ಮಹಿಳೆಯರು ನರೇಗಾ ಯೋಜನೆ ಸದುಪಯೋಗ ಪಡೆದುಕೊಳ್ಳಲು ತಾಲ್ಲೂಕ ಸಹಾಯಕ ನಿರ್ದೇಶಕರಾದ ರಾಘವೇಂದ್ರ ಕರೆ.

 ಮಹಿಳೆಯರು ನರೇಗಾ ಯೋಜನೆ ಸದುಪಯೋಗ ಪಡೆದುಕೊಳ್ಳಲು ತಾಲ್ಲೂಕ ಸಹಾಯಕ ನಿರ್ದೇಶಕರಾದ ರಾಘವೇಂದ್ರ ಕರೆ.

ಕೋಲಾರ: ಮಾಲೂರು ತಾಲ್ಲೂಕು ದೊಡ್ಡಿ ಗ್ರಾಮ ಪಂಚಾಯತಿಯ ಅಹನ್ಯ ಗ್ರಾಮದಲ್ಲಿ ಇಂದು ತಾಲ್ಲೂಕು  ಸಹಾಯಕ ನಿರ್ದೇಶಕರಾದ ಬಿ.ಎಂ.ರಾಘವೇಂದ್ರ ರವರ ನೇತೃತ್ವದಲ್ಲಿ ರೋಜ್ಗಾರ್ ದಿನಾಚರಣೆ ಹಾಗೂ ಮಹಿಳಾ ಕಾಯಕೋತ್ಸವ ಹಮ್ಮಿಕೊಳ್ಳಲಾಗಿತ್ತು. ಡಿ.ಎನ್ ದೊಡ್ಡಿ ಗ್ರಾಮ ಪಂಚಾಯತಿಯಲ್ಲಿ ನರೇಗಾ ಯೋಜನೆಯಡಿಯಲ್ಲಿ ಮಹಿಳೆಯರ ಭಾಗವಹಿಸುವಿಕೆ ಕಡಿಮೆ ಇದೆ. ನರೇಗಾ ಯೋಜನೆಯಡಿಯಲ್ಲಿ ಮಹಿಳೆಯರು ಹಾಗೂ ಪುರಷರಿಗೆ ಸಮಾನ ಕೂಲಿ ರೂ 289 ನೀಡಲಾಗುತ್ತಿದೆ, ನರೇಗಾದಲ್ಲಿ ಒಂದು ದಿನಕ್ಕೆ ನಿಗದಿಯಾದ ಪ್ರಮಾಣದ ಕೂಲಿ ಮಾಡಬೇಕಿದ್ದು, ಮಹಿಳೆಯರು ಹೆಚ್ಚು ಭಾಗಿಯಾಗಬೇಕು ಎಂದು ಸಹಾಯಕ ನಿರ್ದೇಶಕರಾದ ಬಿ.ಎಂ.ರಾಘವೇಂದ್ರರವರು ತಿಳಿಸಿದರು.

ಕೆಲಸ  ಕೇಳಿ ನಮೂನೆ 6ರಲ್ಲಿ ಬೇಡಿಕೆ ಸಲ್ಲಿಸಿದ 15 ದಿನದಲ್ಲಿ ಕೆಲಸ ನೀಡಲಾಗುವುದು, ಕೆಲಸ ನೀಡಲು ಗ್ರಾಮ ಪಂಚಾಯತಿ ವಿಫಲವಾದರೆ, ನಿರುದ್ಯೋಗ ಭತ್ಯೆ ನೀಡಬೇಕಾಗುತ್ತೆ ಎಂದು ಹೇಳಿದರು. ನರೇಗಾ ಯೋಜನೆಯಡಿಯಲ್ಲಿ ಹಲವಾರು ವೈಯಕ್ತಿಕ ಕಾಮಗಾರಿಗಳನ್ನು ಪಡೆದುಕೊಳ್ಳಲು ಅವಕಾಶ ನೀಡಲಾಗಿದೆ. ಇದರ ಸದುಪಯೋಗ ಪಡೆದುಕೊಳ್ಳಲು ಸೂಚಿಸಿದರು.

ಇದೇ ವೇಳೆ    ಕಾರ್ಯಕ್ರಮದಲ್ಲಿ ಮಾತನಾಡಿದ ತಾಲ್ಲೂಕು IEC ಸಂಯೋಜಕರಾದ ಆನಂದ್.ಸಿ ನರೇಗಾ ಯೋಜನೆಯಲ್ಲಿ ಒಂದು ಕುಟುಂಬಕ್ಕೆ ನೂರು ದಿನ ಉದ್ಯೋಗ ಖಾತರಿ ನೀಡಲಾಗಿದೆ.‌ ಕೂಲಿ‌ ಜೊತೆ ರೈತರು, ಭೂರಹಿತರು ವೈಯಕ್ತಿಕ ಕಾಮಗಾರಿಗಳನ್ನು ಕೈಗೊಳ್ಳಲು ಅವಕಾಶ ನೀಡಲಾಗಿದೆ. ಕೃಷಿ ಹೊಂಡ, ಬದು ನಿರ್ಮಾಣ, ಬಚ್ಚಲುಗುಂಡು, ಹಸುಶೆಡ್, ಕುರಿ,ಮೇಕೆ ಶೆಡ್ ನಿರ್ಮಾಣ ಸೇರಿದಂತೆ, ಬಹುವಾರ್ಷಿಕ ಬೆಳೆಗಳಿಗೆ ನರೇಗಾ ಯೋಜನೆಯಡಿಯಲ್ಲಿ ಅನುದಾನ ಸಿಗಲಿದೆ. ಅರಣ್ಯ ಇಲಾಖೆ, ಕೃಷಿ, ತೋಟಗಾರಿಕೆ ಇಲಾಖೆಗಳಿಂದ ರೈತರಿಗೆ ಹಲವು ಬೆಳೆಗಳಿಗೆ ನರೇಗಾ ಯೋಜನೆಯಡಿಯಲ್ಲಿ ಅನುದಾನ ಸಿಗಲಿದ್ದು,  ಇದರ ಸದುಪಯೋಗ ಪಡೆದುಕೊಳ್ಳು ತಿಳಿಸಿದರು. ಕಾರ್ಯಕ್ರಮದಲ್ಲಿ ಗ್ರಾಮ    ಪಂಚಾಯತಿ ಅಧ್ಯಕ್ಷರಾದ ಆರ್. ಚಿಕ್ಕತಿಮ್ಮರಾಯಪ್ಪ,  ತಾಂತ್ರಿಕ ಸಹಾಯಕ ಇಂಜಿನಿಯರ್ ಅನೀಲ್,ತಾಂತ್ರಿಕ. ಕೃಷಿ ಸಹಾಯಕರಾದ ಮೇಘ, ಹಾಗೂ ಪಂಚಾಯತಿ ಸಿಬ್ಬಂದಿ ಹಾಜರಿದ್ದರು.