ಕೋವಿಡ್ ಗೆ ಪ್ರತಿಕ್ರಿಯಿಸುವಲ್ಲಿ ಮಹಿಳೆ-ಪುರುಷರ ರೋಗನಿರೋಧಕ ವ್ಯವಸ್ಥೆಯಲ್ಲಿ ಪ್ರಮುಖ ವ್ಯತ್ಯಾಸಗಳು ಪತ್ತೆ!

ಕೋವಿಡ್-19 ಉಂಟುಮಾಡುವ ರೋಗಾಣುಗಳಿಗೆ ಪ್ರತಿಕ್ರಿಯಿಸುವ ಮಹಿಳೆಯರು ಹಾಗೂ ಪುರುಷರಲ್ಲಿನ ರೋಗನಿರೋಧಕ ವ್ಯವಸ್ಥೆಯಲ್ಲಿನ ಪ್ರಮುಖ ವ್ಯತ್ಯಾಸಗಳನ್ನು ಸಂಶೋಧಕರು ಪತ್ತೆ ಮಾಡಿದ್ದಾರೆ. 

ಕೋವಿಡ್-19 ಉಂಟುಮಾಡುವ ರೋಗಾಣುಗಳಿಗೆ ಪ್ರತಿಕ್ರಿಯಿಸುವ ಮಹಿಳೆಯರು ಹಾಗೂ ಪುರುಷರಲ್ಲಿನ ರೋಗನಿರೋಧಕ ವ್ಯವಸ್ಥೆಯಲ್ಲಿನ ಪ್ರಮುಖ ವ್ಯತ್ಯಾಸಗಳನ್ನು ಸಂಶೋಧಕರು ಪತ್ತೆ ಮಾಡಿದ್ದಾರೆ. 

ಯೇಲ್ ವಿಶ್ವವಿದ್ಯಾಲಯದಲ್ಲಿ ಈ ಸಂಶೋಧನೆ ನಡೆದಿದ್ದು,  ಕೋವಿಡ್-19 ನಿಂದ ಹೆಚ್ಚು ಬಳಲಿ ಸಾವನ್ನಪ್ಪುವ ಸಾಧ್ಯತೆ ಹೊಂದಿರುವ ಪುರುಷರಲ್ಲಿನ ರೋಗನಿರೋಧಕ ಪ್ರಕ್ರಿಯೆಗೆ ಹೆಚ್ಚು ಸಂಬಂಧಿಸಿದ ಚಯಾಪಚಯ ಪ್ರತಿಕ್ರಿಯಯನ್ನು ಸಂಶೋಧಕರು ಪತ್ತೆ ಮಾಡಿದ್ದಾರೆ. 

ಜರ್ನಲ್ ಸೈನ್ಸ್ ಸಿಗ್ನಲಿಂಗ್ ನಲ್ಲಿ ಪ್ರಕಟಗೊಂಡ ಈ ಅಧ್ಯಯನದಲ್ಲಿ ಅಮೈನೊ ಆಸಿಡ್ ಚಯಾಪಚಯದ ಉತ್ಪನ್ನವಾಗಿರುವ ಕೈನುರೆನಿಕ್ ಆಮ್ಲ ಮಟ್ಟ ಪುರುಷ ಕೋವಿಡ್-19 ರೋಗಿಗಳಲ್ಲಿ, ಮಹಿಳೆಯರಿಗಿಂತಲೂ ಹೆಚ್ಚಿನ ಪ್ರಮಾಣದಲ್ಲಿರುವುದನ್ನು ಸಂಶೋಧಕರು ಕಂಡುಕೊಂಡಿರುವುದು ವರದಿಯಾಗಿದೆ.