ರಾಜ್ಯದಲ್ಲಿ ಇಂದು 1189 ಹೊಸ ಕೋವಿಡ್ ಪ್ರಕರಣ; 1456 ಸೋಂಕಿತರು ಗುಣಮುಖ
ಬೆಂಗಳೂರು: ರಾಜ್ಯದಲ್ಲಿ ಕೋವಿಡ್-19 ಸೋಂಕಿನ ಪ್ರಮಾಣ ಇಂದು ಕೊಚ್ಚಮಟ್ಟಿಗೆ ಕಡಿಮೆಯಾಗಿದೆ. ಕಳೆದ 24 ಗಂಟೆಗಳ ಅವಧಿಯಲ್ಲಿ 1189 ಹೊಸ ಕೊರೋನಾ ಪ್ರಕರಣಗಳು ಪತ್ತೆಯಾಗಿದ್ದು, ಸೋಂಕಿನಿಂದ 22 ಜನರು ಸಾವನ್ನಪ್ಪಿದ್ದಾರೆ. ಕರ್ನಾಟಕ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಬಿಡುಗಡೆ ಮಾಡಿರುವ ಅಂಕಿ-ಅಂಶಗಳ ಪ್ರಕಾರ 1456 ಸೋಂಕಿತರು ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. ಈ ಮೂಲಕ ರಾಜ್ಯದಲ್ಲಿ ಇದುವರೆಗೆ ಸೋಂಕಿನಿಂದ ಗುಣಮುಖರಾದವರ ಸಂಖ್ಯೆ 28,80,889ಕ್ಕೆ ತಲುಪಿದೆ.
ಇನ್ನು ರಾಜ್ಯದಲ್ಲಿ ಸದ್ಯ 20,556 ಸಕ್ರಿಯ ಕೋವಿಡ್ ಪ್ರಕರಣಗಳು ಇದ್ದು, ಪಾಸಿಟಿವಿಟಿ ದರ 0.94 % ಹಾಗೂ ಡೆತ್ ರೇಟ್ 1.85 % ಇದೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 286 ಪ್ರಕರಣಗಳು ಪತ್ತೆಯಾಗಿದ್ದು, ರಾಜಧಾನಿ ಬೆಂಗಳೂರನ್ನು ಮೀರಿಸಿದೆ. ಬೆಂಗಳೂರಲ್ಲಿ ಇಂದು 267 ಕೇಸ್ ಗಳು ಪತ್ತೆಯಾಗಿದ್ದು, ಬಾಗಲಕೋಟೆ-4, ಬಳ್ಳಾರಿ-5, ಬೆಳಗಾವಿ -34, ಬೆಂಗಳೂರು ಗ್ರಾಮಾಂತರ-12, ಬೀದರ್-3, ಚಾಮರಾಜನಗರ-8, ಚಿಕ್ಕಬಳ್ಳಾಪುರ-1, ಚಿಕ್ಕಮಗಳೂರು-50, ಚಿತ್ರದುರ್ಗ-10, ದಾವಣಗೆರೆ-19, ಧಾರವಾಡ-4, ಗದಗ-2, ಹಾಸನ-75, ಹಾವೇರಿ-1,ಕಲಬುರಗಿ-0, ಕೊಡಗು-55, ಕೋಲಾರ-8, ಕೊಪ್ಪಳ-1, ಮಂಡ್ಯ-19, ಮೈಸೂರು-79, ರಾಯಚೂರು-1, ರಾಮನಗರ-5, ಶಿವಮೊಗ್ಗ-24, ತುಮಕೂರು-39, ಉಡುಪಿ-132, ಉತ್ತರ ಕನ್ನಡ-40, ವಿಜಯಪುರ-2, ಯಾದಗಿರಿ-3 ಪ್ರಕರಣಗಳು ಪತ್ತೆಯಾಗಿವೆ.