನ ಸಹಿತ ಭಾರೀ ಮಳೆಯಾಗಲಿದೆ ಎಂದು ಭಾರತೀಯ ಹವಾಮಾನ ಇಲಾಖೆ […]Read More
ಬೆಲೆ ಏರಿಕೆಯಿಂದ ತತ್ತರಿಸಿರುವ ಜನರಿಗೆ ಹೋಟೆಲ್ ಮಾಲೀಕರು ಮತ್ತೊಂದು ಶಾಕ್ ನೀಡುತ್ತಿದ್ದಾರೆ. ನೀವು ಇನ್ನು ಮೇಲೆ ಹೋಟೆಲ್ಗೆ ಹೋಗಬೇಕಾದರೆ ನಿಮ್ಮ ಜೇಬು ನೋಡಿಕೊಳ್ಳಬೇಕಿದೆ. ಇನ್ಮುಂದೆ ಹೋಟೆಲ್ ನಲ್ಲಿ ತಿನ್ನುವ ಇಡ್ಲಿ–ದೋಸೆ, ಕಾಫಿ ಸೇರಿದಂತೆ ತಿಂಡಿ, ಊಟದ ದರ ಏರಿಕೆಯಾಗಲಿದೆ. ನಾಳೆಯಿಂದಲೇ ಹೋಟೆಲ್ ತಿನಿಸುಗಳ ಮೇಲೆ ಹೊಸ ದರ ಜಾರಿಯಾಗಲಿದೆ. ಕೆಲವು ಹೋಟೆಲ್ ಗಳು ನ.15ರ ನಂತರ ದರ ಏರಿಕೆಗೆ ನಿರ್ಧರಿಸಿದೆ. ಆಯಾ ಹೋಟೆಲ್ ಮಾಲೀಕರು ದರ ಏರಿಕೆಯನ್ನು ನಿಗದಿಪಡಿಸಿದ್ದಾರೆ. ಎಲ್ಲ ತಿಂಡಿ, ತಿನಿಸು, ಊಟದ ಮೇಲೆ ಶೇ.10 […]Read More
ಮೈಸೂರು: ಕರ್ನಾಟಕ ರಾಜ್ಯ ಶಿವಾರ್ಚಕ ಸಂಘದ 2020-21ನೇ ಸಾಲಿನ ಕಾರ್ಯಕಾರಿ ಸಮಿತಿಯ ಚುನಾವಣೆಯು ನ.7ರಂದು ಬೆಳಿಗ್ಗೆ 9ರಿಂದ ಸಂಜೆ 4 ಗಂಟೆ ವರೆಗೆ ನಡೆಯಲಿದೆ.ಮೈಸೂರು ನಗರದ ವಿದ್ಯಾರಣ್ಯಪುರಂನ ಒಕ್ಕಲಿಗ ಸಮುದಾಯ ಭವನದಲ್ಲಿ ಮತದಾನ ನಡೆಯಲಿದ್ದು, ಸಂಘದ ಸದಸ್ಯತ್ವ ಪಡೆದಿರುವವರು ಮತದಾನ ಮಾಡಬಹುದಾಗಿದೆ. ಕಣದಲ್ಲಿದ್ದ 34 ಅಭ್ಯರ್ಥಿಗಳಲ್ಲಿ 8 ಅಭ್ಯರ್ಥಿಗಳು ನಾಮಪತ್ರ ವಾಪಸ್ ಪಡೆಯುವುದರೊಂದಿಗೆ 13 ನಿರ್ದೇಶಕರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಬಾಕಿ ಉಳಿದ ಅಧ್ಯಕ್ಷ, ಉಪಾಧ್ಯಕ್ಷ, ಕಾರ್ಯದರ್ಶಿ, ಸಹಕಾರ್ಯದರ್ಶಿ ಸ್ಥಾನಗಳಿಗೆ ಭಾನುವಾರ ಮತದಾನ ನಡೆಯಲಿದೆ.Read More
