ಬಿಗ್ ಬಾಸ್ ಕನ್ನಡ 8ನೇ ಆವೃತ್ತಿ: ದಿವ್ಯಾ ಸುರೇಶ್ ಔಟ್, ಟಾಪ್ 5ರಲ್ಲಿ ಸ್ಥಾನ ಪಡೆದ ಸಂಬರಗಿ!

ಬಿಗ್ ಬಾಸ್ ಕನ್ನಡ ರಿಯಾಲಿಟಿ ಶೋನ 8ನೇ ಆವೃತ್ತಿಯ ಗ್ರ್ಯಾಂಡ್ ಫಿನಾಲೆಗೆ ಕೇವಲ ಇನ್ನೂ ಮೂರು ದಿನಗಳು ಬಾಕಿ ಇರುವಂತೆಯೇ ದಿವ್ಯಾ ಸುರೇಶ್  ಮನೆಯಿಂದ ಹೊರಬಂದಿದ್ದಾರೆ. ಇದರಿಂದಾಗಿ ಪ್ರಶಾಂತ್ ಸಂಬರ್ಗಿ, ಮಂಜು ಪಾವಗಡ, ಕೆಪಿ. ಅರವಿಂದ್, ದಿವ್ಯಾ ಉರುಡುಗ, ಮತ್ತು ವೈಷ್ಣವಿ ಫಿನಾಲೆಗೆ ಹೋಗುತ್ತಿದ್ದಾರೆ.

ಮಂಗಳವಾರ ನಡೆದ ಎಲಿಮಿನೇಷನ್ ಪ್ರಕ್ರಿಯೆಯಲ್ಲಿ ಮೊದಲ ಸುತ್ತಿನಲ್ಲೇ ಅರವಿಂದ್  ಸೇಫ್ ಆದರೆ, ಕ್ರಮವಾಗಿ ವೈಷ್ಣವಿ, ಮಂಜು ಪಾವಗಡ ಹಾಗೂ ದಿವ್ಯಾ ಉರುಡುಗ ನಂತರ ಫಿನಾಲೆ ಸುತ್ತಿಗೆ ಅರ್ಹತೆ ಪಡೆದರು.

ಕೊನೆಯಲ್ಲಿ ಉಳಿದಿದ್ದ ಪ್ರಶಾಂತ್ ಸಂಬರ್ಗಿ ಹಾಗೂ ದಿವ್ಯಾ ಸುರೇಶ್ ಅವರಿಗೆ ಮನೆಯಲ್ಲಿ ಇದ್ದ ಎರಡು ಬಾಗಿಲ ಮೂಲಕ  ಹೊರ ಹೋಗಲು ಹೇಳುವ ಬಿಗ್ ಬಾಸ್ , ಬಜರ್ ಆದಾಗ ಬಾಗಿಲು ತೆರೆದು ಯಾರು ಮನೆಯ ಒಳಗೆ ಬರುತ್ತಾರೋ ಅವರು ಸೇಫ್ ಎಂದು ಹೇಳಿದ್ದರು. ಅದೃಷ್ಟವಶಾತ್  ಸಂಬರ್ಗಿ ಬಾಗಿಲು ತೆರೆಯುವ ಮೂಲಕ ಅವರು ಟಾಪ್ 5ರಲ್ಲಿ ಸ್ಥಾನ ಪಡೆದರು.

ಮೊದಲ ಇನ್ನಿಂಗ್ಸ್  ಹಾಗೂ ಎರಡನೇ ಇನ್ನಿಂಗ್ಸ್ ನಲ್ಲೂ  ಉತ್ತಮ ಪ್ರದರ್ಶನ ನೀಡಿದ್ದ ದಿವ್ಯಾ ಸುರೇಶ್ , ಕಳೆದ ವಾರ ಯಾಕೋ ಸರಿಯಾಗಿ ಆಟವಾಡದೆ ಕಳಪೆ ಪಟ್ಟವನ್ನು ಪಡೆದುಕೊಂಡಿದ್ದರು. ಸಣ್ಣ ಸಣ್ಣ ವಿಚಾರಕ್ಕೂ ಭಾವೋದ್ವೇಗ ಸ್ವಭಾವದ ದಿವ್ಯಾ ಸುರೇಶ್  ಟಾಪ್ 5ರ ಹಂತಕ್ಕೆ ಬರುವಲ್ಲಿಯೂ ವಿಫಲರಾದರು. ಶನಿವಾರ ನಡೆಯಲಿರುವ ಗ್ರ್ಯಾಂಡ್ ಫಿನಾಲೆಯಲ್ಲಿ ಯಾರು ಟ್ರೋಫಿ ಜಯಿಸಲಿದ್ದಾರೆ ಎಂಬುದು ತೀವ್ರ ಕುತೂಹಲ ಕೆರಳಿಸಿದೆ.