ಪ್ರಶಾಂತ್ ಕಿಶೋರ್ ಕಾಂಗ್ರೆಸ್ ಪಕ್ಷಕ್ಕೆ ಸೇರುವುದು ಖಚಿತವೇ? ಪಕ್ಷಕ್ಕೆ ಪಿಕೆ ನೀಡಿರುವ ಸಲಹೆಗಳೇನು?

 ಪ್ರಶಾಂತ್ ಕಿಶೋರ್ ಕಾಂಗ್ರೆಸ್ ಪಕ್ಷಕ್ಕೆ ಸೇರುವುದು ಖಚಿತವೇ? ಪಕ್ಷಕ್ಕೆ ಪಿಕೆ ನೀಡಿರುವ ಸಲಹೆಗಳೇನು?

ಕಿಶೋರ್ ಅವರಿಗೆ ಕಾಂಗ್ರೆಸ್ ಪಕ್ಷ ಮಣೆಹಾಕಲಿದೆಯೇ ಎಂಬುದು ಕಾದು ನೋಡಬೇಕಾಗಿದ್ದು ತನ್ನನ್ನು ತಾನೇ ಪರಿಷ್ಕರಿಸಿಕೊಳ್ಳುವ ಮತ್ತು ರೂಪಿಸಿಕೊಳ್ಳುವ ಬದಲಾವಣೆಯನ್ನು ಕಾಂಗ್ರೆಸ್ ಒಪ್ಪಿಕೊಳ್ಳಬಹುದೇ ಎಂಬುದು ಮುಂದಿನ ದಿನಗಳಲ್ಲಿ ತಿಳಿಯಬೇಕಾಗಿದೆ.ಪಂಜಾಬ್ ಮುಖ್ಯಮಂತ್ರಿ ಕ್ಯಾಪ್ಟನ್ ಅಮರಿಂದರ್ ಸಿಂಗ್ ಅವರ ಪ್ರಧಾನ ಸಲಹೆಗಾರ ಸ್ಥಾನಕ್ಕೆ ಚುನಾವಣಾ ಕಾರ್ಯತಂತ್ರ ನಿಪುಣನೆಂದೇ ಖ್ಯಾತರಾದ ಪ್ರಶಾಂತ್ ಕಿಶೋರ್ ರಾಜೀನಾಮೆ ನೀಡಿದ್ದಾರೆ. ಪ್ರಶಾಂತ್ ಅವರ ಈ ನಿರ್ಧಾರವು ಹಲವಾರು ಊಹಾಪೋಹಗಳಿಗೆ ಎಡೆ ಮಾಡಿಕೊಟ್ಟಿದ್ದು ಕಾಂಗ್ರೆಸ್ ಪಕ್ಷವನ್ನು ಸೇರಲಿದ್ದಾರೆಯೇ ಎಂಬ ಮಾತುಗಳೂ ಪಕ್ಷದಲ್ಲಿ ಕೇಳಿಬರುತ್ತಿದೆ. ಒಟ್ಟಿನಲ್ಲಿ ಪ್ರಶಾಂತ್ ಕಾಂಗ್ರೆಸ್‌ಗೆ ಸೇರ್ಪಡೆಗೊಂಡರೆ 2022 ರ ರಾಜ್ಯ ವಿಧಾನಸಭೆಯಲ್ಲಿ ಏನಾದರೂ ಬದಲಾವಣೆಗಳು ನಡೆಯುವ ಸಾಧ್ಯತೆ ಇದೆ ಎಂಬುದಾಗಿ ರಾಜಕೀಯ ಮುತ್ಸದ್ದಿಗಳು ಭವಿಷ್ಯ ನುಡಿದಿದ್ದಾರೆ.

