ಶಿವಾರ್ಚಕ ಸಂಘದಿಂದ ಅರ್ಜಿ ಆಹ್ವಾನ

 ಶಿವಾರ್ಚಕ ಸಂಘದಿಂದ ಅರ್ಜಿ ಆಹ್ವಾನ

ಮೈಸೂರು: ನಗರದ ಆದಿಚುಂಚನಗಿರಿ ರಸ್ತೆಯಲ್ಲಿರುವ (ಹೊಸ ನ್ಯಾಯಾಲಯದ ರಸ್ತೆ) ಶಿವಾರ್ಚಕ ಸಂಘದ ಉಚಿತ ವಿದ್ಯಾರ್ಥಿ ನಿಲಯಕ್ಕೆ ಶಿವಾರ್ಚಕ ಸಮಾಜದ ವಿದ್ಯಾರ್ಥಿಗಳಿಂದ 2022-23ನೇ ಸಾಲಿಗೆ ಅರ್ಜಿ ಆಹ್ವಾನಿಸಲಾಗಿದೆ.
ಸಂಸ್ಕೃತಾಭ್ಯಾಸ, ಪದವಿ (ಬಿಎಸ್ಸಿ, ಎಂಎಸ್ಸಿ, ಬಿಇ, ಎಂ.ಟೆಕ್, ಎಂಬಿಬಿಎಸ್), ತಾಂತ್ರಿಕ ಮತ್ತು ವೈದ್ಯಕೀಯ ಕಾಲೇಜುಗಳಲ್ಲಿ ವ್ಯಾಸಾಂಗ ಮಾಡುತ್ತಿರುವ ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದೆ. ಭರ್ತಿ ಮಾಡಿದ ಅರ್ಜಿಯೊಂದಿಗೆ ಕಾಲೇಜು ದೃಢೀಕರಣ, ಜಾತಿ ಪ್ರಮಾಣ ಪತ್ರ, ಎರಡು ಭಾವಚಿತ್ರ ಸೇರಿದಂತೆ ಅಗತ್ಯ ದಾಖಲೆಗಳನ್ನು ಜೂ.30ರೊಳಗೆ ಸಲ್ಲಿಸತಕ್ಕದ್ದು. ಹೆಚ್ಚಿನ ಮಾಹಿತಿಗೆ ಕಾರ್ಯದರ್ಶಿ ಪ್ರದೀಪ್ ಮೊ: 74113 09217, ಸೋಮಣ್ಣ ಎಂ. ಮೊ: 98451 71426, ಅವಿನಾಶ್ ಮೊ: 99018 81799 ಸಂಪರ್ಕಿಸುವಂತೆ ಪ್ರಕಟಣೆ ತಿಳಿಸಿದೆ.