ಪದವೀಧರರಿಗೆ ಗುಡ್ ನ್ಯೂಸ್: ಟಾಪ್ 10 ಕೈಗಾರಿಕೆಗಳಲ್ಲಿದೆ ಉದ್ಯೋಗಾವಕಾಶ

ಯು.ಎಸ್ ನಲ್ಲಿ ಹೊಸ ಪದವೀಧರರಿಗೆ ಆಡ್ಜುನಾ 63,000 ಉದ್ಯೋಗಾವಕಾಶಗಳನ್ನು ಒದಗಿಸಿದೆ. ವರ್ಷಕ್ಕೆ ಸರಾಸರಿ, $57,000 ವೇತನವನ್ನು ಪಾವತಿಸುತ್ತಿದೆ. ಸ್ನಾತಕೋತ್ತರ ಪದವಿಗಾಗಿ, ಕಾರ್ಮಿಕ ಮಾರುಕಟ್ಟೆಯು ಹೆಚ್ಚು ಸ್ಪರ್ಧಾತ್ಮಕ ಮತ್ತು ಹೆಚ್ಚು ಲಾಭದಾಯಕವೆಂದು ತೋರುತ್ತದೆ.
ಕಳೆದ ವರ್ಷದ ಮಾರ್ಚ್‌ನಲ್ಲಿ ಕೋವಿಡ್ ಕಾರಣದಿಂದಾಗಿ 2020 ರ ಬ್ಯಾಚ್ ವಿದ್ಯಾರ್ಥಿಗಳು ನಿರುದ್ಯೋಗವನ್ನು ಎದುರಿಸುತ್ತಿದ್ದಾರೆ ಹಾಗೂ ಅನಿಶ್ಚಿತ ಉದ್ಯೋಗ ಮಾರುಕಟ್ಟೆಯು ವಿದ್ಯಾರ್ಥಿಗಳಲ್ಲಿ ಗೊಂದಲವನ್ನು ಉಂಟುಮಾಡಿದೆ. 2020 ರ ಕಾಲೇಜು ಪದವೀಧರರಲ್ಲಿ ಅರ್ಧದಷ್ಟು ಜನರು ಇನ್ನೂ ಕೆಲಸ ಹುಡುಕುತ್ತಿದ್ದಾರೆ. ಮತ್ತು ಕಂಪನಿಗಳು ಪುನಃ ತೆರೆಯುವ ಪ್ರಯತ್ನಗಳು ಆಶಾದಾಯಕವಾಗಿ ಕಾಣುತ್ತವೆಯಾದರೂ, ಈ ವರ್ಷದ ಕಾಲೇಜು ಪದವೀಧರರು ಉದ್ಯೋಗವನ್ನು ಪಡೆದುಕೊಳ್ಳಲು ಇನ್ನೂ5 ತಿಂಗಳು ಕಾಯಬೇಕಾಗುತ್ತದೆ ಎಂದು ಮಾನ್ಸ್ಟರ್ ಸಮೀಕ್ಷೆಯ ಪ್ರಕಾರ ತಿಳಿದುಬಂದಿದೆ. ಆದರೆ ಒಂದು ಖುಷಿ ವಿಷಯವೆಂದರೆ ಕೆಲವು ಕೈಗಾರಿಕೆ ಕಂಪನಿಗಳು ಹೆಚ್ಚಿನ ಸಂಖ್ಯೆಯ ಹೊಸ ಕಾಲೇಜು ಪದವೀಧರರನ್ನು ನೇಮಿಸಿಕೊಳ್ಳಲು ನೋಡುತ್ತಿವೆ.
ಉದ್ಯೋಗಾಕಾಂಕ್ಷಿಗಳ ಹುಡುಕಾಟ ನಡೆಸುತ್ತಿರುವ ಎಂಜಿನ್ ಆಡ್ಜುನಾ, ಪ್ರವೇಶ ಮಟ್ಟದ ಉದ್ಯೋಗ ಸ್ಥಾನಗಳಿಗಾಗಿ 6.3 ದಶಲಕ್ಷಕ್ಕೂ ಹೆಚ್ಚಿನ ಉದ್ಯೋಗ ಅವಕಾಶದ ಪಟ್ಟಿಗಳನ್ನು ಮಾಡಿದೆ ಮತ್ತು ನಂತರ ಪದವಿ ಪಡೆಯದ ವ್ಯಕ್ತಿಗಳಿಗೂ ಉದ್ಯೋಗ ಸ್ಥಾನಗಳನ್ನು ನೀಡಲು ಮುಂದಾಗಿದೆ.