ಬಾಕ್ಸಾಫೀಸ್ ನಲ್ಲಿ ಕೆಜಿಎಫ್-2 ತೂಫಾನ್: ಎರಡು ದಿನದಲ್ಲಿ ಕೆಜಿಎಫ್ ಗಳಿಸಿದ್ದೆಷ್ಟು ಗೊತ್ತಾ?
ಬಾಕ್ಸಾಫೀಸ್ ನಲ್ಲಿ ಕೆಜಿಎಫ್-2 ಸುನಾಮಿಯನ್ನು ಸೃಷ್ಟಿಸಿದೆ. ಕೇವಲ ಎರಡೇ ದಿನದಲ್ಲಿ 300 ಕೋಟಿಗೂ ಅಧಿಕ ಕಲಕ್ಷನ್ ಮೂಲಕ ದಾಖಲೆ ಮಾಡಿದೆ. ಅದರಲ್ಲೂ ಹಿಂದಿನಲ್ಲಿ ರಾಕಿ ಬಾಯ್ ಅಕ್ಷರಸಹ ತೂಫಾನ್ ಸೃಷ್ಟಿಸಿದೆ. ಎರಡು ದಿನದಲ್ಲಿ ನಲ್ಲಿ ಹಿಂದಿ ಬೆಲ್ಟ್ ನಲ್ಲಿ ನೂರು ಕೋಟಿಗೂ ಹೆಚ್ಚು ಹಣ ಗಳಿಸಿದೆ.
ರಾಕಿ ಬಾಯ್ ಅಭಿನಯದ ಕೆಜಿಎಫ್-2 ಚಿತ್ರಕ್ಕೆ ಭಾರತದಲ್ಲಿ ಭರ್ಜರಿ ಓಪನಿಂಗ್ ಸಿಕ್ಕಿದೆ. ಹಿಂದಿ ಬೆಲ್ಟ್ ನಲ್ಲಿ ಮೊದಲನೇ ದಿನ 53.95 ಕೋಟಿ ಹಾಗೂ ಎರಡನೇ ದಿನ 46.79 ಕೋಟಿ ರುಪಾಯಿಗಳನ್ನ ಕಮಾಯಿ ಮಾಡಿದೆ. ಕೆಜಿಎಫ್. ಕೇವಲ ಎರಡೇ ದಿನಗಳಲ್ಲಿ ಹಿಂದಿ ಭಾಷೆಯ ಅವತರಣಿಕೆಯಿಂದ 100.74 ಕೋಟಿ ಬ್ಯುಸಿನೆಸ್ ಮಾಡಿದೆ. ಎರಡೆ ದಿನಗಳಲ್ಲಿ 100 ಕೋಟಿ ಗೂ ಹೆಚ್ಚು ಕಲೆಕ್ಷನ್ ಮಾಡಿದ ಮೊದಲ ಚಿತ್ರ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.ಬಾಹುಬಲಿ-2 ಎರಡು ದಿನದಲ್ಲಿ ಸುಮಾರು 81 ಕೋಟಿ ಗಳಿಸಿತ್ತು.
ಕೆಜಿಎಫ್-2 ಚಿತ್ರದ ಮೊದಲ ದಿನದ ವರ್ಲ್ಡ್ ವೈಡ್ ಕಲೆಕ್ಷನ್ 165 ಕೋಟಿ. ಎರಡನೇ ದಿನ 139.25 ಕೋಟಿ ರೂ. ಎರಡು ದಿನದದಲ್ಲಿ 304 ಕೋಟಿ ರೂ. ವ್ಯವಹಾರ ಮಲಮಾಡಿದೆ.
ಚಲನಚಿತ್ರ ವಿಮರ್ಶಕ ತರಣ್ ಆದರ್ಶ್ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿರುವ ಪೋಸ್ಟ್ ಪ್ರಕಾರ, ಕೆಜಿಎಫ್ -2 ಹಿಂದಿ ಬಾಕ್ಸ್ ಆಫೀಸ್‌ನಲ್ಲಿ ಸುನಾಮಿಯಂತೆ ಅಪ್ಪಳಿಸಿದೆ.