ರಾಜ್ಯದಲ್ಲಿ ಕೊರೋನಾ ನಾಗಾಲೋಟ! ಇಂದು 12 ಸಾವಿರ ಜನರಿಗೆ ಕೋವಿಡ್!

 ರಾಜ್ಯದಲ್ಲಿ ಕೊರೋನಾ ನಾಗಾಲೋಟ! ಇಂದು 12 ಸಾವಿರ ಜನರಿಗೆ ಕೋವಿಡ್!

 

ಬೆಂಗಳೂರು: ಮಹಾಮಾರಿ ಕೊರೋನಾ ವೈರಸ್ ಇಂದು ಸಹ ರಾಜ್ಯದಲ್ಲಿ  ಬ್ಲಾಸ್ಟ್ ಆಗಿದೆ.. ಬೆಂಗಳೂರಿನಲ್ಲಿ ಹೊಸದಾಗಿ 9020 ಸೇರಿದಂತೆ ರಾಜ್ಯಾಧ್ಯಂತ 12 ಸಾವಿರ ಜನರಿಗೆ ಕೊರೋನಾ ಪಾಸಿಟಿವ್ ಎಂಬುದಾಗಿ ದೃಢಪಟ್ಟಿದೆ.
ಈ ಕುರಿತಂತೆ ಟ್ವಿಟ್ಟರ್ ನಲ್ಲಿ ಮಾಹಿತಿ ನೀಡಿರುವಂತ ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್  ಅವರು, ಕಳೆದ 24 ಗಂಟೆಯಲ್ಲಿ 1,89,499 ಜನರನ್ನು ಕೊರೋನಾ ಸೋಂಕು ಪತ್ತೆ ಪರೀಕ್ಷೆಗೆ ಒಳಪಡಿಸಲಾಗಿದೆ.ಇವರಲ್ಲಿ ಬೆಂಗಳೂರಿನಲ್ಲಿ 9,020 ಸೇರಿದಂತೆ ರಾಜ್ಯದಲ್ಲಿ 12 ಸಾವಿರ ಜನರಿಗೆ ಕೋವಿಡ್ ಹೊಸದಾಗಿ ದೃಢಪಟ್ಟಿದೆ ಎಂದು  ತಿಳಿಸಿದ್ದಾರೆ.
ಕಳೆದ 24 ಗಂಟೆಯಲ್ಲಿ ಸೋಂಕಿನಿಂದಾಗಿ ಬೆಂಗಳೂರಿನಲ್ಲಿ ಇಬ್ಬರು ಸೇರಿದಂತೆ ನಾಲ್ವರು ಸಾವನ್ನಪ್ಪಿದ್ದಾರೆ. ಇಂದು 12 ಸಾವಿರ ಕೇಸ್ ಪತ್ತೆಯಾದ್ದು, ರಾಜ್ಯದಲ್ಲಿ ಸಕ್ರೀಯ ಸೋಂಕಿತರ ಸಂಖ್ಯೆ 49,602ಕ್ಕೆ ಏರಿಕೆಯಾಗಿದೆ. ಇವರಲ್ಲಿ ಬೆಂಗಳೂರಿನಲ್ಲಿಯೇ 40 ಸಾವಿರ ಸಕ್ರೀಯ ಸೋಂಕಿತರಿದ್ದಾರೆ. ಇನ್ನೂ ಇಂದು ಸೋಂಕಿತರಾದಂತ 901 ಜನರು ಗುಣಮುಖರಾಗಿದ್ದಾರೆ. ಕೊರೋನಾ ಪಾಸಿಟಿವಿಟಿ ದರ ಶೇ.6.33ಕ್ಕೆ ಏರಿಕೆಯಾಗಿದೆ ಎಂಬುದಾಗಿ ತಿಳಿಸಿದ್ದಾರೆ.