ಮೈಸೂರು: ಉಪಚುನಾಣೆ ಫಲಿತಾಂಶ ಭವಿಷ್ಯದ ದಿಕ್ಸೂಚಿ ಅಲ್ಲ ಎಂದು ಮೈಸೂರು ನಗರಪಾಲಿಕೆ ಮಾಜಿ ಸದಸ್ಯ ಕೆ.ವಿ.ಮಲ್ಲೇಶ್ ಹೇಳಿದ್ದಾರೆ. ಫಲಿತಾಂಶದ ಬಗ್ಗೆ ಮಾತನಾಡಿದ ಅವರು, ಮತದಾರರ ತೀರ್ಪನ್ನು ಜೆಡಿಎಸ್ ಮನಃಪೂರ್ವಕವಾಗಿ ಗೌರವಿಸಲಿದೆ. ಆಡಳಿತಾರೂಢ ಪಕ್ಷ ಬಿಜೆಪಿಯ ಹಣಬಲ, ತೋಳ್ಬಲ ಹಾಗೂ ಕಾಂಗ್ರೆಸ್ ಪಕ್ಷದ ಕುತಂತ್ರ ರಾಜಕಾರಣಕ್ಕೆ ಜೆಡಿಎಸ್ ಬಲಿಯಾಗಿದೆ ಎಂದು ದೂರಿದರು. ಮುಂದುವರೆದು ಜೆಡಿಎಸ್ ಅಭ್ಯರ್ಥಿಯನ್ನು ಕಾಂಗ್ರೆಸ್ ಪಕ್ಷ ಹೈಜಾಕ್ ಮಾಡಿ ಕರೆದುಕೊಂಡು ಹೋದರೆ, ಬಿಜೆಪಿ ಪಕ್ಷ ಹಣಬಲ, ಅಧಿಕಾರ ದುರುಪಯೋಗ ಮಾಡಿಕೊಂಡಿರುವುದು ಈಗಾಗಲೇ ಸಾಕ್ಷಿ ಸಮೇತ ಜಗಜ್ಜಾಹಿರಾಗಿದೆ […]Read More
ಬೆಂಗಳೂರು; ರಾಜ್ಯ ರಾಜಕೀಯದಲ್ಲಿ ತೀವ್ರ ಕುತೂಹಲ ಕೆರಳಿಸಿದ್ದ ಎರಡು ಕ್ಷೇತ್ರಗಳ ಉಪ ಚುನಾವಣೆಯ ಫಲಿತಾಂಶ ಪ್ರಕಟವಾಗಿದ್ದು, ಹಾನಗಲ್ ನಲ್ಲಿ ಕಾಂಗ್ರೆಸ್ ಅಭ್ಯರ್ಥಿ 7426 ಮತ್ತು ಸಿಂಧಗಿ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ 31,088 ಮತಗಳ ಅಂತರದಿಂದ ಜಯಗಳಿಸಿದ್ದಾರೆ. ಜೆಡಿಎಸ್ ಎರಡು ಕ್ಷೇತ್ರಗಳಲ್ಲಿ ಸೋತು ಭಾರಿ ಹಿನ್ನಡೆ ಅನುಭವಿಸಿದೆ. ಸಿಎಂ ಬಸವರಾಜ್ ಬೊಮ್ಮಾಯಿ ತವರು ಜಿಲ್ಲೆಯಾದ ಹಾವೇರಿಯ ಹಾನಗಲ್ ಮತ್ತು ವಿಜಯಪುರ ಜಿಲ್ಲೆಯ ಸಿಂಧಗಿ ಕ್ಷೇತ್ರದ ಉಪ ಚುನಾವಣೆ ಮತ ಎಣಿಕೆ ಇಂದು ನಡೀಯಿತು. ಬೆಳಗ್ಗೆ 8 ಗಂಟೆಗೆ ಆರಂಭವಾದ […]Read More
