ಮನೆ ಮನೆಯಲ್ಲೂ ಧ್ವಜರೋಹಣಕ್ಕೆ ಮಾಲೂರು EO ಚಾಲನೆ

 ಮನೆ ಮನೆಯಲ್ಲೂ ಧ್ವಜರೋಹಣಕ್ಕೆ ಮಾಲೂರು EO ಚಾಲನೆ

ಮನೆ ಮನೆಯಲ್ಲೂ ಧ್ವಜರೋಹಣಕ್ಕೆ ಮಾಲೂರು ತಾಲ್ಲೂಕು ಕಾರ್ಯನಿರ್ವಾಹಕ ಆಧಿಕಾರಿಗಳಾ ಮುನಿರಾಜು ಚಾಲನೆ ನೀಡಿದರು. ತಾಲ್ಲೂಕು ಪಂಚಾಯತಿ ವತಿಯಿಂದ ಸಾಮಾರ್ಥ್ಯಸೌಧಸದಲ್ಲಿ ಮನೆ ಮನೆಯಲ್ಲೂ ಧ್ವಜರೋಹಣ ಜಾಗೃತಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಈ ವೇಳೆ ಮಾತಾನಾಡಿದ ತಾ.ಪಂ ಇಒ, ಸ್ವಾತಂತ್ರ್ಯೋತ್ಸವದ ಈ ಅಮೃತ ಮಹೋತ್ಸವ ಸಂದರ್ಭದಲ್ಲಿ ಆಗಸ್ಟ್ 13 ರಿಂದ 15 ರ ವರೆಗೆ ಪ್ರತಿ ಮನೆಯಲ್ಲೂ ತಿರಂಗಾ ಧ್ವಜವನ್ನು ಹಾರಿಸುವಂತೆ ಮನವಿ ಮಾಡಿದರು.
ಈಗಾಗಲೇ ತಾಲ್ಲೂಕು ಪಂಚಾಯತಿಯಿಂದ ಗ್ರಾಮ ಪಂಚಾಯತಿಗಳಿಗೆ ತ್ರಿವರ್ಣಧ್ವಜಗಳನ್ನು ಸರಬರಾಜು ಮಾಡಲಾಗಿದೆ. ಎಲ್ಲಾ ಸಿಬ್ಬಂದಿ ತಮ್ಮ ಮನೆಗಳ ಮೇಲೆ ಮೂರು ದಿನಗಳ ಕಾಲ ಧ್ವಜವನ್ನು ಹಾರಿಸಬೇಕು. ಎಲ್ಲಾ ಗ್ರಾಮಗಳಲ್ಲಿ ಅಭಿಯಾನ ಯಶಸ್ವಿಯಾಗುವಂತೆ ಜಾಗೃತಿ ಮೂಡಿಸಬೇಕು ಎಂದು ಕರೆ ನೀಡಿದರು.
ಈ ವೇಳೆ ಮಹಿಳಾ ಸ್ವ-ಸಹಾಯ ಸಂಘಗಳಿಂದ ಸಿದ್ಧಪಡಿಸಲಾದ ಧ್ವಜಗಳನ್ನು ತಾ.ಪಂ. ತಾಲ್ಲೂಕು ಕಚೇರಿ, ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿ ಮತ್ತು ಸಿಬ್ಬಂದಿ ವರ್ಗದವರಿಗೆ ನೀಡಲಾಯಿತಿ. ಕಾರ್ಯಕ್ರಮದಲ್ಲಿ ತಹಶಿಲ್ದಾರ್, ಸಹಾಯಕ ನಿರ್ದೇಶಕರು, ಸೇರಿದಂತೆ ಇಲಾಖೆ ಸಿಬ್ಬಂದಿ, ತಾಲ್ಲೂಕು ಕಚೇರಿ ಸಿಬ್ಬಂದಿ, ತಾಲ್ಲೂಕಿನ ಪಂಚಾಯತಿ ಅಭಿವೃದ್ಧಿ ಅಧಿಕಾರಿಗಳು, ನರೇಗಾ ಸಿಬ್ಬಂದಿ ಹಾಜರಿದ್ದರು.