Warning: array_intersect(): Expected parameter 2 to be an array, null given in /home/u327821803/domains/todayexpress.in/public_html/wp-content/plugins/page-or-post-clone/page-or-post-clone.php on line 123

Warning: include_once(/home/u327821803/domains/todayexpress.in/public_html/wp-includes/header.php): failed to open stream: No such file or directory in /home/u327821803/domains/todayexpress.in/public_html/wp-config.php on line 91

Warning: include_once(): Failed opening '/home/u327821803/domains/todayexpress.in/public_html/wp-includes/header.php' for inclusion (include_path='.:/opt/alt/php74/usr/share/pear') in /home/u327821803/domains/todayexpress.in/public_html/wp-config.php on line 91
ವಿತ್ತೀಯ ಕೊರತೆ, ಬಜೆಟ್ ಸಮತೋಲನಕ್ಕಿಂತ ಸರ್ಕಾರ ಹೆಚ್ಚು ಮುಕ್ತ-ಖರ್ಚು ನೀತಿಗಳತ್ತ ಗಮನ ಹರಿಸಲಿ: ಅಭಿಜಿತ್ ಬ್ಯಾನರ್ಜಿ – Today Express

ವಿತ್ತೀಯ ಕೊರತೆ, ಬಜೆಟ್ ಸಮತೋಲನಕ್ಕಿಂತ ಸರ್ಕಾರ ಹೆಚ್ಚು ಮುಕ್ತ-ಖರ್ಚು ನೀತಿಗಳತ್ತ ಗಮನ ಹರಿಸಲಿ: ಅಭಿಜಿತ್ ಬ್ಯಾನರ್ಜಿ

ವಿತ್ತೀಯ ಕೊರತೆ ಹಾಗೂ ಬಜೆಟ್ ನಡುವೆ ಸಮತೋಲನಕ್ಕೆ ಹೆಚ್ಚು ಕಾಳಜಿ ವಹಿಸುವುದರ ಬದಲು ಯುರೋಪ್ ಹಾಗೂ ಅಮೆರಿಕದ ಮಾದರಿಯಲ್ಲಿ ಮುಕ್ತ-ಖರ್ಚು ನೀತಿಗಳತ್ತ ಭಾರತ ಸರ್ಕಾರ ಹೆಚ್ಚು ಗಮನ ಹರಿಸಬೇಕೆಂದು ಅರ್ಥಶಾಸ್ತ್ರಜ್ಞ ಅಭಿಜಿತ್ ವಿನಾಯಕ್ ಬ್ಯಾನರ್ಜಿ ಅಭಿಪ್ರಾಯಪಟ್ಟಿದ್ದಾರೆ. 

ವಿತ್ತೀಯ ಕೊರತೆ ಹಾಗೂ ಬಜೆಟ್ ನಡುವೆ ಸಮತೋಲನಕ್ಕೆ ಹೆಚ್ಚು ಕಾಳಜಿ ವಹಿಸುವುದರ ಬದಲು ಯುರೋಪ್ ಹಾಗೂ ಅಮೆರಿಕದ ಮಾದರಿಯಲ್ಲಿ ಮುಕ್ತ-ಖರ್ಚು ನೀತಿಗಳತ್ತ ಭಾರತ ಸರ್ಕಾರ ಹೆಚ್ಚು ಗಮನ ಹರಿಸಬೇಕೆಂದು ನೊಬೆಲ್ ಪ್ರಶಸ್ತಿ ಪುರಸ್ಕೃತ ಅರ್ಥಶಾಸ್ತ್ರಜ್ಞ ಅಭಿಜಿತ್ ವಿನಾಯಕ್ ಬ್ಯಾನರ್ಜಿ ಅಭಿಪ್ರಾಯಪಟ್ಟಿದ್ದಾರೆ. 

ಪಶ್ಚಿಮ ಬಂಗಾಳದ ಜಾಗತಿಕ ಸಲಹಾ ಸಮಿತಿ (ಜಿಎಬಿ) ಮುಖ್ಯಸ್ಥರೂ ಆಗಿರುವ ಅಭಿಜಿತ್ ವಿನಾಯಕ್ ಬ್ಯಾನರ್ಜಿ, ರಾಜ್ಯದ ಆರ್ಥಿಕತೆ ಉತ್ತೇಜಿಸುವುದು ದೇಶದ ಆರ್ಥಿಕತೆಯ ಪುನರುಜ್ಜೀವನಕ್ಕೆ ನೇರವಾಗಿ ಸಂಬಂಧಿಸಿದೆ ಎಂದು ಹೇಳಿದ್ದಾರೆ. 

