ರಾಜ್ಯದಲ್ಲಿ ಇಂದು 1,229 ಜನರಿಗೆ ಕೋವಿಡ್ ಸೋಂಕು: 13 ಮಂದಿ ಸಾವು

 ರಾಜ್ಯದಲ್ಲಿ ಇಂದು 1,229 ಜನರಿಗೆ ಕೋವಿಡ್ ಸೋಂಕು: 13 ಮಂದಿ ಸಾವು

ಬೆಂಗಳೂರು :  ರಾಜ್ಯದಲ್ಲಿ ಇಂದು ಹೊಸದಾಗಿ 1229 ಜನರಿಗೆ ಕೊರೊನಾ ಸೋಂಕು ತಗುಲಿದ್ದು, 13 ಜನ ಸೋಂಕಿತರು ಸಾವನ್ನಪ್ಪಿದ್ದಾರೆ. ಇವತ್ತು 1,83,642 ಪರೀಕ್ಷೆ ನಡೆಸಲಾಗಿದೆ. 1289 ಜನ ಗುಣಮುಖರಾಗಿ ಬಿಡುಗಡೆಯಾಗಿದ್ದಾರೆ. 18,897 ಸಕ್ರಿಯ ಪ್ರಕರಣಗಳು ಇವೆ.

ರಾಜಧಾನಿ ಬೆಂಗಳೂರಿನಲ್ಲಿ ಇಂದು 310 ಜನರಿಗೆ ಸೋಂಕು ತಗುಲಿದ್ದು, 329 ಜನ ಗುಣಮುಖರಾಗಿ ಬಿಡುಗಡೆಯಾಗಿದ್ದಾರೆ. ಇವತ್ತು ಬೆಂಗಳೂರಿನಲ್ಲಿ ಯಾವುದೇ ಸೋಂಕಿತರು ಮೃತಪಟ್ಟಿಲ್ಲ. 7322 ಸಕ್ರಿಯ ಪ್ರಕರಣಗಳು ಇವೆ.

ಈ ಕುರಿತಂತೆ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಡಾ.ಕೆ.ಸುಧಾಕರ್ ಟ್ವಿಟ್ಟರ್ ನಲ್ಲಿ ಮಾಹಿತಿ ಹಂಚಿಕೊಂಡಿದ್ದು, ಕಳೆದ 24 ಗಂಟೆಯಲ್ಲಿ 1,83,642 ಜನರನ್ನು ಕೊರೋನಾ ಪರೀಕ್ಷೆಗೆ ಒಳಪಡಿಸಲಾಗಿದೆ.  ರಾಜ್ಯದಲ್ಲಿ ಇಂದು ಕೊರೋನಾ ಸೋಂಕಿನ ಪ್ರಕರಣಗಳು ಸಂಖ್ಯೆ ಹಾಗೂ ಸಾವಿನ ಸಂಖ್ಯೆಯಲ್ಲಿ ಮತ್ತಷ್ಟು ಕಡಿಮೆ ಆಗಿದೆ. ಅದರಲ್ಲೂ ಬೆಂಗಳೂರಿನಲ್ಲಿ ಇಂದು ಶೂನ್ಯ ಸಾವಿನ ಪ್ರಕರಣಗಳು ವರದಿಯಾಗಿವೆ.

ಜಿಲ್ಲಾವಾರು ಸೋಂಕಿತರ ವಿವರ

ಬೆಂಗಳೂರು 310, ದಕ್ಷಿಣಕನ್ನಡ 207, ಹಾಸನ 103, ಕೊಡಗು 75, ಮೈಸೂರು 82, ಶಿವಮೊಗ್ಗ 42, ತುಮಕೂರು 44, ಉಡುಪಿ 146, ಉತ್ತರಕನ್ನಡ 42 ಪ್ರಕರಣ ವರದಿಯಾಗಿದೆ. ಚಾಮರಾಜನಗರ 7, ಚಿಕ್ಕಬಳ್ಳಾಪುರ 4, ಧಾರವಾಡ 7, ಗದಗ 2, ಹಾವೇರಿ 3, ಕಲಬುರ್ಗಿ 2, ಕೊಪ್ಪಳ 2, ರಾಮನಗರ 3, ವಿಜಯಪುರ 1, ಯಾದಗಿರಿ 0, ಬಾಗಲಕೋಟೆ 0, ಬಳ್ಳಾರಿ 5,ರಾಯಚೂರು 0, ಬೀದರ್ 0, ಪ್ರಕರಣ ವರದಿಯಾಗಿದೆ.

ಮೃತಪಟ್ಟವರ ಸಂಖ್ಯೆ

ಬೆಂಗಳೂರು ಗ್ರಾಮಾಂತರ 1. ಚಾಮರಾಜನಗರ 1. ದಕ್ಷಿಣಕನ್ನಡ 5, ಹಾಸನ 2, ಹಾವೇರಿ 1, ಕೋಲಾರ 1, ಶಿವಮೊಗ್ಗ 1, ಉಡುಪಿ 1 ಸೇರಿ ರಾಜ್ಯದಲ್ಲಿ ಇಂದು 13 ಸೋಂಕಿತರು ಮೃತಪಟ್ಟಿದ್ದಾರೆ.