ರಾಜ್ಯದಲ್ಲಿ ಇಂದು ಹೆಚ್ಚಾದ ಕೊರೋನಾ: ಇಂದು ಒಂದೇ ದಿನ 462 ಜನರಿಗೆ ಸೋಂಕು

ಬೆಂಗಳೂರು: ಕೆಲ ದಿನಗಳಿಂದ ರಾಜ್ಯದಲ್ಲಿ ಕ್ಷೀಣಿಸಿದ ಕೊರೋನಾ ಮಹಾಮಾರಿ ಈಗ ಮತ್ತೆ ಹೆಚ್ಚಗುತ್ತಿದೆ. ಕೆಲ ದಿನಗಳಿಂದ 200-300ರ ಸುಪಾಸಿನಲ್ಲಿ ಕೊರೋನಾ ಸೋಂಕಿತರ ಸಂಖ್ಯೆ ಇಂದು ಹೆಚ್ಚಾಗಿದೆ. ರಾಜ್ಯದಲ್ಲಿ ಇಂದು ಹೊಸದಾಗಿ 462 ಜನರಿಗೆ ಸೋಂಕು ತಗುಲಿದ್ದು, 9 ಮಂದಿ ಸೋಂಕಿತರು ಮೃತಪಟ್ಟಿದ್ದಾರೆ. ಇದರೊಂದಿಗೆ ಒಟ್ಟು ಸೋಂಕಿತರ ಸಂಖ್ಯೆ 29,84,484 ಕ್ಕೆ ಏರಿಕೆಯಾಗಿದ್ದು, ಇದುವರೆಗೆ 37,976 ಜನರು ಮೃತಪಟ್ಟಿದ್ದಾರೆ. 29,37,405 ಜನ ಗುಣಮುಖರಾಗಿದ್ದಾರೆ. 9074 ಸಕ್ರಿಯ ಪ್ರಕರಣಗಳು ಇವೆ. ಪಾಸಿಟಿವಿಟಿ ದರ ಶೇಕಡ 0.39 ರಷ್ಟು ಇದೆ.
ರಾಜಧಾನಿ ಬೆಂಗಳೂರಿನಲ್ಲಿ ಹೊಸದಾಗಿ 253 ಜನರಿಗೆ ಸೋಂಕು ತಗುಲಿದ್ದು, 6 ಜನ ಮೃತಪಟ್ಟಿದ್ದಾರೆ. 263 ಜನ ಗುಣಮುಖರಾಗಿ ಬಿಡುಗಡೆಯಾಗಿದ್ದಾರೆ. 6760 ಸಕ್ರಿಯ ಪ್ರಕರಣಗಳು ಇವೆ. ಇನ್ನೂ ದಕ್ಷಿಣಕನ್ನಡ 29, ಮೈಸೂರು 43, ತುಮಕೂರು 32, ಬಳ್ಳಾರಿ 2, ಬಾಗಲಕೋಟೆ 0, ಬೀದರ್ 1, ಚಿಕ್ಕಬಳ್ಳಾಪುರ 1, ಚಿತ್ರದುರ್ಗ 1, ದಾವಣಗೆರೆ 1, ಧಾರವಾಡ 2, ಗದಗ 0, ಹಾವೇರಿ 0, ಕೊಪ್ಪಳ 1, ರಾಯಚೂರು 0, ರಾಮನಗರ 1, ಉತ್ತರಕನ್ನಡ 1, ವಿಜಯಪುರ 1, ಯಾದಗಿರಿ 1, ಪ್ರಕರಣ ವರದಿಯಾಗಿದೆ.
ಇದೇ ವೇಳೆ ಬೆಂಗಳೂರು ನಗರ 6, ಬಿದರ್ 1, ಧಾರವಾಡ 1, ಮೈಸೂರು 1 ಸೇರಿ ರಾಜ್ಯದಲ್ಲಿ 9 ಜನರು ಮೃತಪಟ್ಟಿದ್ದಾರೆ. ರಾಜ್ಯದಲ್ಲಿ ಇಂದು 479 ಜನ ಗುಣಮುಖರಾಗಿ ಬಿಡುಗಡೆಯಾಗಿದ್ದಾರೆ.