ಮಹಿಳೆಯರ 400 ಮೀಟರ್ ಹರ್ಡಲ್ಸ್; ಸಿಡ್ನಿ ಮೆಕ್ಲಾಫ್ಲಿನ್ ವಿಶ್ವ ದಾಖಲೆ
ಟೋಕಿಯೊ ಒಲಂಪಿಕ್ಸ್ ನಲ್ಲಿ ಬುಧವಾರ ನಡೆದ ಮಹಿಳೆಯರ 400 ಮೀಟರ್ ಹರ್ಡಲ್ಸ್ ನಲ್ಲಿ ಅಮೆರಿಕದ ಓಟಗಾರ್ತಿ ಸಿಡ್ನಿ ಮೆಕ್ಲಾಫ್ಲಿನ್ ತನ್ನ ಹಳೆಯ ವಿಶ್ವ ದಾಖಲೆಯನ್ನು ಮುರಿದರು.
ಟೋಕಿಯೊ ಒಲಂಪಿಕ್ಸ್ ನಲ್ಲಿ ಬುಧವಾರ ನಡೆದ ಮಹಿಳೆಯರ 400 ಮೀಟರ್ ಹರ್ಡಲ್ಸ್ ನಲ್ಲಿ ಅಮೆರಿಕದ ಓಟಗಾರ್ತಿ ಸಿಡ್ನಿ ಮೆಕ್ಲಾಫ್ಲಿನ್ ತನ್ನ ಹಳೆಯ ವಿಶ್ವ ದಾಖಲೆಯನ್ನು ಮುರಿದರು.
ಅವರು ಓಟವನ್ನು 51.40 ಸೆಕೆಂಡುಗಳಲ್ಲಿ ಮುಗಿಸುವ ಮೂಲಕ ಮೊದಲ ಒಲಿಂಪಿಕ್ ಚಿನ್ನದ ಪದಕವನ್ನು ಗೆದ್ದರು. ಅವರು ಸ್ವದೇಶಿ ಮತ್ತು ರಿಯೋ ಒಲಿಂಪಿಕ್ಸ್ 2016 ರ ಚಿನ್ನದ ಪದಕ ವಿಜೇತೆ ಡೆಲಿಲಾ ಮುಹಮ್ಮದ್ (51.58 ಸೆ.) ಬೆಳ್ಳಿ ಗೆದ್ದರೆ, ನೆದರ್ಲೆಂಡ್ಸ್ ನ ಫೆಮ್ಕೆ ಬೋಲ್ 52.03 ಸೆಕೆಂಡುಗಳಲ್ಲಿ ಕಂಚು ಗೆದ್ದರು.
21 ವರ್ಷದ ಸಿಡ್ನಿ, 2019 ರ ವಿಶ್ವ ಚಾಂಪಿಯನ್ ಶಿಪ್ ನಲ್ಲಿ ಬೆಳ್ಳಿ ಪದಕ ವಿಜೇತೆ, ಈ ಹಿಂದೆ ಜೂನ್ ನಲ್ಲಿ ನಡೆದ ಒಲಿಂಪಿಕ್ ಟ್ರಯಲ್ಸ್ ನಲ್ಲಿ 400 ಮೀಟರ್ ಹರ್ಡಲ್ಸ್ ಅನ್ನು 51.90 ಸೆಕೆಂಡುಗಳಲ್ಲಿ ಮುಗಿಸಿ ವಿಶ್ವ ದಾಖಲೆ ನಿರ್ಮಿಸಿದ್ದರು.
ಇಂದು ನಡೆದ ಒಲಿಂಪಿಕ್ ಫೈನಲ್ ನಲ್ಲಿ, ಅವರು 51.40 ಸೆಕೆಂಡುಗಳ ಹೊಸ ವಿಶ್ವ ದಾಖಲೆಯನ್ನು ಸ್ಥಾಪಿಸುವ ಮೂಲಕ ಒಂದು ಪ್ರಮುಖ ಮೈಲಿಗಲ್ಲನ್ನು ಸಾಧಿಸಿದರು.