ಇನ್ನು ಕಾಂಗ್ರೆಸ್ ವಕ್ತಾರರ ಅಭಿಪ್ರಾಯದಂತೆ 2022 ರಲ್ಲಿ ನಿಗದಿಯಾಗಲಿರುವ ಉತ್ತರ ಪ್ರದೇಶ, ಉತ್ತರಾಖಂಡ ಅಥವಾ ಗುಜರಾತ್‌ನ ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಕಿಶೋರ್ ಕಾರ್ಯತಂತ್ರವಾಗಿ ಪಾಲ್ಗೊಳ್ಳುವುದಿಲ್ಲ ಎಂದಾಗಿದೆ. ಅದಾಗ್ಯೂ ಪ್ರಶಾಂತ್ ಅವರು ಕಳೆದ ಒಂದು ವರ್ಷದಿಂದ ಪಕ್ಷದ ಹಂಗಾಮಿ ಮುಖ್ಯಸ್ಥೆಯಾಗಿರುವ ಸೋನಿಯಾ ಗಾಂಧಿಯವರನ್ನು ಭೇಟಿಯಾಗುತ್ತಿದ್ದು ಇವರಿಬ್ಬರು ನಡುವಿನ ಚರ್ಚೆಗಳು ರಾಜಕೀಯದ ಕುರಿತಲ್ಲ ಎಂಬುದಾಗಿ ಸುದ್ದಿಮಾಧ್ಯಮಗಳು ವರದಿ ಮಾಡಿವೆ. ಬದಲಾಗಿ ಇವರಿಬ್ಬರು ನಡೆಸುವ ಚರ್ಚೆಗಳು ಕಾಂಗ್ರೆಸ್ ಪಕ್ಷದ ಸುಧಾರಣೆಯ ಕುರಿತಾಗಿದ್ದು ಪರಿಷ್ಕರಿಸುವತ್ತ ಗಮನ ಹರಿಸುತ್ತಿದ್ದಾರೆ ಎಂಬ ಮಾಹಿತಿ ಕೂಡ ಲಭ್ಯವಾಗಿದೆ.

ಕಿಶೋರ್ ಅವರು ರಾಹುಲ್, ಪ್ರಿಯಾಂಕಾ ಹಾಗೂ ಸೋನಿಯಾರಿಗೆ ಪಕ್ಷದ ಮರು ನಿರ್ಮಾಣದತ್ತ ಗಮನ ಹರಿಸಬೇಕಾಗಿದೆ ಹೊರತು ಚುನಾವಣೆ ಹಾಗೂ ಚುನಾವಣೆಯನ್ನು ಗೆಲ್ಲುವುದರ ಮೇಲಲ್ಲ ಎಂದು ತಿಳಿಸಿದ್ದಾರೆ. ಕಾಂಗ್ರೆಸ್ ತನ್ನ ಸಿದ್ಧಾಂತ, ಸಂಘಟನೆ ಹಾಗೂ ಕಾರ್ಯಕರ್ತರ ಬಲದಿಂದ ಮಾತ್ರವೇ 136 ವರ್ಷಗಳ ಅಭಿವೃದ್ಧಿಯ ಪಥದಲ್ಲಿ ಸಾಗಿದೆ. ಮುಂಬರುವ ದಶಕಗಳಲ್ಲಿ ಈ ಪ್ರಗತಿಯನ್ನು ಹೀಗೆಯೇ ಕಾಪಾಡುವಂತೆ ಪಕ್ಷವನ್ನು ಮುನ್ನಡೆಸಬೇಕು ಎಂದು ಸಲಹೆ ನೀಡಿದ್ದಾರೆ.

ಪಕ್ಷದಲ್ಲಿರುವ ಉನ್ನತ ಕಾರ್ಯಕರ್ತರಿಂದ ಸಂಗ್ರಹಿಸಲಾದ ಮಾಹಿತಿಯ ಪ್ರಕಾರ ಕಿಶೋರ್ ಪ್ರಮುಖ ಕೂಲಂಕುಷ ಪರಿಶೀಲನೆಯನ್ನು ನಡೆಸುತ್ತಿದ್ದು ಟಿಕೆಟ್ ವಿತರಣಾ ವ್ಯವಸ್ಥೆ, ಚುನಾವಣಾ ಮೈತ್ರಿ, ನಿಧಿ ಸಂಗ್ರಹಣೆ ಇನ್ನಿತರ ವಿಷಯಗಳತ್ತ ಸುದೀರ್ಘ ಚರ್ಚೆ ನಡೆಸಲಾಗಿದೆ ಎಂಬ ಅಂಶ ತಿಳಿದು ಬಂದಿದೆ. ಸೋನಿಯಾ, ರಾಹುಲ್ ಹಾಗೂ ಪ್ರಿಯಾಂಕಾರವರು ಕಿಶೋರ್ ಮುಂದಾಳತ್ವದಲ್ಲಿ ಚರ್ಚೆಗಳನ್ನು ನಡೆಸುತ್ತಿರುವಾಗ ಮಧ್ಯಪ್ರದೇಶದ ಕಾಂಗ್ರೆಸ್ ಘಟಕದ ಮುಖ್ಯಸ್ಥರಾದ ಕಮಲನಾಥ್ ಕೂಡ ಕೆಲವು ಚರ್ಚೆಗಳಿಗೆ ಗೌಪ್ಯರಾಗಿದ್ದರು ಎಂಬುದು ಇಲ್ಲಿ ಗಮನಾರ್ಹವಾದ ಅಂಶವಾಗಿದೆ.