ಬೆಂಗಳೂರು: ಸ್ಯಾಂಡಲ್ವುಡ್ನ ಪವರ್ ಸ್ಟಾರ್ ಪುನೀತ್ ರಾಜ್ಕುಮಾರ್ (46)ಹೃದಯಾಘಾತದಿಂದ ಅಕಾಲಿಕವಾಗಿ ಮೃತಪಟ್ಟಿದ್ದು, ಕನ್ನಡ ಚಿತ್ರರಂಗಕ್ಕೆ ಬರ ಸಿಡಿಲು ಬಡಿದಂತಾಗಿದೆ.ಇಂದು ಬೆಳಗ್ಗೆ ಜಿಮ್ನಲ್ಲಿ ಕಸರತ್ತು ನಡೆಸುತ್ತಿದ್ದಾಗ ಅಸ್ವಸ್ಥರಾದ ಪುನೀತ್ರಾಜ್ಕುಮಾರ್ ಅವರನ್ನು ತಕ್ಷಣವೇ ರಮಣಶ್ರೀ ಕ್ಲೀನಿಕ್ಗೆ ಸೇರಿಸಲಾಯಿತು. ಅವರಿಗೆ ಅಲ್ಲಿ ಪ್ರಥಮ ಚಿಕಿತ್ಸೆ ಕೊಡಿಸಿ ನಂತರ ಹೆಚ್ಚಿನ ಚಿಕಿತ್ಸೆಗಾಗಿ ವಿಕ್ರಂ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅಲ್ಲಿ ತುರ್ತು ಚಿಕಿತ್ಸೆ ನೀಡಿದ ಹೊರತಾಗಿಯೂ ಫಲಿಸದೆ, ಹೃದಯಾಘಾತದಿಂದ ಪುನೀತ್ರಾಜ್ಕುಮಾರ್ ಮೃತಪಟ್ಟಿದ್ದಾರೆ ಎಂದು ಘೋಷಿಸಲಾಗಿದೆ. 1975ರ ಮಾರ್ಚ್ 17ರಂದು ಕನ್ನಡದ ಮೇರುನಟ ಡಾ.ರಾಜ್ಕುಮಾರ್ ಮತ್ತು ಪಾರ್ವತಮ್ಮ […]Read More
ಮಹಾತ್ಮಾ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆ ರೈತರಿಗೆ ಅನುಕೂಲವಾಗಿದ್ದು, ಯೋಜನೆ ಸದ್ಬಳಿಕೆ ಮಾಡಿಕೊಳ್ಳಲು ಮಾಲೂರು ತಾಲ್ಲೂಕು IEC ಸಂಯೋಜನರಾದ ಆನಂದ್ ಸಿ ಕರೆ ನೀಡಿದರು. ಮಾಲೂರು ತಾಲ್ಲೂಕು ರಾಜೇನಹಳ್ಳಿ ಗ್ರಾಮ ಪಂಚಾಯತಿಯ ದೊಡ್ಡ ಇಗ್ಗಲೂರು ಗ್ರಾಮದಲ್ಲಿ ರೋಜ್ಗಾರ್ ದಿನಾಚರಣೆ ಹಮ್ಮಿಕೊಳ್ಳಲಾಗಿತ್ತು. ಈ ವೇಳೆ ಮಾತಾನಡಿದ ಅವರು , ಉದ್ಯೋಗ ಖಾತರಿ ಯೋಜನೆಯಡಿ ಕಾರ್ಮಿಕರಿ ಉದ್ಯೋಗ ಕೊಡುವಷ್ಟೇ ಅಲ್ಲದೆ ರೈತರಿಗೂ ಸಾಕಷ್ಟು ಯೋಜನೆಗಳನ್ನು ಜಾರಿಗೆ ತರಲಾಗಿದೆ. ನರೇಗಾದಡಿ, ಕೃಷಿ, ತೋಟಗಾರಿಕೆ, ಅರಣ್ಯ ಇಲಾಖೆ ಸಹಯೋಗದೊಂದಿಗೆ ವೈಯುಕ್ತಿಕ […]Read More
