ಟೋಕಿಯೊ ಒಲಂಪಿಕ್ಸ್: ಮಹಿಳೆಯರ ರೆಸ್ಲಿಂಗ್ ನಲ್ಲಿ ವಿನೇಶ್ ಪೋಗಟ್ ಗೆ ಭರ್ಜರಿ ಜಯ, ಕ್ವಾರ್ಟರ್ ಫೈನಲ್ ಗೆ ಪ್ರವೇಶ
ಭಾರತದ ಭರವಸೆಯ ಕುಸ್ತಿಪಟು ವಿನೇಶ್ ಪೋಗಟ್ ಗುರುವಾರ ಮತ್ತೊಂದು ಜಯ ದಾಖಲಿಸಿದ್ದು, ಮಹಿಳೆಯರ 53 ಕೆಜಿ ಫ್ರೀಸ್ಟೈಲ್ ವಿಭಾಗದಲ್ಲಿ ಸ್ವೀಡನ್‌ನ ಸೋಫಿಯಾ ಮಗ್ದಲಿನಾ ಅವರನ್ನು ಮಣಿಸಿ ಕ್ವಾರ್ಟರ್‌ಫೈನಲ್ ಪ್ರವೇಶಿಸಿದ್ದಾರೆ.
ಇನ್ನು ಈ ಪಂದ್ಯದ ಬಳಿಕ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿರುವ ವಿನೇಶ್ ಫೋಗಟ್ ಅವರ ತಾಯಿ ಪ್ರೇಮಲತಾ ಅವರು, ‘”ಈ ಪಂದ್ಯದಲ್ಲಿ ವಿನೇಶ್ ಗೆದ್ದಿರುವುದನ್ನು ನೋಡಿ ತುಂಬಾ ಸಂತೋಷವಾಯಿತು. ಅವಳು ಚೆನ್ನಾಗಿ ಆಡಿದ್ದಳು. ನನಗೆ ಸಂತೋಷವಾಗಿದೆ’ ಎಂದು ಹರಿಯಾಣದ ಬಾಲಾಲಿಯಲ್ಲಿ ತಾಯಿ ಪ್ರೇಮಲತಾ ಹೇಳಿದ್ದಾರೆ.