ಸಮಾಜವಾದಿ ವ್ಯವಸ್ಥೆಯಿಂದ ಕಾರ್ಮಿಕರ ಸಮಸ್ಯೆಗೆ ಪರಿಹಾರ

ತುಮಕೂರು:ಜನ ವಿರೋಧಿ ಬಂಡವಾಳಶಾಹಿ ವ್ಯವಸ್ಥೆ ತೊಲಗಿ ಕಾರ್ಮಿಕ ವರ್ಗದ ಸಮಾಜವಾದಿ ಬರಲಿ ಎನ್ನುವ ಘೋಷಣೆಯೊಂದಿಗೆ ವಿವಿಧ ಸಂಘಟನೆಗಳ ಕಾರ್ಮಿಕರು ತಿಪಟೂರು ನಗರಸಭೆಯಿಂದ ದೊಡ್ಡಪೇಟೆ ಮಾರ್ಗವಾಗಿ ಎಪಿಎಂಸಿ ಆವರಣದಲ್ಲಿರುವ ಶ್ರಮಿಕ ಭವನದವರೆಗೆ ಮೆರವಣಿಗೆಯ ಮೂಲಕ ಸಾಗಿ ವಿಶ್ವ ಕಾರ್ಮಿಕರ ದಿನಾಚರಣೆಯ ಮಹತ್ವವನ್ನು ಸಾರಿದ್ದರು. ಶ್ರಮಿಕ ಭವನದಲ್ಲಿ ಸಭೆ ಸೇರಿದ ಕಾರ್ಮಿಕರು, ಕಾರ್ಮಿಕ ದಿನಾಚರಣೆಯನ್ನು ಆಚರಿಸಿದರು..ಪ
ಈ ಸಭೆಯಲ್ಲಿ ಹಾಜರಿದ್ದ AITUC ಮುಖಂಡರಾದ ಗೋವಿಂದ ರಾಜು ಅವರ ಮಾತನಾಡಿ, ದುಡಿಯುವ ವರ್ಗದ ಐಕ್ಯತೆಯನ್ನು ಸಾಧಿಸುವ ಮೂಲಕ ತಮ್ಮ ಹಕ್ಕುಗಳನ್ನು ಪ್ರತಿಷ್ಠಾಪಿಸಿ ಬೇಕು ಎಂದು ಕರೆ ನೀಡಿದರು.
ಕಾರ್ಮಿಕರ ಒಗ್ಗಟ್ಟಿನ ಹೋರಾಟ ಮತ್ತು ತ್ಯಾಗ ಬಲಿದಾನದಿಂದ ಪಡೆದ ಹಕ್ಕುಗಳನ್ನು, ನಮ್ಮನ್ನಾಳುವ ಸರ್ಕಾರಗಳು ಕಾರ್ಮಿಕ ವರ್ಗದ ಹಕ್ಕುಗಳನ್ನು ಕಸಿದುಕೊಳ್ಳುವ ಹುನ್ನಾರಗಳು ಬರೀ ನಮ್ಮ ದೇಶದಲ್ಲಾ ಮತ್ತು ವಿದೇಶಗಳಲ್ಲೂ ಜಾರಿಗೆ ತರಲು ಸತತವಾಗಿ ಕುತಂತ್ರಗಳು ನಡೆಯುತ್ತಿವೆ. ಆದ್ದರಿಂದ ವಿಶ್ವದ ಕಾರ್ಮಿಕರು ಒಂದಾಗುವ ಮೂಲಕ ಇದನ್ನು ಹಿಮ್ಮೆಟ್ಟಿಸಬೇಕು ಎಂದರು. ಈ ಸಂದರ್ಭದಲ್ಲಿ ಹಾಜರಿದ್ದ AIUTUC ಸಂಯೋಜಿತ ಆಶಾ ಕಾರ್ಯಕರ್ತೆಯರ ಸಂಘದ ಎಂ. ವಿ. ಕಲ್ಯಾಣಿಯವರು ಮಾತನಾಡಿ, ಎಲ್ಲಾ ಪಕ್ಷಗಳ ಸರ್ಕಾರಗಳು ಬಂಡವಾಳಿಗರ ಪರ ನೀತಿಗಳನ್ನು ಜಾರಿಗೆ ತಂದಿದ್ದಾರೆ. ಈ ನೀತಿಗಳ ವಿರುದ್ಧ ಕಾರ್ಮಿಕರು ಐಕ್ಯತೆಯಿಂದ ಹೋರಾಡಿದಗ ಮಾತ್ರ ಗೆಲುವು ಸಾಧ್ಯ ಎಂದರು.
ಈ ಸಭೆಯಲ್ಲಿ AIKKMS (RKS)ನ ಲೋಕೇಶ್ ಭೈರನಾಯ್ಕನಹಳ್ಳಿ, ಗೋಪಿನಾಥ್, ಪ್ರಶಾಂತ್ ಹಾಲ್ಕುರಿಕೆ, ಕರ್ನಾಟಕ ರಾಜ್ಯ ರೈತ ಸಂಘದ ತಿಮ್ಮಲಾಪುರ ದೇವರಾಜ್, ತಿಮ್ಮೇಗೌಡ ಟೈಲರ್ ಯೂನಿಯನ್ ಶಿವಣ್ಣ, ಜಗದೀಶ್, ಹಮಾಲಿ ಸಂಘದ ಅಧ್ಯಕ್ಷರು ಮಂಜುನಾಥ್, ಕಾರ್ಯದರ್ಶಿ ನಿಂಗರಾಜ್, ಅಲೆಮಾರಿ ಸಂಘದ ಜಯಲಕ್ಷ್ಮಮ್ಮ, INTUC ಸರ್ವೇಶ್ ಮತ್ತು ಕಾರ್ಮಿಕ ಸಂಘಟನೆಗಳು ಕಾರ್ಮಿಕ ಬಂಧುಗಳು ಹಾಜರಿದ್ದರು.