‘ಪದವಿ ಪೂರ್ವ’ ಸಿನಿಮಾದ ನಾಲ್ಕನೇ ಹಂತದ ಶೂಟಿಂಗ್ ಶೆಡ್ಯೂಲ್ ಪುನಾರಂಭ

ಆಗಸ್ಟ್ 2 ರಿಂದ ಪದವಿ ಪೂರ್ವ ಸಿನಿಮಾದ 4ನೇ ಶೆಡ್ಯೂಲ್ ಶೂಟಿಂಗ್ ಆರಂಭವಾಗಲಿದೆ.  ಹರಿಪ್ರಸಾದ್ ಜಯಣ್ಣ ನಿರ್ದೇಶನದ ಸಿನಮಾದ ಟಾಕಿ ಪೋರ್ಸನ್ ಗಳು ಮುಂದಿನ ದಿನಗಳಲ್ಲಿ ಪೂರ್ಣಗೊಳ್ಳಲಿವೆ.

ಆಗಸ್ಟ್ 2 ರಿಂದ ಪದವಿ ಪೂರ್ವ ಸಿನಿಮಾದ 4ನೇ ಶೆಡ್ಯೂಲ್ ಶೂಟಿಂಗ್ ಆರಂಭವಾಗಲಿದೆ. 

ಹರಿಪ್ರಸಾದ್ ಜಯಣ್ಣ ನಿರ್ದೇಶನದ ಸಿನಮಾದ ಟಾಕಿ ಪೋರ್ಸನ್ ಗಳು ಮುಂದಿನ ದಿನಗಳಲ್ಲಿ ಪೂರ್ಣಗೊಳ್ಳಲಿವೆ. ಸದ್ಯ ಸಿನಿಮಾ ತಂಡ ಕಾಲೇಜು ಸನ್ನಿವೇಶ ಹಾಗೂ ಇಂಡೋರ್ ಶೂಟಿಂಗ್ ಮುಗಿಸಿದೆ. ಸಿನಿಮಾ ತಂಡ ಕೆಲ ಫೋಟೋಗಳನ್ನು ಶೇರ್ ಮಾಡಿದೆ. 

ಪೃಥ್ವಿ ಶಾಮನೂರು, ಅಂಜಲಿ ಅನೀಶ್ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದು, ಉಳಿದ ಕಲಾವಿದರು ಸೆಟ್ ಗೆ ಜಾಯಿನ್ ಆಗಲಿದ್ದಾರೆ. ಪದವಿ ಪೂರ್ವವು ಸಿನಿಮಾವು 90 ರ ದಶಕದ ಕತೆಯಾಗಿದ್ದು, ಯಶೋ ಶಿವಕುಮಾರ್ ಕೂಡ ಈ ಚಿತ್ರದಲ್ಲಿ ನಾಯಕಿಯಾಗಿ ಪಾದಾರ್ಪಣೆ ಮಾಡುತ್ತಿದ್ದಾರೆ.

ಬೆಂಗಳೂರಿನ ಶೂಟಿಂಗ್ ಶೆಡ್ಯೂಲ್ ಮುಗಿದಿದ್ದು, ಸದ್ಯ ಚಿತ್ರ ತಂಡ ಮಂಗಳೂರಿಗೆ ಅಂತಿಮ ಹಂತದ ಶೂಟಿಂಗ್ ಗಾಗಿ ಶಿಫ್ಟ್ ಆಗಲಿದೆ. 

ಅರ್ಜುನ್ ಜನ್ಯ ಜೊತೆ ಹರಿ ಪ್ರಸಾದ್ ಅವರೊಂದಿಗೆ ಕೆಲಸ ಮಾಡಿದ್ದು ಸೆಪ್ಟಂಬರ್ ತಿಂಗಳಲ್ಲಿ ಹಾಡುಗಳ ರಿಲೀಸ್ ಆಗಲಿದೆ, ಪದವಿಪೂರ್ವ ಸಿನಿಮಾವನ್ನು ಯೋಗರಾಜ್ ಭಟ್ ಮತ್ತು ರವಿಶಾಮನೂರು ನಿರ್ಮಾಣ ಮಾಡಿದ್ದಾರೆ. ಸಂತೋಷ ರೈ ಪಾತಾಜೆ ಛಾಯಾಗ್ರಹಣವಿದೆ.