3ನೇ ಟೆಸ್ಟ್ ಪಂದ್ಯದಲ್ಲಿ ಭಾರತಕ್ಕೆ ಹೀನಾಯ ಸೋಲು; ಇನ್ನಿಂಗ್ಸ್ ಹಾಗೂ 76 ರನ್ ಅಂತರದ ಭರ್ಜರಿ ಗೆಲುವು ದಾಖಲಿಸಿದ ಇಂಗ್ಲೆಂಡ್

ಲೀಡ್ಸ್: ಭಾರತ ಮತ್ತು ಇಂಗ್ಲೆಂಡ್ ನಡುವಿನ ತೃತೀಯ ಟೆಸ್ಟ್ ಪಂದ್ಯದಲ್ಲಿ ಟೀಮ್ ಇಂಡಿಯಾ ಹೀನಾಯ ಸೋಲನುಭವಿಸಿದ್ದು, ಆತಿಥೇಯ ಇಂಗ್ಲೆಂಡ್ ತಂಡ ಇನ್ನಿಂಗ್ಸ್ ಸಹಿತ 76 ರನ್ ಳ ಭರ್ಜರಿ ಗೆಲುವು ದಾಖಲಿಸಿ ದೆ. ಇದರಿಂದಾಗಿ ಐದು ಪಂದ್ಯಗಳ ಟೆಸ್ಟ್ ಸರಣಿ 1-1ರಿಂದ ಸಮಬಲಗೊಂಡಿದೆ.
ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡಿದ್ದ ಭಾರತ ಆರಂಭಿಕ ಇನ್ನಿಂಗ್ಸ್‌ನಲ್ಲಿ ಅತ್ಯಂತ ಕಳಪೆ ಬ್ಯಾಟಿಂಗ್ ಪ್ರದರ್ಶಿಸಿತ್ತು. ಭಾರತೀಯ ಬ್ಯಾಟ್ಸ್‌ಮನ್ ಗಳು 20ಕ್ಕೂ ಅಧಿಕ ರನ್ ಗಳಿಸಲು ಸಾಧ್ಯವಾಗಲಿಲ್ಲ. ಆರಂಭಿಕ ಇನ್ನಿಂಗ್ಸ್‌ನಲ್ಲಿ ರೋಹಿತ್ ಶರ್ಮಾ 19, ಅಜಿಂಕ್ಯ ರಹಾನೆ 18. ಉಳಿದಂತೆ ಎಲ್ಲರೂ 10ರೊಳಗಿನ ರನ್‌ಗೆ ಇನ್ನಿಂಗ್ಸ್ ಮುಗಿಸಿದ್ದರು. ಕೆಎಲ್ ರಾಹುಲ್ 0, ಚೇತೇಶ್ವರ ಪೂಜಾರ 1, ವಿರಾಟ್ ಕೊಹ್ಲಿ 7, ಅಜಿಂಕ್ಯ ರಹಾನೆ 18, ರಿಷಭ್ ಪಂತ್ 2, ರವೀಂದ್ರ ಜಡೇಜಾ 4, ಮೊಹಮ್ಮದ್ ಶಮಿ 0, ಇಶಾಂತ್ ಶರ್ಮಾ 8, ಜಸ್ಪ್ರೀತ್ ಬೂಮ್ರಾ ೦, ಮೊಹಮ್ಮದ್ ಸಿರಾಜ್ 3 ರನ್‌ನೊಂದಿಗೆ ಭಾರತ 40.4 ಓವರ್‌ಗೆ ಎಲ್ಲಾ ವಿಕೆಟ್ ಕಳೆದು 78 ರನ್ ಗಳಿಸಿತ್ತು. ಇಂಗ್ಲೆಂಡ್ ಬೌಲರ್‌ಗಳಾದ ಜೇಮ್ಸ್ ಆಯಂಡರ್ಸನ್ 6 ರನ್‌ಗೆ 3, ಕ್ರೆಗ್ ಓವರ್‌ಟನ್ 14 ರನ್‌ಗೆ 3, ಆಲಿ ರಾಬಿನ್ಸನ್ 2, ಸ್ಯಾಮ್ ಕರನ್ 2 ವಿಕೆಟ್ ಪಡೆದು ಭಾರತದ ಆಟಗಾರರನ್ನು ಕಟ್ಟಿಹಾಕಿದರು.
ಭಾರತದ 78 ರನ್ ಗಳ ಬೆನ್ನುಹತ್ತಿದ ಇಂಗ್ಲೆಂಡ್ ಮೊಲದ ಇನ್ನಿಂಗ್ಸ್ ನಲ್ಲಿ ಭರ್ಜರಿ ಮುನ್ನಡೆ ಗಳಿಸಿತ್ತು. ರೋರಿ ಬರ್ನ್ಸ್ 61, ಹಸೀಬ್ ಹಮೀದ್ 68, ಡೇವಿಡ್ ಮಲನ್ 70, ಜೋ ರೂಟ್ 121, ಜಾನಿ ಬೈರ್‌ಸ್ಟೊ 29, ಸ್ಯಾಮ್ ಕರನ್ 15, ಕ್ರೇಗ್ ಓವರ್‌ಟನ್ 32 ರನ್ ನೊಂದಿಗೆ 132.2 ಓವರ್‌ಗೆ ಎಲ್ಲಾ ವಿಕೆಟ್ ಕಳೆದು 432 ರನ್ ಬಾರಿಸಿತ್ತು. ಈ ಮೂಲಕ ಇಂಗ್ಲೆಂಡ್ ಮೊಲದ ಇನ್ನಿಂಗ್ಸ್ ನಲ್ಲಿ 354 ರನ್ ಮುನ್ನಡೆ ಸಾಧಿಸಿತ್ತು.
ದ್ವಿತೀಯ ಇನ್ನಿಂಗ್ಸ್‌ನಲ್ಲೂ ಕಳಪೆ ಪ್ರದರ್ಶನ
ಮೊದಲ ಇನ್ನಿಂಗ್ಸ್‌ನಲ್ಲಿ ನೀರಸ ಬ್ಯಾಟಿಂಗ್ ತೋರಿದ್ದ ಭಾರತ, ದ್ವಿತೀಯ ಇನ್ನಿಂಗ್ಸ್‌ನಲ್ಲಿ ಹೆಚ್ಚಿನ ಹೋರಾಟ ತೋರಲಿಲ್ಲ. ರೋಹಿತ್ ಶರ್ಮಾ 59, ಚೇತೇಶ್ವರ ಪೂಜಾರ 91, ವಿರಾಟ್ ಕೊಹ್ಲಿ 55 ರನ್ ಮೂಲಕ ಚೇತರಿಕೆ ಪ್ರದರ್ಶನ ನೀಡಿದರೂ, ಉಳಿದ ಆಟಗಾರರ ವೈಫಲ್ಯ ಮುಂದುವರೆಯಿತು. ಅಂತಿಮವಾಗಿ ಭಾರತ 99.3 ಓವರ್‌ಗೆ ಎಲ್ಲಾ ವಿಕೆಟ್ ಕಳೆದು 278 ರನ್ ಗಳಿಸಿತು. ಈ ಮೂಲಕ ಭಾರತ ವಿರುದ್ಧ ನಡೆದ ಮೂರನೇ ಟೆಸ್ಟ್ ಪಂದ್ಯದಲ್ಲಿ ಇಂಗ್ಲೆಂಡ್ ಇನ್ನಿಂಗ್ಸ್ ಹಾಗೂ 76 ರನ್ ಅಂತರದ ಭರ್ಜರಿ ಗೆಲುವು ದಾಖಲಿಸಿದೆ.