ವಿಶ್ವವನ್ನು ಕಂಗೆಡಿದ ರೂಪಾಂತರಿ ಕೊರೋನಾ: ಒಮಿಕ್ರೋನ್ ಸೋಂಕು ತಡೆಗೆ ಪ್ರಧಾನಿ ಸೂಚನೆ

ನವದೆಹಲಿ: ವಿಶ್ವವನ್ನೇ ಕಂಗೆಡಿಸಿರುವ ರೂಪಾಂತರಿ ಕೊರೋನಾ ಒಮಿಕ್ರೋನ್ ತಡೆಗೆ ಸೂಕ್ತ ಕ್ರಮ ವಹಿಸುವಂತೆ ಪ್ರಧಾನಿ ನರೇಂದ್ರ ಮೋದಿ ಸೂಚನೆ ನೀಡಿದ್ದಾರೆ. ಒಮಿಕ್ರೋನ್ ಸೋಂಕು ಉಲ್ಬಣಿಸುತ್ತಿದ್ದು, ವಿಶ್ವಾದ್ಯಂತ ಸಾಕಷ್ಟು ಆತಂಕ ಸೃಷ್ಟಿಸಿದೆ. ಈ ಸಂಬಂಧ ಉನ್ನತ ಮಟ್ಟದ ಅಧಿಕಾರಿಗಳ ಜೊತೆ ತುರ್ತು ಸಭೆ ನಡೆಸಿದ ಪ್ರಧಾನಿ, ಒಮಿಕ್ರೋನ್ ರೂಪಾಂತರಿ ಕುರಿತು ಎಚ್ಚರಿಕೆಯಿಂದಿರಲು ಪ್ರಧಾನಿ ಮೋದಿ ಸೂಚನೆ ನೀಡಿದ್ದಾರೆ.
ಒಮಿಕ್ರೋನ್ ರೂಪಾಂತರಿಯನ್ನು ಆರಂಭದಿಂದಲೇ ಕಟ್ಟಿಹಾಕಬೇಕು ಎಂದು ನರೇಂದ್ರ ಮೋದಿ ಸಲಹೆ ನೀಡಿದ್ದಾರೆ. ಹೊಸ ರೂಪಾಂತರ ಸೋಂಕಿನ ಗುಣಲಕ್ಷಣಗಳ ಬಗ್ಗೆ ಮಾಹಿತಿ ಪಡೆದು ಪ್ರಧಾನಿಗಳು, ವಿದೇಶಗಳಿಂದ ಬರುವ ಪ್ರಯಾಣಿಕರ ಮೇಲೆ ತೀವ್ರ ನಿಗಾ ವಹಿಸುವಂತೆ ಸೂಚನೆ ನೀಡಿದ್ದಾರೆ. ಈ ನಿಟ್ಟಿನಲ್ಲಿ ಯಾವ ದೇಶದಲ್ಲಿ ಹೆಚ್ಚು ಪ್ರಕರಣಗಳಿವೆ ಎಂಬುದನ್ನು ಮೊದಲು ತಿಳಿದುಕೊಳ್ಳಬೇಕಾಗಿದೆ ಎಂದಿದ್ದಾರೆ. ಅಲ್ಲದೆ ಆ ದೇಶಗಳಿಂದ ಬರುವ ವಿಮಾನಗಳಿಗೆ ನಿರ್ಬಂಧ ವಿಧಿಸುವ ಕುರಿತು ಚರ್ಚೆ ನಡೆದಿದೆ ಎನ್ನಲಾಗಿದೆ.
ಒಮಿಕ್ರೋನ್ ಕಾಲಿಲಟ್ಟರೆ ಮತ್ತೆ ಭಾರಿ ಅನಾವುತಗಳು ಆಗಬಹುದು ಎಂಬ ಆತಂಕವನ್ನು ತಜ್ಞರು ವ್ಯಕ್ತ ಪಡಿಸಿದ್ದಾರೆ. ಒಮಿಕ್ರೋನ್ ರೋಗ ಲಕ್ಷಣಗಳನ್ನು ತೋರಿಸದೆ ಏಕಾಏಕಿ ಆವರಿಸಿಕೊಳ್ಳಲಿದ್ದು, ಅದನ್ನು ಗುರುತಿಸುವ ವೇಳೆಗೆ ಅಪಾಯಕಾರಿ ಮಟ್ಟ ತಲುಪಿರುತ್ತದೆ. ಪ್ರಯೋಗಾಲಯ ಪರೀಕ್ಷೆಯಲ್ಲಿ ಮಾತ್ರ ಸೋಂಕನ್ನು ನಿಖರವಾಗಿ ಗುರುತಿಸಲು ಸಾಧ್ಯ ಎಂದು ಅದರ ತವರೂರು ದಕ್ಷಿಣ ಆಫ್ರಿಕಾದ ತಜ್ಞರು ಹೇಳಿದ್ದಾರೆ. ಹೀಗಾಗಿ ಭಾರತದಲ್ಲಿ ತಕ್ಷಣದಿಂದಲೇ ಕೋವಿಡ್ ಶಿಷ್ಟಾಚಾರಗಳನ್ನು ಕಟ್ಟು ನಿಟ್ಟಾಗಿ ಪಾಲಿಸಲು ಸೂಚಿಸಿದ್ದಾರೆ.