ಕೋವಿಡ್ ನಿರ್ವಹಣೆಯಲ್ಲಿ ಭಾರತ ಮೇಲುಗೈ: ರಕ್ಷಣಾ ಸಚಿವ
ಆಗ್ರಾ: ಅಮೆರಿಕಾ ಸೇರಿದಂತೆ ಎಲ್ಲಾ ಮುಂದುವರಿದ ರಾಷ್ಟ್ರಗಳಿಗಿಂತಲೂ ಭಾರತ ಉತ್ತಮವಾಗಿ ಕೋವಿಡ್ ಪರಿಸ್ಥಿತಿ ನಿಭಾಯಿಸಿದೆ ಎಂದು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಹೇಳಿದರು.
ಇಲ್ಲಿನ ವಿಧಾನಸಭಾ ಚುನಾವಣಾ ಪ್ರಚಾರ ಸಭೆಯಲ್ಲಿ ಮಾತನಾಡಿದ ಅವರು, ಇತರೆ ಯಾವುದೇ ರಾಷ್ಟ್ರಗಳು ತನ್ನ ಪ್ರಜೆಗಳಿಗೆ ಭಾರತದಂತೆ ಅತ್ಯಂತ ವೇಗವಾಗಿ ಲಸಿಕೆ ನೀಡಲು ಸಾಧ್ಯವಾಗಿಲ್ಲ ಎಂದು ತಿಳಿಸಿದರು.
ಇದೇ ವೇಳೆ ಸಮಾಜವಾದಿ ಪಕ್ಷವನ್ನ ಟೀಕಿಸಿದ ಸಿಂಗ್, ಬಿಜೆಪಿಯಿಂದ ಮಾತ್ರ ಉತ್ತರ ಪ್ರದೇಶವನ್ನ ಅಭಿವೃದ್ಧಿ ಪಥದಲ್ಲಿ ಕೊಂಡೊಯ್ಯಲು ಸಾಧ್ಯ. ಸಮಾಜವಾದಿ ಪಕ್ಷವು ಜಾತಿ ಮತ್ತು ಧರ್ಮಾಧರಿತ ರಾಜಕಾರಣ ಮಾಡುತ್ತಿದೆ ಎಂದು ಟೀಕಿಸಿದರು.