ಬೆಂಗಳೂರು: ಕೆಲ ದಿನಗಳಿಂದ ರಾಜ್ಯದಲ್ಲಿ ಕ್ಷೀಣಿಸಿದ ಕೊರೋನಾ ಮಹಾಮಾರಿ ಈಗ ಮತ್ತೆ ಹೆಚ್ಚಗುತ್ತಿದೆ. ಕೆಲ ದಿನಗಳಿಂದ 200-300ರ ಸುಪಾಸಿನಲ್ಲಿ ಕೊರೋನಾ ಸೋಂಕಿತರ ಸಂಖ್ಯೆ ಇಂದು ಹೆಚ್ಚಾಗಿದೆ. ರಾಜ್ಯದಲ್ಲಿ ಇಂದು ಹೊಸದಾಗಿ 462 ಜನರಿಗೆ ಸೋಂಕು ತಗುಲಿದ್ದು, 9 ಮಂದಿ ಸೋಂಕಿತರು ಮೃತಪಟ್ಟಿದ್ದಾರೆ. ಇದರೊಂದಿಗೆ ಒಟ್ಟು ಸೋಂಕಿತರ ಸಂಖ್ಯೆ 29,84,484 ಕ್ಕೆ ಏರಿಕೆಯಾಗಿದ್ದು, ಇದುವರೆಗೆ 37,976 ಜನರು ಮೃತಪಟ್ಟಿದ್ದಾರೆ. 29,37,405 ಜನ ಗುಣಮುಖರಾಗಿದ್ದಾರೆ. 9074 ಸಕ್ರಿಯ ಪ್ರಕರಣಗಳು ಇವೆ. ಪಾಸಿಟಿವಿಟಿ ದರ ಶೇಕಡ 0.39 ರಷ್ಟು ಇದೆ. ರಾಜಧಾನಿ ಬೆಂಗಳೂರಿನಲ್ಲಿ ಹೊಸದಾಗಿ […]Read More
ಮೈಸೂರು: ಮೈಸೂರು ಎಂದರೆ ತಟ್ಟನೆ ನಮ್ಮ ಕಣ್ಣು ಮುಂದೆ ಬರೋದು ವಿಶ್ವವಿಖ್ಯಾತ ಅರಮನೆ. ಇಡೀ ವೀಶ್ವದ ಪ್ರವಾಸಿಗರನ್ನು ತನ್ನ ಕೈಬಿಸಿ ಕರೆಯುತ್ತೆ ಈ ಅರಮನೆಯ ಸೊಬಗು. ಆದರೆ ಈ ಅರಮನೆಯ ಅಂದ, ಗಾಂಭೀರ್ತಯೆನ್ನು ಇಮ್ಮಡಿಗೊಳಿಸಿರುವುದು ಇಲ್ಲಿನ ಚಿನ್ನದ ಸಿಂಹಾಸನ ಹಾಗೂ ಅದರ ವಾಸ್ತು ವಿನ್ಯಾಸ. ಹಲವು ಶತಮಾನಗಳಿಂದ ಮೈಸೂರು ರಾಜ, ಮಹಾರಾಜರು ಅಲಂಕರಿಸಿರುವ ಈ ರತ್ನಖಚಿತ ಸಿಂಹಾಸನದ ಇತಿಹಾಸ ಅತ್ಯಂತ ರೋಚಕ.ಈ ರತ್ನ ಸಿಂಹಾಸನ ಯಾವಾಗಲೂ ನೋಡಲು ಜನಸಾಮಾನ್ಯರಿಗೆ ಸಿಗುವುದಿಲ್ಲ. ದಸರಾ ಸಂದರ್ಭದಲ್ಲಿ ಮಾತ್ರ ದರ್ಶನ ಭಾಗ್ಯ […]Read More