ಯಾವಾಗ ಬೇಕಾದರೂ ರಾಜ್ಯ ಬಿಜೆಪಿ ಸರ್ಕಾರ ಪತನ: ಸಿದ್ದು ಭವಿಷ್ಯ

ಬೆಂಗಳೂರು : ಯಾವ ಟೈಮ್ ನಲ್ಲಿ ಬೇಕಿದ್ರೂ ರಾಜ್ಯ ಬಿಜೆಪಿ ಸರ್ಕಾರ ಪತನವಾಗಬಹುದು ಎಂದು ಮಾಸಿ ಸಿಎಂ, ವಿಪಕ್ಷ ನಾಯಕ ಸಿದ್ದರಾಮಯ್ಯ ಭವಿಷ್ಯ ನುಡಿದಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿ ಸಿದ್ದರಾಮಯ್ಯ, ರಾಜ್ಯದಲ್ಲಿ ಬಸವರಾಜ ಬೊಮ್ಮಾಯಿ ನೇತೃತ್ವದ ಬಿಜೆಪಿ ಸರ್ಕಾರ ಯಾವಾಗ ಬೇಕಾದ್ರೂ ಬೀಳಬಹುದು. ರಾಜ್ಯ ಸರ್ಕಾರ ಅವಧಿ ಪೂರೈಸುವುದು ಡೌಟ್ ಆಗಿದೆ. ಈಗಾಗಲೇ ಹಲವು ಶಾಸಕರು ಬೊಮ್ಮಾಯಿ ಸರ್ಕಾರದ ವಿರುದ್ಧ ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ. ಹೀಗಾಗಿ ಯಾವದೇ ಸಮಯದಲ್ಲಿ ಬೇಕಿದ್ರೂ ರಾಜ್ಯ ಬಿಜೆಪಿ ಸರ್ಕಾರ ಪತನವಾಗಬಹುದು ಎಂದು ಹೇಳಿದ್ದಾರೆ.
ಕೊರೊನಾ ಸೋಂಕು ನಿಯಂತ್ರಣಕ್ಕೆ ಬರುವ ತನಕ ಶಾಲೆ ಆರಂಭ ಬೇಡ.
ರಾಜ್ಯದಲ್ಲಿ ಕೊರೊನಾ ವೈರಸ್ ಸೋಂಕು ನಿಯಂತ್ರಣಕ್ಕೆ ಬರುವ ತನಕ ಶಾಲೆಗಳನ್ನು ಆರಂಭಿಸುವುದು ಬೇಡ ಎಂದು ಸಿದ್ದರಾಮಯ್ಯ ಸರ್ಕಾರಕ್ಕೆ ಸಲಹೆ ನೀಡಿದ್ದಾರೆ. ಕೊಡಗು, ದಕ್ಷಿಣ ಕನ್ನಡ, ಮೈಸೂರು ಸೇರಿದಂತೆ ಗಡಿಭಾಗದ ಜಿಲ್ಲೆಗಳಲ್ಲಿ ಕೊರೊನಾ ನಿಯಂತ್ರಣಕ್ಕೆ ಕಠಿಣ ಕ್ರಮ ಕೈಗೊಳ್ಳಬೇಕು. ಕೊರೊನಾ 3 ನೇ ಅಲೆ ಬಾರದಂತೆ ನೋಡಿಕೊಳ್ಳವುದು ಸರ್ಕಾರದ ಜವಾಬ್ದಾರಿ. ವೀಕೆಂಡ್ ಲಾಕ್ ಡೌನ್ ಮಾಡಿದ್ರೆ ಸಾಲದು. ಇನ್ನೂ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು ಎಂದರು.
ವ್ಯಾಕ್ಸಿನ್ ಕೊಡುವ ಜವಾಬ್ದಾರಿ ರಾಜ್ಯ ಮತ್ತು ಕೇಂದ್ರ ಸರ್ಕಾರದ್ದು, ಗುಂಪು ಸೇರುವ ಕಾರ್ಯಕ್ರಮಗಳಿಗೆ ಸರ್ಕಾರ ಅನುಮತಿ ಕೊಡಬಾರದು. ಹಬ್ಬ ಜಾತ್ರೆ ಒಂದು ವರ್ಷ ಮಾಡದಿದ್ರೆ ಏನೂ ಆಗಲ್ಲ. ಗಣಪತಿಯನ್ನು ಮನೆಯಲ್ಲೇ ಕೂರಿಸಿ, ಮನೆಯಲ್ಲೇ ಹಬ್ಬ ಆಚರಿಸಿ ಎಂದರು. ಕೊರೊನಾ ಸೋಂಕು ಕಡಿಮೆ ಆದ್ರೆ ಮಾತ್ರ ಶಾಲೆಗಳನ್ನು ಆರಂಭಿಸಲಿ ಎಂದು ಹೇಳಿದ್ದಾರೆ.