Warning: array_intersect(): Expected parameter 2 to be an array, null given in /home/u327821803/domains/todayexpress.in/public_html/wp-content/plugins/page-or-post-clone/page-or-post-clone.php on line 123

Warning: include_once(/home/u327821803/domains/todayexpress.in/public_html/wp-includes/header.php): failed to open stream: No such file or directory in /home/u327821803/domains/todayexpress.in/public_html/wp-config.php on line 91

Warning: include_once(): Failed opening '/home/u327821803/domains/todayexpress.in/public_html/wp-includes/header.php' for inclusion (include_path='.:/opt/alt/php74/usr/share/pear') in /home/u327821803/domains/todayexpress.in/public_html/wp-config.php on line 91
ಚಿತ್ರಮಂದಿರಗಳಲ್ಲಿ ಪೂರ್ಣ ಪ್ರಮಾಣದ ಆಸನ ಭರ್ತಿಗೆ ಅನುಮತಿ: ಚಿತ್ರಗಳ ಬಿಡುಗಡೆಗೆ ರೆಡಿಯಾದ ನಿರ್ಮಾಪಕರು – Today Express

ಚಿತ್ರಮಂದಿರಗಳಲ್ಲಿ ಪೂರ್ಣ ಪ್ರಮಾಣದ ಆಸನ ಭರ್ತಿಗೆ ಅನುಮತಿ: ಚಿತ್ರಗಳ ಬಿಡುಗಡೆಗೆ ರೆಡಿಯಾದ ನಿರ್ಮಾಪಕರು

 ಚಿತ್ರಮಂದಿರಗಳಲ್ಲಿ ಪೂರ್ಣ ಪ್ರಮಾಣದ ಆಸನ  ಭರ್ತಿಗೆ ಅನುಮತಿ: ಚಿತ್ರಗಳ ಬಿಡುಗಡೆಗೆ ರೆಡಿಯಾದ ನಿರ್ಮಾಪಕರು

ಕೋವಿಡ್ ನಿಂದ  ಬಂದ್ ಆಗಿದ್ದ ಚಿತ್ರಮಂದಿರಗಳಲ್ಲಿ ಪೂರ್ಣ ಪ್ರಮಾಣದ ಆಸನ  ಭರ್ತಿಗೆ ರಾಜ್ಯ ಸರ್ಕಾರ ಅನುಮತಿ ನೀಡಿದೆ. ಈ ಹಿಂದೆ ಕೇವಲ 50ರಷ್ಟು ಆಸನ ಭರ್ತಿಗೆ ಅವಕಾಶ ನೀಡಿದ್ದ ಸರ್ಕಾರ, ಕೊರೋನಾ ಕಡಿಮೆಯಾಗುತ್ತಲೇ ಪೂರ್ಣ ಪ್ರಮಾಣದ ಆಸನ ಭರ್ತಿಗೆ ಅವಕಾಶ ನೀಡಿದೆ, ರಾಜ್ಯದಲ್ಲಿ ಮಲ್ಟಿಪ್ಲೆಕ್ಸ್ ಹಾಗೂ ಚಿತ್ರಮಂದಿರಗಳಲ್ಲಿ ಪೂರ್ಣ ಪ್ರಮಾಣದ ಆಸನ  ಭರ್ತಿಗೆ ಅನುಮತಿ ನೀಡುವಂತೆ ಸ್ಯಾಂಡಲ್ವುಡ್ ನಿರ್ಮಾಪಕರು ಇತ್ತೀಚೆಗಷ್ಟೆ ಆರೋಗ್ಯ ಸಚಿವ ಕೆ. ಸುಧಾಕರ್ಅವರನ್ನು ಭೇಟಿಯಾಗಿ ಮನವಿ ಮಾಡಿದ್ದರು ಇದನ್ನು ಪರಿಗಣಿಸಿದ ಸಿಎಂ ಬಸವರಾಜ ಬೊಮ್ಮಾಯಿ, ಸಿನಿಮಾ ಮಂದಿರಗಳನ್ನು ಕೆಲವು ನಿರ್ಬಂಧಗಳೊಂದಿಗೆ ತೆರೆಯಲು ಅವಕಾಶ ನೀಡಿದೆ ಎಂದು ತಿಳಿಸದಿದರು.

ಸರ್ಕಾರ ಈ ಆದೇಶ ನೀಡಿದ ಬೆನ್ನಲ್ಲೇ ಸಾಲು ಸಾಲು ಚಿತ್ರಗಳು ಬಿಡುಗಡೆಯ ತಯಾರಿ ನಡೆಸಿವೆ. ಕಿಚ್ಚ ಸುದೀಪ್ ಅಭಿನಯದ ಕೋಟಿಗೊಬ್ಬ 3 ಹಾಗೂ ದುನಿಯಾ ವಿಜಯ್ ನಟಿಸಿ, ನಿರ್ದೇಶನ ಮಾಡುತ್ತಿರುವ ಸಲಗ ಚಿತ್ರದ ಹೊಸ ಪೋಸ್ಟರ್​ಗಳು ಸೋಶಿಯಲ್ ಮೀಡಿಯಾದಲ್ಲಿ ಹರಿದಾಡಲಾರಂಭಿಸಿವೆ. ಇದಲ್ಲದೆ ಅರ್ಜುನ್ ಗೌಡ, ವಿಕ್ರಾಂತ್​ ರೋಣ, ಕೆಜಿಎಫ್​ ಚಾಪ್ಟರ್ 2 ಸೇರಿದಂತೆ ಹಲವಾರು ಸಿನಿಮಾಗಳು ರಿಲೀಸ್​ ಆಗಲು ಕಾಯುತ್ತಿವೆ. ರಾಜ್​ಕುಮಾರ್ ಮೊಮ್ಮಗಳು ಧನ್ಯಾ ರಾಮ್​ಕುಮಾರ್​ ಅಭಿನಯದ ಸಿನಿಮಾ ಅಕ್ಟೋಬರ್ 8ಕ್ಕೆ ತೆರೆ ಕಾಣಲಿದೆ