ಪಿಯುಸಿ ನಂತರ ಮುಂದೇನು ಎಂದು ಚಿಂತಿಸುತ್ತಿರುವ ವಿದ್ಯಾರ್ಥಿಗಳಿಗೆ ಇಲ್ಲಿದೆ ಅತ್ಯುತ್ತಮ ಆಯ್ಕೆಗಳು

 ಪಿಯುಸಿ ನಂತರ ಮುಂದೇನು ಎಂದು ಚಿಂತಿಸುತ್ತಿರುವ ವಿದ್ಯಾರ್ಥಿಗಳಿಗೆ ಇಲ್ಲಿದೆ ಅತ್ಯುತ್ತಮ ಆಯ್ಕೆಗಳು

ಸಾಮಾನ್ಯವಾಗಿ ಪ್ರತಿಯೊಬ್ಬರು ಎಂಜಿನಿಯರ್ , ಡಾಕ್ಟರ್, ಬಿಕಾಂ, ಬಿಎಸ್ಇ ಪದವಿಗಳ  ಬಗ್ಗೆಯೇ ಆಲೋಚನೆ ಮಾಡುತ್ತಾರೆ. ಆದರೆ ಅವುಗಳನ್ನು ಹೊರತುಪಡಿಸಿ ಬೇರೆ ಪದವಿಗಳನ್ನು ಮಾಡಿದರೆ ಇನ್ನು ಹೆಚ್ಚಿನ ಅವಕಾಶ ಸಿಗುತ್ತದೆ.ಪಿಯುಸಿ  ಮತ್ತು ಎಸ್ಎಸ್ಎಲ್​​ಸಿ ಫಲಿತಾಂಶ ಪ್ರಕಟವಾಗಿದೆ. ಕೊರೊನಾ ಅಲೆಯಲ್ಲಿ ಸಿಲುಕಿದ್ದ ವಿದ್ಯಾರ್ಥಿಗಳಿಗೆ ಭವಿಷ್ಯದ್ದೆ ಚಿಂತೆ. ಪಿಯುಸಿ  ನಂತರ ಮುಂದೇನು ಮಾಡಬೇಕು. ಯಾವ ಕೋರ್ಸ್ ತೆಗೆದುಕೊಂಡರೆ ಬೇಗ ಕೆಲಸ ಸಿಗತ್ತೆ? ಯಾವ ಕೋರ್ಸಿಗೆ ಸದ್ಯ ಸ್ಕೋಪ್ ಜಾಸ್ತಿ ಇದೆ?  ಎಂಬೆಲ್ಲ ಚಿಂತೆಯಾದರೆ, ಒಂದು ಕಡೆ sslc ವಿದ್ಯಾರ್ಥಿಗಳಿಗೆ ಯಾವ ಸಬ್ಜೆಕ್ಟ್ ತೆಗೆದುಕೊಳ್ಳುವುದು ಅನ್ನೋ ಚಿಂತೆ. ಸೈನ್ಸ್ ತಗೊಂಡು ಮುಂದೆ ಏನು ಮಾಡೋದು. ಅದು ಕಷ್ಟ ಇರುತ್ತೆ ಹೇಗೆ ಓದೋದು.

ಕಾಮರ್ಸ್ ತಗೋಬೋದಾ, ಆರ್ಟ್ಸ್ ತಗೋಳೊದು ಒಳ್ಳೆ ಆಪ್ಷನ್  ಆಗತ್ತಾ ಹೀಗೆ  ಸಾವಿರ ಆಲೋಚನೆಗಳು ವಿದ್ಯಾರ್ಥಿಗಳ ತಲೆಯಲ್ಲಿ ಓಡಾಡುತ್ತವೆ. ಆ ಚಿಂತೆ ಮನಸ್ಸಿನಲ್ಲಿ ಬಹಳ ಗೊಂದಲಗಳನ್ನು ಸೃಷ್ಟಿ ಮಾಡುತ್ತದೆ.  ಕೆಲವೊಮ್ಮೆ ನಿಮ್ಮ ಆಸಕ್ತಿಯೇ ಬೇರೆಯಾಗಿರುತ್ತದೆ, ಆದರೆ ಪೋಷಕರು ಅದಕ್ಕೆ ಒಪ್ಪುತ್ತಾರಾ ಎಂಬ ಅನುಮಾನ ಕಾಡುತ್ತದೆ. ನಿಮ್ಮ ಗೊಂದಲಗಳನ್ನು ಪರಿಹಾರ ಮಾಡುವ ಸಣ್ಣ ಪ್ರಯತ್ನ  ನಮ್ಮದು.