ಪುನೀತ್ ನಟನೆಯ ಜೇಮ್ಸ್ ಸಿನಿಮಾದಲ್ಲಿ ಖಳನಾಯಕನಾಗಿ ಶರತ್ ಕುಮಾರ್!

ಹಿರಿಯ ತಮಿಳು ನಟ ಶರತ್ ಕುಮಾರ್ ಕನ್ನಡ ಸಿನಿಮಾದಲ್ಲಿ ನಟಿಸಲು ಸಿದ್ಧರಾಗಿದ್ದಾರೆ. ಪುನೀತ್ ರಾಜ್ ಕುಮಾರ್ ನಟನೆಯ ಮುಂದಿನ ಜೇಮ್ಸ್ ಸಿನಿಮಾದಲ್ಲಿ ಶರತ್ ಕುಮಾರ್ ಅಭಿನಯಿಸುತ್ತಿದ್ದಾರೆ.

ಹಿರಿಯ ತಮಿಳು ನಟ ಶರತ್ ಕುಮಾರ್ ಕನ್ನಡ ಸಿನಿಮಾದಲ್ಲಿ ನಟಿಸಲು ಸಿದ್ಧರಾಗಿದ್ದಾರೆ. ಪುನೀತ್ ರಾಜ್ ಕುಮಾರ್ ನಟನೆಯ ಮುಂದಿನ ಜೇಮ್ಸ್ ಸಿನಿಮಾದಲ್ಲಿ ಶರತ್ ಕುಮಾರ್ ಅಭಿನಯಿಸುತ್ತಿದ್ದಾರೆ.

ಚೇತನ್ ಕುಮಾರ್ ನಿರ್ದೇಶದ ಈ ಸಿನಿಮಾದಲ್ಲಿ ಶರತ್ ಕುಮಾರ್ ನೆಗೆಟಿವ್ ಪಾತ್ರದಲ್ಲಿ ನಟಿಸಿದ್ದಾರೆ. ಕನ್ನಡದಲ್ಲಿ ಮೊಟ್ಟ ಮೊದಲ ಬಾರಿಗೆ ವಿಲನ್ ಪಾತ್ರಕ್ಕೆ ಬಣ್ಣ ಹಚ್ಚುತ್ತಿದ್ದಾರೆ. ಇಂದು ಜೇಮ್ಸ್ ಸಿನಿಮಾ ಸೆಟ್ ಗೆ ಶರತ್ ಕುಮಾರ್ ಆಗಮಿಸಲಿದ್ದು, ಇವರ ಜೊತೆ ಶ್ರೀಕಾಂತ್ ಮೆಕ್ಕಾ, ಆದಿತ್ಯ ಮತ್ತು ಅನು ಪ್ರಭಾಕರ್, ರಂಗಾಯಣ ರಘು ಮತ್ತು ಮುಖೇಶ್ ರಿಷು ಮುಂತಾದವರ ಜೊತೆ ಸೆಟ್ ಗೆ ಬರಲಿದ್ದಾರೆ.

ಕಿಶೋರ್ ಪತ್ತಿಕೊಂಡ ನಿರ್ಮಾಣದ ಸಿನಿಮಾದಲ್ಲಿ ಪುನೀತ್ ಗೆ ಪ್ರಿಯಾ ಆನಂದ್ ಜೊತೆಯಾಗುತ್ತಿದ್ದಾರೆ. ಈ ಮೊದಲು ಪ್ರಿಯಾ ಮತ್ತು ಶರತ್ ಕುಮಾರ್ ಪುನೀತ್ ಜೊತೆ ರಾಜಕುಮಾರ ಸಿನಿಮಾದಲ್ಲಿ ನಟಿಸಿದ್ದರು.

ಸಿನಿಮಾದಲ್ಲಿ ಸಮರ್ಥ ತಂತ್ರಜ್ಞರ ತಂಡವಿದೆ, ಚರಣ್ ರಾಜ್ ಸಂಗೀತವಿದ್ದು, ಜೆ ಸ್ವಾಮಿ ಛಾಯಾಗ್ರಹಣವಿದೆ. ಸಂತೆ ಹೈಕ್ಳು ತಂಡ ಕಲಾ ನಿರ್ದೇಶನವಿದೆ, ಶೇ 30ರಷ್ಟು ಸಿನಿಮಾ ಶೂಟಿಂಗ್ ಮುಗಿದಿದ್ದು, ಜುಲೈ 5 ರಿಂದ ಶೂಟಿಂಗ್ ಪುನಾರಂಭವಾಗಿದೆ. ಜೇಮ್ಸ್ ನಂತತರ ಪುನೀತ್ ರಾಜ್ ಕುಮಾರ್ ದ್ವಿತ್ವ ಸಿನಿಮಾದಲ್ಲಿ ಪಾಲ್ಗೊಳ್ಳಲಿದ್ದು, ಸೆಪ್ಟಂಬರ್ ತಿಂಗಳಿನಲ್ಲಿ ಶೂಟಿಂಗ್ ಆರಂಭವಾಗಲಿದೆ.