ಗಿಡ ನೆಟ್ಟು ಪರಿಸರ ದಿನಾಚರಣೆ
ಮೈಸೂರು: ನಗರದ ಕುವೆಂಪುನಗರದ ಪೂರ್ಣಪ್ರಜ್ಞಾ ವಿದ್ಯಾ ಕೇಂದ್ರ ಶಾಲೆ ವತಿಯಿಂದ ಸುಮಸೋಪಾನ ಉದ್ಯಾನವನದಲ್ಲಿ ವಿಶ್ವ ಪರಿಸರ ದಿನಾಚರಣೆಯನ್ನು ಶಾಲಾ ಮಕ್ಕಳಿಗೆ ಪರಿಸರದ ಬಗ್ಗೆ ಜಾಗೃತಿ ಮೂಡಿಸಿ ಸಸಿ ನೆಡುವುದರ ಮೂಲಕ ಆಚರಿಸಲಾಯಿತು.
ಶಾಲಾ ಸಮಿತಿಯ ಅಧ್ಯಕ್ಷರಾದ ಲಯನ್ ಜೆ ಲೋಕೇಶ್, ಕಾರ್ಯದರ್ಶಿ ಕುಳ್ಳೇಗೌಡ, ಮುಖ್ಯೋಪದ್ಯಾಯಿನಿ ಶ್ಯಾಮಲಾದೇವಿ, ಶಿಕ್ಷಕಿಯರುಗಳಾದ ಮಾಲತಿ, ಯಮುನಾರಾಣಿ, ಸಂಧ್ಯಾ ,ರಾಜೀವ್ ಸ್ನೇಹ ಬಳಗದ ಕುಮಾರ್ ಹಾಗೂ ವಿದ್ಯಾರ್ಥಿಗಳು ಹಾಜರಿದ್ದರು.