ಮೈಸೂರು ಅರಮನೆ ಪ್ರವೇಶ ಶುಲ್ಕ ಹೆಚ್ಚಳ: ಅರಮನೆ ಮಂಡಳಿ ನಿರ್ಧಾರ

ಮೈಸೂರು: ಮೈಸೂರು ಅರಮನೆ ಪ್ರವೇಶ ಶುಲ್ಕವನ್ನು ಹೆಚ್ಚಿಸಲು ಅರಮನೆ ಮಂಡಳಿ ನಿರ್ಧರಿಸಿದೆ. ಅರಮನೆ ಪ್ರವೇಶ ಶುಲ್ಕವನ್ನು 70ರಿಂದ 100 ರೂ.ಗೆ ಹೆಚ್ಚಿಸಲಾಗಿದೆ. ವಾರಾಂತ್ಯ, ಸರ್ಕಾರಿ ರಜೆ ದಿನಗಳಲ್ಲಿಯೂ ಪ್ರವೇಶ ಶುಲ್ಕ 100 ರೂ. ಇರಲಿದೆ. ವಿದೇಶಿಗರಿಗೂ ಇಷ್ಟೇ ಶುಲ್ಕ ಅನ್ವಯವಾಗಲಿದೆ. 18 ವರ್ಷದೊಳಗಿನ ಮಕ್ಕಳಿಗೆ 50 ರೂ. ಶುಲ್ಕ ವಿಧಿಸಲಾಗಿದೆ.
ʻಕೋವಿಡ್‌ನಿಂದಾಗಿ ಕಳೆದ ಎರಡು ವರ್ಷಗಳಿಂದ ಆದಾಯಕ್ಕೆ ಹೊಡೆತ ಬಿದ್ದಿದೆ. ಪ್ರವಾಸಿಗರ ಸಂಖ್ಯೆಯೂ ಕ್ಷೀಣಿಸಿದೆ. ನಿರ್ವಹಣೆಗೆ ಪ್ರತಿ ತಿಂಗಳು 30 ಲಕ್ಷ ರೂ. ವೆಚ್ಚವಾಗುತ್ತದೆ. ಸಿಬ್ಬಂದಿ ವೇತನವನ್ನು ಮಂಡಳಿಯೇ ಭರಿಸಬೇಕಿದೆ. ಅರಮನೆ ದೀಪಾಲಂಕಾರ ಸೇರಿ ವಿದ್ಯುತ್ ದರವೇ ತಿಂಗಳಿಗೆ 10 ಲಕ್ಷ ರೂ. ಬರುತ್ತದೆ. ಆದರೆ, ಅರಮನೆಗೆ ಬರುತ್ತಿರುವ ವಾರ್ಷಿಕ ಆದಾಯ ತುಂಬಾ ಕಡಿಮೆ ಇದೆ ಎಂದು ಅರಮನೆ ಮಂಡಳಿ ಹೇಳಿದೆ. ಪರಿಷ್ಕೃತ ಅರಮನೆ ಪ್ರವೇಶ ಶುಲ್ಕ ನೋಡುವುದಾದರೆ, ವಯಸ್ಕರು: 100 ರೂ, ವಿದೇಶಿಗರು: 100 ರೂ. ಶಾಲಾ ಮಕ್ಕಳಿಗೆ ಹೊಸ ದರ 50 ರೂ. ನಿಗದಿಯಾಗಿದೆ. ಕನ್ನಡದ ಧ್ವನಿ ಮತ್ತು ಬೆಳಕು ಕಾರ್ಯಕ್ರಮದ ದರದಲ್ಲಿ ಯಾವುದೇ ಏರಿಕೆ ಇಲ್ಲ. ಇಂಗ್ಲಿಷ್ ಧ್ವನಿ ಮತ್ತು ಬೆಳಕು ಕಾರ್ಯಕ್ರಮದ ದರ 120 ರೂ. ಇದೆ