ಈ ಸಾಂಕ್ರಾಮಿಕದ ಸಂದರ್ಭದಲ್ಲಿ ಕೇಂದ್ರ ಸರ್ಕಾರ ವಿತ್ತೀಯ ಸಮಸ್ಯೆ ಎದುರಿಸುತ್ತಿದೆ. ಮುಕ್ತ ಖರ್ಚು ನೀತಿಗಿಂತಲೂ ಬಜೆಟ್ ನ ಸಮತೋಲನದ ಬಗ್ಗೆ ಹೆಚ್ಚು ಗಮನ ಹರಿಸುತ್ತಿದೆ. ಆರ್ಥಿಕತೆ ನಿಧಾನಗತಿಯಲ್ಲಿರುವುದರಿಂದ ಇತರ ರೂಪದ ತೆರಿಗೆ ಸಂಗ್ರಹ ವೇಗ ಕಳೆದುಕೊಂಡಿದ್ದು ಸರ್ಕಾರ ಬಜೆಟ್ ಬ್ಯಾಲೆನ್ಸ್ ಮಾಡಲು ಈ ಅಸ್ತ್ರ ಪ್ರಯೋಗಿಸಲು ಯತ್ನಿಸುತ್ತಿದೆ ಎಂದು ಕೇಂದ್ರ ಸರ್ಕಾರ ವಿವಿಧ ಸರಕುಗಳ ಮೆಲಿನ ಸೆಸ್ ನ್ನು ಹೆಚ್ಚಿಸಲು ನಿರ್ಧರಿಸಿರುವುದರ ಬಗ್ಗೆ ಕೇಳಿದ ಪ್ರಶ್ನೆಗೆ ಅಭಿಜಿತ್ ಪ್ರತಿಕ್ರಿಯೆ ನೀಡಿದ್ದಾರೆ. 

ಆದರೆ ಸರ್ಕಾರ ನಡೆಯಬೇಕಾದ ಮಾರ್ಗ ಇದಲ್ಲ ಎಂದು ಬ್ಯಾನರ್ಜಿ ಅಭಿಪ್ರಾಯಪಟ್ಟಿದ್ದಾರೆ. ಸರ್ಕಾರ ಮುಕ್ತವಾಗಿ ಖರ್ಚು ಮಾಡುವ ನೀತಿಗಳನ್ನು ಹೆಚ್ಚು ಅಳವಡಿಸಿಕೊಳ್ಳಬೇಕು ಎಂದು ಹಲವು ಬಾರಿ ಹೇಳಿದ್ದೇನೆ. ಆದರೆ ಯುಎಸ್ ಯುರೋಪಿಯನ್ ಆರ್ಥಿಕತೆಗಳ ಮಾದರಿಯ ನೀತಿಗಳನ್ನು ಅಳವಡಿಸಿಕೊಳ್ಳಲು ಸರ್ಕಾರ ತೀರಾ ಹಿಂಜರಿಯುತ್ತಿತ್ತು ಎಂದು ಬ್ಯಾನರ್ಜಿ ಹೇಳಿದ್ದಾರೆ. ಆದರೆ ಇತ್ತೀಚಿನ ದಿನಗಳಲ್ಲಿ ಸರ್ಕಾರ ಈ ನಿಟ್ಟಿನಲ್ಲಿ ಹೆಜ್ಜೆ ಇಡುತ್ತಿರುವುದಕ್ಕೆ ಬ್ಯಾನರ್ಜಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. 

“ಹೆಚ್ಚು ಇಂಧನ ದರಗಳಿಂದಾಗಿ ಹಣದುಬ್ಬರ ಏರಿಕೆಯಾಗಿದೆ. ಆದರೆ ಸರ್ಕಾರ ಇತ್ತೀಚಿನ ದಿನಗಳಲ್ಲಿ ಮುಕ್ತವಾಗಿ ಖರ್ಚು ಮಾಡುವ ನಿಟ್ಟಿನಲ್ಲಿ ಹಲವು ಕ್ರಮಗಳನ್ನು ಕೈಗೊಂಡಿದ್ದು, ಹಲವು ಸಡಿಲಿಕೆಗಳನ್ನು ಘೋಷಿಸಿದೆ. ವಿತ್ತೀಯ ಕೊರತೆಗೆ ಕಡಿಮೆ ಜಾಗರೂಕವಾಗಿರುವುದು ಸರಿಯಾದ ಕಾರ್ಯತಂತ್ರ” ಎಂದು ನೊಬೆಲ್ ಪ್ರಶಸ್ತಿ ಪುರಸ್ಕೃತರು ಹೇಳಿದ್ದಾರೆ.