‘ಗಾನ ಕೋಗಿಲೆ’ ಅಂತ್ಯಕ್ರಿಯೆಗೆ ಬಾಲಿವುಡ್ ದಂಡು..!

ಗಾನ ಕೋಗಿಲೆಗೆ ರಣಬಿರ್ ಕಪೂರ್ ಅಂತಿಮ ನಮನ ಸಲ್ಲಿಸಿದರು.
ಮುಂಬೈ: ಗಾನ ಕೋಗಿಲೆ, ಖ್ಯಾತ ಗಾಯಕಿ ಲತಾ ಮಂಗೇಶ್ಕರ್ ಪಂಚಭೂತಗಳಲ್ಲಿ ಲೀನರಾಗಿದ್ದಾರೆ. ಭಾನುವಾರ ಸಂಜೆ ಮುಂಬೈನಲ್ಲಿ ಸಕಲ ಸರ್ಕಾರಿ ಗೌರವಗಳೊಂದಿಗೆ ಅಂತ್ಯಕ್ರಿಯೆ ನೆರವೇರಿತು. ಪ್ರಧಾನಿ ಮೋದಿ ಸೇರಿದಂತೆ ಬಾಲಿವುಡ್ ದಂಡೇ ಹರಿದು ಬಂದಿತ್ತು. ಹಾಗಾದ್ರೆ, ಯಾವೆಲ್ಲಾ ಬಾಲಿವುಡ್ ನಟ- ನಟಿಯರು ಭಾಗವಹಿಸಿದ್ದರು ಅಂತ ಇಲ್ಲಿದೆ ನೋಡಿ…
ಬಾಲಿವುಡ್ ಬಾದ್ ಶಾ ಶಾರುಕ್ ಖಾನ್ ಅಂತಿಮ ನಮನ ಸಲ್ಲಿಸಿದರು.
ಗಾನ ಕೋಗಿಲೆಗೆ ರಣಬಿರ್ ಕಪೂರ್ ಅಂತಿಮ ನಮನ ಸಲ್ಲಿಸಿದರು.

ಶ್ರದ್ಧಾ ಕಪೂರ್..

ಇನ್ನು, ಬೆಳಗ್ಗೆ ಬಿಗ್ ಬಿ ಅಮಿತಾಬ್ ಬಚ್ಚನ್, ಅವರ ಪುತ್ರಿ ಶ್ವೇತಾ ಬಚ್ಚನ್ ನಂದಾ, ಅನುಪಮ್ ಖೇರ್, ಸಂಜಯ್ ಲೀಲಾ ಬನ್ಸಾಲಿ ಅವರು ಲತಾ ಮಂಗೇಶ್ಕರ್ ನಿವಾಸಕ್ಕೆ ಆಗಮಿಸಿ ನಮನ ಸಲ್ಲಿಸಿದರು.
ಲತಾ ಮಂಗೇಶ್ಕರ್ ಭಾರತದ ಕೋಗಿಲೆ ಎಂದೇ ಖ್ಯಾತಿ ಪಡೆದಿದ್ದರು. ಹಿಂದಿ, ಮರಾಠಿ, ಬೆಂಗಾಳಿ ಹಾಗೂ ಇತರೆ ಭಾಷೆಯ ಹಾಡುಗಳಿಗೆ ಜೀವ ತುಂಬಿದ್ದರು. ಭಾರತ ರತ್ನ, ಪದ್ಮ ವಿಭೂಷಣ, ಪದ್ಮ ಭೂಷಣ, ದಾದಾ ಸಾಹೇಬ್ ಫಾಲ್ಕೆ ಸೇರಿದಂತೆ ಹತ್ತಾರು ಪ್ರಶಸ್ತಿ ಮುಡಿಗೇರಿಸಿಕೊಂಡಿದ್ದರು.
ತನ್ನ ತಂದೆ ದೀನನಾಥ ಮಂಗೇಶ್ಕರ್ ನಿಧನದ ನಂತರ ೧೯೪೨ರಲ್ಲಿ ಲತಾ ಅವರು ಹಾಡಲು ಪ್ರಾರಂಭಿಸಿದ್ದರು. ಇವರು ಶಾಸ್ತ್ರೀಯ ಹಾಡುಗಾರ್ತಿ ಹಾಗೂ ರಂಗಭೂಮಿ ಕಲಾವಿದೆ. ೧೯೪೮ರಲ್ಲಿ ತೆರೆ ಕಂಡ ಮಜ್ಬೂರ್ ಸಿನಿಮಾದ ದಿಲ್ ಮೇರಾ ತೊಡಾ ಹಾಡು ಅವರ ಯಶಸ್ವಿಗೆ ಪ್ರಥಮ ಮೆಟ್ಟಿಲಾಯಿತು. ನಂತರ ಅವರು ಉತ್ತುಂಗದ ಶಿಖರವೇರುತ್ತಾ ಸಾಗಿ ಕೋಟಿ ಕೋಟಿ ಭಾರತೀಯರ ಮನೆ ಮಾತಾದರು.