ಸಂಗೂಳ್ಳಿ ರಾಯಣ್ಣ ಜನ್ಮದಿನ ರಾಜ್ಯಾದ್ಯಂತ ಆಚರಣೆಗೆ ಸರ್ಕಾರ ಆದೇಶ: ಸಿಎಂಗೆ ಕಾಗಿನೆಲೆ ಮಠದ ಶ್ರೀಗಳ ಅಭಿನಂದನೆ

 ಸಂಗೂಳ್ಳಿ ರಾಯಣ್ಣ ಜನ್ಮದಿನ ರಾಜ್ಯಾದ್ಯಂತ ಆಚರಣೆಗೆ  ಸರ್ಕಾರ ಆದೇಶ: ಸಿಎಂಗೆ ಕಾಗಿನೆಲೆ ಮಠದ ಶ್ರೀಗಳ ಅಭಿನಂದನೆ

ಬೆಂಗಳೂರು : ಆಗಸ್ಟ್ 15 ರಂದು ಕ್ರಾಂತಿವೀರ ಸಂಗೂಳ್ಳಿ ರಾಯಣ್ಣ ಜನ್ಮದಿನ ಹಾಗೂ ಜನವರಿ 26 ರಂದು ಹತಾತ್ಮ ದಿನ ಆಚರಣೆಗೆ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ. ಈ ಸಂಬಂಧ ಸಿಎಂ ಬಸವರಾಜ್ ಬೊಮ್ಮಾಯಿ ಸರ್ಕಾರ ಆದೇಶ ಹೊರಡಿಸಿದೆ.  ಆಗಸ್ಟ್ 15 ರಂದು ಬ್ರಿಟಿಷರ ವಿರುದ್ಧ ಹೋರಾಟ ಮಾಡಿದ್ದ ಕ್ರಾಂತಿವೀರ ಸಂಗೂಳ್ಳಿರಾಯಣ್ಣ ಜನ್ಮದಿನ ಹಾಗೂ ಹುತಾತ್ಮರಾದ ಜನವರಿ 26 ರಂದು, ಜಿಲ್ಲಾಮಟ್ಟದಲ್ಲಿ ಕಾರ್ಯಕ್ರಮ ಹಮ್ಮಿಕೊಂಡು ಗೌರವ ಸಲ್ಲಿಸುವಂತೆ ಸೂಚಿಸಲಾಗಿದೆ.

ಸರ್ಕಾರದ ನಿರ್ಧಾರ ಸ್ವಾಗತಿಸಿರುವ ಕಾಗಿನೆಲೆ ಮಠದ ಜಗದ್ಗುರುಗಳಾದ ಶ್ರೀ  ನಿರಂಜನಾನಂದಪುರಿ  ಮಹಾಸ್ವಾಮಿಜಿಗಳು, ಮುಖ್ಯಮಂತ್ರಿಗಳಿಗೆ  ಹಾಗೂ ಸಮಸ್ತ ಸಚಿವ ಸಂಪುಟಕ್ಕೆ ಅಭಿನಂದನೆಗಳನ್ನು ಸಲ್ಲಿಸಿದ್ದಾರೆ. ಇನ್ನೂ ಸಚಿವ ಈಶ್ವರಪ್ಪ, ಬಸವರಾಜ್ ಬೊಮ್ಮಾಯಿ ನೇತೃತ್ವದ  ಸರ್ಕಾರ  ಐತಿಹಾಸಿಕ ನಿರ್ಧಾರ ಮಾಡಿದೆ  ಎಂದು ಬಣ್ಣಿಸಿದ್ದಾರೆ.