ಸಾವಿತ್ರಿಬಾಯಿ ಫುಲೆ ಜನ್ಮ ದಿನಾಚರಣೆ: ಐವರು ಶಿಕ್ಷಕಿಯರಿಗೆ ಸೇವಾ ಸಾಧಕಿ ಪ್ರಶಸ್ತಿ

 ಸಾವಿತ್ರಿಬಾಯಿ ಫುಲೆ ಜನ್ಮ ದಿನಾಚರಣೆ: ಐವರು ಶಿಕ್ಷಕಿಯರಿಗೆ ಸೇವಾ ಸಾಧಕಿ ಪ್ರಶಸ್ತಿ

ನಂಜನಗೂಡು:, ಮಹಿಳೆಯರು ತಮ್ಮದೇ ಅಸ್ತಿತ್ವ ಕಟ್ಟಿಕೊಳ್ಳಲು ಸಾವಿತ್ರಿ ಬಾಯಿಫುಲೆ ಶಿಕ್ಷಕಿಯರ ಸಂಘ ಸಹಕಾರಿಯಾಗಿದೆ ಎಂದು ಸಂಘದ ಜಿಲ್ಲಾ ಘಟಕದ ಅಧ್ಯಕ್ಷೆ ಸರಸ್ವತಿ ಹೇಳಿದರು. ಪಟ್ಟಣದ ರಾಜ್ಯ ಸರ್ಕಾರಿ ನೌಕರರ ಭವನದಲ್ಲಿ ಸಂಘದ ತಾಲೂಕು ಘಟಕದ ವತಿಯಿಂದ ಹಮ್ಮಿಕೊಂಡಿದ್ದ ಸಾವಿತ್ರಿಬಾಯಿ ಫುಲೆ ಜನ್ಮದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಸಂಘವು ಸಾಂಸ್ಕೃತಿಕ, ಶೈಕ್ಷಣಿಕ ಹಾಗೂ ಸಾಮಾಜಿಕವಾಗಿ ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದೆ.

, ಸಾವಿತ್ರಿ ಬಾಯಿಫುಲೆ ಶಿಕ್ಷಕಿಯರ ಸಂಘದ ರಾಜ್ಯದ ಮೊದಲ ಮಹಿಳಾ ಶಿಕ್ಷಕಿಯರ ಸಂಘವಾಗಿದ್ದು, ತನ್ನ ಉದ್ದೇಶಿತ ಯೋಜನೆಯ ಈಡೇರಿಕೆಗೆ ನಿರಂತರ ಚಟುವಟಿಕೆ ನಡೆಸುತ್ತಿದೆ ಎಂದು ತಿಳಿಸಿದರು. ಇನ್ನೂ ಕಾರ್ಯಕ್ರಮದಲ್ಲಿ ತಾಲೂಕಿನಲ್ಲಿ ಉತ್ತಮವಾಗಿ ಸೇವೆ ಸಲ್ಲಿಸಿದ ಶಿಕ್ಷಕಿಯರಾದ ಯಶೋಧಾ, ಗಾಯತ್ರಿ, ಶಾಂತಮ್ಮ, ಉಮಾಮಹೇಶ್ವರಿ ಮತ್ತು ರತ್ನಮ್ಮ ಅವರಿಗೆ ತಾಲೂಕು ಮಟ್ಟದ ಸಾವಿತ್ರಿಬಾಯಿ ಫುಲೆ ಸೇವಾ ಸಾಧಕಿ ಪ್ರಶಸ್ತಿ ಪ್ರದಾನ ಹಾಗೂ ರಾಜ್ಯ ಮಟ್ಟದ ಸಾವಿತ್ರಿಬಾಯಿ ಫುಲೆ ವಿಚಾರ ಮಂಥನ ಸ್ಪರ್ಧೆಯಲ್ಲಿ ಭಾಗವಹಿಸಿದ್ದ ಶಿಕ್ಷಕಿಯರನ್ನು ಗೌರವಿಸಲಾಯಿತು.

ಮೈಸೂರಿನ ನಟರಾಜ ಕಾಲೇಜು ಉಪನ್ಯಾಸಕಿ ಪೂರ್ಣಿಮಾ ಹಿಂದಿನ, ಈಗಿನ ಶಿಕ್ಷಣ ವ್ಯವಸ್ಥೆ, ನೂತನ ರಾಷ್ಟ್ರೀಯ ಶಿಕ್ಷಣ ನೀತಿಗಳ ಬಗ್ಗೆ ಸವಿವರವಾಗಿ ತಿಳಿಸಿಕೊಟ್ಟರು. ಕಾರ್ಯಕ್ರಮದಲ್ಲಿ ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸೆಲ್ವಿಯಾ, ತಾಲೂಕು ಘಟಕದ ಅಧ್ಯಕ್ಷೆ ಸರಸ್ವತಿ, ಪ್ರಧಾನ ಕಾರ್ಯದರ್ಶಿ ಶೋಭಾ, ಖಜಾಂಚಿ ಚಂದ್ರಕಲಾ, ಪದಾಧಿಕಾರಿಗಳಾದ ಎಚ್.ಎನ್. ಮಂಜುಳಾ, ಎಚ್.ಸಿ. ಸುಮಿತ್ರಾ ಮತ್ತಿತರರು ಹಾಜರಿದ್ದರು.