ಟೋಕಿಯೊ ಒಲಂಪಿಕ್ಸ್‌: ಕುಸ್ತಿಯಲ್ಲಿ ದೀಪಕ್ ಪುನಿಯಾ ಕೈತಪ್ಪಿದ ಕಂಚಿನ ಪದಕ

ಟೋಕಿಯೊ ಒಲಂಪಿಕ್ಸ್‌ ನಲ್ಲಿ ಪುರುಷರ 86 ಕೆ.ಜಿ ವಿಭಾಗದ ಕುಸ್ತಿ ಸ್ಪರ್ಧೆಯಲ್ಲಿ ಭಾರತದ ದೀಪಕ್ ಪುನಿಯಾ ಅವರು ಪದಕ ಗೆಲ್ಲುವಲ್ಲಿ ವಿಫಲರಾಗಿದ್ದಾರೆ.

ಟೋಕಿಯೊ ಒಲಂಪಿಕ್ಸ್‌ ನಲ್ಲಿ ಪುರುಷರ 86 ಕೆ.ಜಿ ವಿಭಾಗದ ಕುಸ್ತಿ ಸ್ಪರ್ಧೆಯಲ್ಲಿ ಭಾರತದ ದೀಪಕ್ ಪುನಿಯಾ ಅವರು ಪದಕ ಗೆಲ್ಲುವಲ್ಲಿ ವಿಫಲರಾಗಿದ್ದಾರೆ.

ಇಂದು ಕಂಚಿನ ಪದಕಕ್ಕಾಗಿ ಸ್ಯಾನ್ ಮರಿನೋದ ಮೈಲ್ಸ್ ಆಮಿನ್ ಅವರ ವಿರುದ್ಧ ನಡೆದ ಹೋರಾಟದಲ್ಲಿ ದೀಪಕ್ ಪುನಿಯಾ ಸೋಲು ಅನುಭವಿಸಿದರು. ಇದರೊಂದಿಗೆ ಭಾರತದ ಮಗದೊಂದು ಪದಕದ ಆಸೆ ಕಮರಿದೆ.

ಮೈಲ್ಸ್ ಆಮಿನ್ ವಿರುದ್ಧ ದಿಟ್ಟ ಹೋರಾಟ ಪ್ರದರ್ಶಿಸಿದ ದೀಪಕ್ ಅವರು ಒಂದು ಹಂತದಲ್ಲಿ 2-1ರಲ್ಲಿ ಮುನ್ನಡೆ
ಕಾಯ್ದುಕೊಂಡಿದ್ದರು. ಆದರೆ ಬೌಟ್ ಅಂತ್ಯಗೊಳ್ಳಲು ಇನ್ನೇನು ಕೆಲವೇ ಸೆಕೆಂಡುಗಳಿರುವಾಗ ತಮ್ಮದೇ ತಪ್ಪಿನಿಂದಾಗಿ ಸೋಲಿನ ಆಘಾತ ಎದುರಿಸಬೇಕಾಯಿತು. ಅಂತಿಮವಾಗಿ 2-4ರ ಅಂತರದಲ್ಲಿ ಸೋಲು ಅನುಭವಿಸಿದರು.

ಸ್ಯಾನ್ ಮರಿನೋ ಒಂದು ಸಣ್ಣ ದೇಶವಾಗಿದ್ದು, ಮೈಲ್ಸ್ ಅಮಿನ್ ಆ ದೇಶದ ಕುಸ್ತಿಪಟು ಆಗಿದ್ದಾರೆ. ಈ ದೇಶದ ಜನಸಂಖ್ಯೆ 34000, ಅಂದರೆ, ಭಾರತದ ಒಂದು ಪಟ್ಟಣದ ಜನಸಂಖ್ಯೆ ಇದಕ್ಕಿಂತ ಹೆಚ್ಚಾಗಿದೆ. ಆದರೆ ಈ ದೇಶದ 5 ಕ್ರೀಡಾಪಟುಗಳು ಟೋಕಿಯೊ ಒಲಿಂಪಿಕ್ಸ್‌ನಲ್ಲಿ ಭಾಗವಹಿಸಿದ್ದು ಮಾತ್ರವಲ್ಲದೆ ಪದಕಗಳನ್ನು ಖಚಿತಪಡಿಸಿದರು. 

ಸ್ಯಾನ್ ಮರಿನೋದಿಂದ 5 ಕ್ರೀಡಾಪಟುಗಳು ಒಟ್ಟಾಗಿ ಟೋಕಿಯೊದಲ್ಲಿ 3 ಪದಕಗಳನ್ನು ಗೆದ್ದಿದ್ದಾರೆ. ಮತ್ತೊಂದೆಡೆ, ಭಾರತದ 127 ಕ್ರೀಡಾಪಟುಗಳು ಕೇವಲ 5 ರಲ್ಲಿ ಮಾತ್ರ ಗೆದ್ದಿದ್ದಾರೆ.