Warning: array_intersect(): Expected parameter 2 to be an array, null given in /home/u327821803/domains/todayexpress.in/public_html/wp-content/plugins/page-or-post-clone/page-or-post-clone.php on line 123

Warning: include_once(/home/u327821803/domains/todayexpress.in/public_html/wp-includes/header.php): failed to open stream: No such file or directory in /home/u327821803/domains/todayexpress.in/public_html/wp-config.php on line 91

Warning: include_once(): Failed opening '/home/u327821803/domains/todayexpress.in/public_html/wp-includes/header.php' for inclusion (include_path='.:/opt/alt/php74/usr/share/pear') in /home/u327821803/domains/todayexpress.in/public_html/wp-config.php on line 91
ರೈತರಿಗೆ ನೆರವಾಗಲಿದೆ ನರೇಗಾ ಯೋಜನೆ; ವೈಯಕ್ತಿಕ ಕಾಮಗಾರಿಗಳಿಗೆ ಬೇಡಿಕೆ ಸಲ್ಲಿಸಲು ಸೂಚನೆ – Today Express

ರೈತರಿಗೆ ನೆರವಾಗಲಿದೆ ನರೇಗಾ ಯೋಜನೆ; ವೈಯಕ್ತಿಕ ಕಾಮಗಾರಿಗಳಿಗೆ ಬೇಡಿಕೆ ಸಲ್ಲಿಸಲು ಸೂಚನೆ

 ರೈತರಿಗೆ ನೆರವಾಗಲಿದೆ ನರೇಗಾ ಯೋಜನೆ; ವೈಯಕ್ತಿಕ ಕಾಮಗಾರಿಗಳಿಗೆ ಬೇಡಿಕೆ ಸಲ್ಲಿಸಲು ಸೂಚನೆ

ಮಹಾತ್ಮಾ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆ ರೈತರಿಗೆ ಅನುಕೂಲವಾಗಿದ್ದು, ಯೋಜನೆ ಸದ್ಬಳಿಕೆ ಮಾಡಿಕೊಳ್ಳಲು ಮಾಲೂರು ತಾಲ್ಲೂಕು IEC ಸಂಯೋಜನರಾದ ಆನಂದ್ ಸಿ ಕರೆ ನೀಡಿದರು. ಮಾಲೂರು ತಾಲ್ಲೂಕು ರಾಜೇನಹಳ್ಳಿ ಗ್ರಾಮ ಪಂಚಾಯತಿಯ ದೊಡ್ಡ ಇಗ್ಗಲೂರು ಗ್ರಾಮದಲ್ಲಿ ರೋಜ್ಗಾರ್ ದಿನಾಚರಣೆ ಹಮ್ಮಿಕೊಳ್ಳಲಾಗಿತ್ತು. ಈ ವೇಳೆ ಮಾತಾನಡಿದ ಅವರು , ಉದ್ಯೋಗ ಖಾತರಿ ಯೋಜನೆಯಡಿ ಕಾರ್ಮಿಕರಿ ಉದ್ಯೋಗ ಕೊಡುವಷ್ಟೇ ಅಲ್ಲದೆ ರೈತರಿಗೂ ಸಾಕಷ್ಟು ಯೋಜನೆಗಳನ್ನು ಜಾರಿಗೆ ತರಲಾಗಿದೆ. ನರೇಗಾದಡಿ, ಕೃಷಿ, ತೋಟಗಾರಿಕೆ, ಅರಣ್ಯ ಇಲಾಖೆ ಸಹಯೋಗದೊಂದಿಗೆ ವೈಯುಕ್ತಿಕ ಕಾಮಗಾರಿಗಳು ಕೈಗೊಳ್ಳಲು ಅವಕಾಶ ನೀಡಲಾಗಿದೆ. ಬಹುವಾರ್ಷಿಕ ಬೆಳೆಗಳಾದ ಮಾವು, ಸಪೋಟ, ಬಾಳೆ, ತೆಂಗು, ನುಗ್ಗೆ, ನೇರಳೆ, ಸೀತಾಫಲ, ಸೇಬು, ಗುಲಾಬಿ, ಮಲ್ಲಿಗೆ, ನಿಂಬೆ, ದಾಳಿಂಬೆ ಮುಂತಾದ ಬೆಳೆಗಳಿಗೆ ಸಹಾಯಧನವನ್ನು ನೀಡಲಾಗುದು. ಅಲ್ಲದೆ ಅರಣ್ಯ ಇಲಾಖೆ ಸಹಯೋಗದೊಂದಿಗೆ ಹೆಬ್ಬೆವು, ಶ್ರೀಗಂಧದ, ಟೀಕ್, ಮಹಾಗನಿ, ರಕ್ತಚಂದನ, ಮುಂತಾದ ಬೆಳೆಗಳನ್ನು ಬೆಳೆಯಲು ಸಹಾಯಧನ ಸಿಗಲಿದೆ ಎಂದು ಮಾಹಿತಿ ನೀಡಿದರು. ಇನ್ನು ಜಾನುವಾರು ಶೆಡ್, ಬಚ್ಚಲುಗುಂಡಿ, ರೈತ ಬಂಧು ಅಭಿಯಾನದಡಿ ಎರೆಹುಳ ಗೊಬ್ಬರ ಗುಂಡಿ ನಿರ್ಮಾಣಕ್ಕೆ ನೆರವು ನೀಡಲಾಗುದು ಎಂದು ಹೇಳಿದರು. ಈ ಎಲ್ಲ ಯೋಜನೆಗಳ ಸದ್ಬಳಿಕೆ‌ ಮಾಡಿಕೊಂಡು ರೈತರು ಆರ್ಥಿಕವಾಗಿ ಸಬಲರಾಗಬಹದು. ಗ್ರಾಮ ಜನರ ಆರ್ಥಿಕ ಬೆಳವಣಿಗೆ ದೇಶದ ಬೆಳವಣಿಗೆ, ಹೀಗಾಗಿ ನಿಮಗೆ ಅಗತ್ಯವಾದ ಯೋಜನೆಯನ್ನು ಆಯ್ಕ ಮಾಡಿಕೊಂಡು ಗ್ರಾಮ ಪಂಚಾಯತಿಗೆ ಬೇಡಿಕೆ ಸಲ್ಲಿಸಲು ಸೂಚಿಸಿದರು. ಈ ವೇಳೆ ಪಂಚಾಯತಿ ಸದಸ್ಯರು, ಪಂಚಾಯತಿ ಕರ ವಸೂಲಿಗಾರ ಚೇತನ್, ಕಾಯಕಮಿತ್ರ ಕವಿತಾ ಸೇರಿದಂತೆ ಗ್ರಾಮಸ್ಥರು ಭಾಗಿಯಾಗಿದ್ದರು.