ಕಿಶೋರ್ ಈಗಾಗಲೇ AICC ಪದಾಧಿಕಾರಿಗಳು, ಪ್ರಾಂತೀಯ ಗವರ್ನರ್‌ಗಳನ್ನು ಈಗಾಗಲೇ ಭೇಟಿಯಾಗಿದ್ದು 10 ರಲ್ಲಿ ಎಂಟು ಮಂದಿ ಅವರನ್ನು ಅಮೂಲ್ಯ ಆಸ್ತಿ ಎಂಬುದಾಗಿ ಊಹಿಸಿದ್ದು ಇದು ಉತ್ಪ್ರೇಕ್ಷೆಯಲ್ಲ. ಮಾಧ್ಯಮದ ವರದಿಯೊಂದರ ಪ್ರಕಾರ ಪಕ್ಷದಲ್ಲಿ ಕಿಶೋರ್ ಅವರನ್ನು ಸೇರ್ಪಡೆಗೊಳಿಸುವ ಕುರಿತು ರಾಹುಲ್ ಗಾಂಧಿಯವರು ಹಿರಿಯ ನಾಯಕರೊಂದಿಗೆ ಚರ್ಚಿಸಿದ್ದು, ಎಂ.ಕೆ ಆ್ಯಂಟನಿ, ಮಲ್ಲಿಕಾರ್ಜುನ್ ಖರ್ಗೆ, ಅಂಬಿಕಾ ಸೋನಿ ಕಿಶೋರ್ ಅವರನ್ನು ಪಕ್ಷಕ್ಕೆ ಸ್ವಾಗತಿಸಿದ್ದಾರೆ. ಅದಾಗ್ಯೂ ಪಕ್ಷದಲ್ಲಿ ಹೊಸದಾಗಿ ಸೇರುವವರಿಗೆ ಪಕ್ಷದ ಜವಾಬ್ದಾರಿಗಳನ್ನು ನೀಡುವುದು ಒಳ್ಳೆಯದಲ್ಲ ಎಂಬ ಮಾತೂ ಪಕ್ಷದಲ್ಲಿ ಕೇಳಿಬಂದಿದೆ.

ಒಟ್ಟಿನಲ್ಲಿ ಕಿಶೋರ್ ಅವರಿಗೆ ಮುಕ್ತ ಪ್ರಾಬಲ್ಯವನ್ನು ನೀಡಿರುವುದು ಗೋಚರವಾಗಿದ್ದು 2024 ನ್ನುಕೇಂದ್ರೀಕರಿಸಿಕೊಂಡು ಕಾಂಗ್ರೆಸ್ ಪಕ್ಷವನ್ನು ಮುನ್ನಡೆಸುವ ಅಧಿಕಾರವನ್ನು ಕಿಶೋರ್ ಕೈಗೆತ್ತಿಕೊಳ್ಳಬಹುದು ಎಂಬ ವಿಷಯ ಸ್ಪಷ್ಟವಾಗಿದೆ. ರಾಜಕೀಯದಲ್ಲಿ ಕಿಶೋರ್ ಅವರಿಗೆ ಸಂಪರ್ಕಗಳು ಹೆಚ್ಚಾಗಿರುವುದರಿಂದ ರಾಜಕೀಯದ ಹಿರಿಯ ತಲೆಗಳು ತುಂಬಾ ಚಿರಪರಿಚಿತರಾಗಿದ್ದಾರೆ.