ರಾಜ್ಯದಲ್ಲಿ ಮತ್ತೆ ‘ಕೊರೋನಾ’ ಉಲ್ಬಣ: ಇಂದು 707 ಜನರಿಗೆ ಸೋಂಕು, ಮೂವರು ಸಾವು

 ರಾಜ್ಯದಲ್ಲಿ ಮತ್ತೆ ‘ಕೊರೋನಾ’ ಉಲ್ಬಣ: ಇಂದು 707 ಜನರಿಗೆ ಸೋಂಕು, ಮೂವರು ಸಾವು

ಬೆಂಗಳೂರು: ರಾಜ್ಯದಲ್ಲಿ ಮತ್ತೆ ಕೊರೋನಾ ಸ್ಪೋಟಗೊಂಡಿದೆ. ಇಂದು ಹೊಸದಾಗಿ 707 ಜನರಿಗೆ ಕೋವಿಡ್ ಪಾಸಿಟಿವ್ ದೃಢಪಟ್ಟಿದ್ದು, ಸೋಂಕಿನಿಂದ ಮೂವರು ಸಾವನ್ನಪ್ಪಿದ್ದಾರೆ.

ಈ ಬಗ್ಗೆ ರಾಜ್ಯ ಆರೋಗ್ಯ ಇಲಾಖೆ ಮಾಹಿತಿ ಬಿಡುಗಡೆ ಮಾಡಿದ್ದು, ಬೆಂಗಳೂರು ನಗರದಲ್ಲಿ 565, ದಕ್ಷಿಣ ಕನ್ನಡ 11, ಹಾಸನ 17, ಕೊಡಗು 12, ಮೈಸೂರು 16, ಉಡುಪಿ 19 ಸೇರಿದಂತೆ ರಾಜ್ಯಾಧ್ಯಂತ 707 ಜನರಿಗೆ ಕೋವಿಡ್ ಪಾಸಿಟಿವ್ ಎಂಬುದಾಗಿ ದೃಢಪಟ್ಟಿದೆ. ಇದರಿಂದಾಗಿ ಸೋಂಕಿತರ ಸಂಖ್ಯೆ 3006505ಗೆ ಏರಿಕೆಯಾಗಿದೆ.

ಇಂದು 252 ಸೇರಿದಂತೆ ಇದುವರೆಗೆ 2959926 ಸೋಂಕಿತರು ಗುಣಮುಖರಾಗಿದ್ದಾರೆ. ಹೀಗಾಗಿ ರಾಜ್ಯದಲ್ಲಿ ಈಗ 8223 ಸಕ್ರೀಯ ಸೋಂಕಿತರು ಇರುವುದಾಗಿ ತಿಳಿಸಿದೆ. ಬೆಂಗಳೂರು ನಗರದಲ್ಲಿ ಸೋಂಕಿತರಾದಂತ ಮೂವರು ಸಾವನ್ನಪ್ಪಿದ ಕಾರಣ, ಕಿಲ್ಲರ್ ಕೊರೋನಾಗೆ ಬಲಿಯಾದವರ ಸಂಖ್ಯೆ 38327ಕ್ಕೆ ಏರಿಕೆಯಾಗಿದೆ. ಇದೇ ವೇಳೆ ಬಾಗಲಕೋಟೆ, ಬೀದರ್, ಚಿಕ್ಕಬಳ್ಳಾಪುರ, ಹಾವೇರಿ, ಕೊಪ್ಪಳ, ರಾಯಚೂರು ಮತ್ತು ರಾಮನಗರ ಜಿಲ್ಲೆಯಲ್ಲಿ ಶೂನ್ಯ ಪ್ರಕರಣಗಳು ವರದಿಯಾಗಿವೆ.