ಜಾನುವಾರುಗಳ ಜಲದಾಹ ನೀಗಿಸಿದ ನರೇಗಾ ಯೋಜನೆ

 ಜಾನುವಾರುಗಳ ಜಲದಾಹ ನೀಗಿಸಿದ ನರೇಗಾ ಯೋಜನೆ

ತುಮಕೂರು:ನೀರಿನ ತೀವ್ರ ಕೊರತೆ ಇರುವ ಪಾವಗಡ ತಾಲ್ಲೂಕಿನಲ್ಲಿ ನರೇಗಾ ಯೋಜನೆ, ಮನುಷ್ಯ ಹಾಗೂ ಪ್ರಾಣಿಗಳ ಜಲದಾಹ ನೀಗಿಸುತ್ತಿದೆ. ತಾಲ್ಲೂಕಿನ ಪಳವಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಸಾವಡಿಕುಂಟೆ ಸರ್ಕಾರಿ ಗೋಮಾಳದಲ್ಲಿ ನರೇಗಾ ಯೋಜನೆಯಡಿ ನಿರ್ಮಿಸಿರು ಗೋಕುಂಟೆ, ಈಗ ಕುರಿಗಾಯಿಗಳ ಸೇರಿದಂತೆ ಪ್ರಾಣಿ ಪಕ್ಷಗಳಿಗೆ ಜೀವಸೆಲೆಯಾಗಿದೆ. ಪಳವಳ್ಳಿ ಗ್ರಾಮದ ಸುತ್ತಮುತ್ತಲಿನ ಹಲವು ಮಂದಿ ಕುರಿ ಮೇಕೆ ಸಾಕಾಣಿಕೆದಾರರಿಗೆ ಈ ನೀರಿನ ಕೊಳ ನಿರ್ಮಾಣದಿಂದ ಸಾಕಷ್ಟು ಅನುಕೂಲವಾಗಿದೆ.

ಪ್ರತಿದಿನ ಬೆಳಗ್ಗೆ ಹಾಗೂ ಸಂಜೆ ವೇಳೆಯಲ್ಲಿ ಕುರಿಗಾಹಿಗಳು ಕುರಿ ಮೇಕೆಗಳನ್ನು  ನೀರಿನ ಕೊಳಕ್ಕೆ ಕರೆ ತಂದು ನೀರನ್ನು ಕುಡಿಸಿ ಹೋಗುತ್ತಿದ್ದಾರೆ. ಕುರಿಗಾಹಿಗಳು ಸಹ ನಿತ್ಯ ಊಟ ಮಾಡುವ ಸಂದರ್ಭದಲ್ಲಿ ನೀರಿನ ಕೊಳದ ನೀರನ್ನೇ ಅವಲಭಿಸಿದ್ದಾರೆ. ಜಾನುವಾರಗಳಿಗೆ ಆಗುತ್ತಿರುವ ಅನುಕೂಲಗಳ ಬಗ್ಗೆ, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ಪ್ರಧಾನ ಕಾರ್ಯದರ್ಶಿಗಳು ಭೇಟಿ ನೀಡಿ ವೀಕ್ಷಿಸಿದರು. ಉತ್ತಮ ಕಾರ್ಯಕ್ಕಾಗಿ ಗ್ರಾಮ ಪಂಚಾಯತಿಯನ್ನು ಅಭಿನಂದಿಸಿದರು.