ಗ್ರಾಮೀಣ ಕಾರ್ಮಿಕರಿಗೆ ಗುಡ್ ನ್ಯೂಸ್: ನರೇಗಾ ದಿನಕೂಲಿ 309ಕ್ಕೆ ಹೆಚ್ಚಳ
ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯಡಿ ಕೂಲಿ ಕೆಲಸ ಮಾಡುವ ರಾಜ್ಯದ ಕಾರ್ಮಿಕರ ದಿನದ ಕೂಲಿ ಹಣದಲ್ಲಿ ಹೆಚ್ಚಳವಾಗಿದೆ. ಏಪ್ರಿಲ್ 1ರಿಂದ ಕೂಲಿ ದರ 309 ರೂ.ಗೆ ಹೆಚ್ಚಳ ಮಾಡಲಾಗಿದೆ. ಈ ಹಿಂದೆ 289 ರೂಪಾಯಿ ಇತ್ತು.
ಸದ್ಯ ಬೇಸಿಗೆ ದುಡಿಯೋಣ ಬಾ ಅಭಿಯಾನದ ಆರಂಭವಾಗಿದ್ದು ನರೇಗಾ ಯೋಜನೆಯಡಿ ಹಲವು ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲಾಗುತ್ತದೆ. ಮಳೆಯಿಲ್ಲದೆ ಕೃಷಿ ಚಟುವಟಿಕೆಗಳು ಕಡಿಮೆಯಾಗುವ ಈ ಸಮಯದಲ್ಲಿ ಕೂಲಿ ದರ ಹೆಚ್ಚಳ ರೈತರಿಗೆ ವರದಾನವಾಗಲಿದೆ.
ಜೂನ್ ಅಂತ್ಯದವರೆಗೆ ನಡೆಯುವ ದುಡಿಯೋಣ ಬಾರೋ ಅಭಿಯಾನದಡಿ 100 ದಿನಗಳ ಉದ್ಯೋಗ ಖಾತ್ರಿ ಸಿಗಲಿದೆ. ಕೂಲಿ ದರ ಹೆಚ್ಚಳದ ಜೊತೆಗೆ ವಿಕಲಚೇತನರು, ಹಿರಿಯರಿಗೆ ಅರ್ಧದಷ್ಟು ಕೆಲಸ ಮಾಡಿದರೂ ದಿನದ ಪೂರ್ತಿ ಕೂಲಿ ಹಣ ಸಿಗಲಿದೆ.
ಮುಂಗಾರು ಮಳೆ ನೀರು ಹಿಡಿದಿಡಲು ಜಲಶಕ್ತಿ ಅಭಿಯಾನದಡಿ ಮಳೆ ನೀರು ಸಂರಕ್ಷಣೆ ಕಾಮಗಾರಿ ಅನುಷ್ಠಾನಕ್ಕೆ ನರೇಗಾದಲ್ಲಿ ಆದ್ಯತೆ ನೀಡಲಾಗುತ್ತದೆ. ಸಮಗ್ರ ಕೆರೆ ಅಭಿವೃದ್ಧಿ, ಕಾಲುವೆಗಳ ಅಭಿವೃದ್ಧಿ, ಗೋಕಟ್ಟೆ, ಕಲ್ಯಾಣಿ ಅಭಿವೃದ್ಧಿ ಕಾಮಗಾರಿಗಳನ್ನು ಕೈಗೊಳ್ಳಲು ಸೂಚಿಸಲಾಗಿದೆ.