ಕೋಳೂರು ಗ್ರಾಮ ಪಂಚಾಯತಿಯಲ್ಲಿ ವಿಶ್ವ ಕಾರ್ಮಿಕ ದಿನಾಚರಣೆ ಆಚರಣೆ

ಕುರುಗೋಡು ತಾಲ್ಲೂಕಿನ ಕೋಳೂರು ಗ್ರಾಮ ಪಂಚಾಯತ್ ನಲ್ಲಿ ಇಂದು ಅಂತಾರಾಷ್ಟ್ರೀಯ ಕಾರ್ಮಿಕರ ದಿನಾಚರಣೆಯನ್ನು ಆಚರಿಸಲಾಯಿತು.
ಕುರುಗೋಡು ತಾಲ್ಲೂಕು ಪಂಚಾಯತ್ನ ಕಾರ್ಯನಿರ್ವಾಹಕ ಅಧಿಕಾರಿಗಳು, ಕಾರ್ಯಕ್ರಮವನ್ನು ಉದ್ಘಾಟನೆ ಮಾಡಿದರು. ಸಹಾಯಕ ನಿರ್ದೇಶಕರು(ಗ್ರಾ ಉ )ಗ್ರಾಮದ ಧಾರ್ಮಿಕ ಮುಖಂಡರು, ಗ್ರಾಮ ಪಂಚಾಯತ್ ಸದಸ್ಯರು, ಗ್ರಾಮ ಪಂಚಾಯತ್ ಅಧಿಕಾರಿ ಮತ್ತು ಸಿಬ್ಬಂದಿಗಳು, ಸೊಸೈಟಿ ಅಧ್ಯಕ್ಷರು, SDMC ಅಧ್ಯಕ್ಷರು,ಊರಿನ ಗಣ್ಯರು, ಹಿರಿಯರು ಮತ್ತು ಗ್ರಾಮದ ರೈತರು, ಕೂಲಿ ಕಾರ್ಮಿಕರು ಆಚರಣೆಯಲ್ಲಿ ಪಾಲ್ಗೊಂಡಿದ್ದರು.
ಕಾರ್ಯಕ್ರಮದ ಭಾಗವಾಗಿ ಕಿಸ್ಸನ್ ಕಾರ್ಡ್ ವಿತರಣೆ, ಜಾಬ್ ಕಾರ್ಡ್ ವಿತರಣೆ ಮತ್ತು 42 ಮಹಿಳಾ ಮೇಟಿಗಳಿಗೆ ID ಕಾರ್ಡ್ ವಿತರಿಸಲಾಯಿತು.
ಕಾರ್ಮಿಕರ ಹಕ್ಕು ಸೌಲಭ್ಯ ಗಳು, ಸಾಮಾಜಿಕ ಸುರಕ್ಷತೆ, ರಾಷ್ಟ್ರ ನಿರ್ಮಾಣ ದಲ್ಲಿ ಕಾರ್ಮಿಕರ ಮಹತ್ವ ಮತ್ತು ನರೇಗಾ ಯೋಜನೆಯ ಪ್ರಾಮುಖ್ಯತೆ, ಗ್ರಾಮೀಣಾಭಿರುದ್ಧಿ ಯಲ್ಲಿ ಯೋಜನೆ ಪಾತ್ರ ಕುರಿತಾಗಿ EO ಹಾಗೂ ಮಾನ್ಯ AD ರವರು ಮಾತನಾಡಿದರು.
ಅತೀ ಹೆಚ್ಚಿನ ಸಂಖ್ಯೆ ಯಲ್ಲಿ ಮಹಿಳೆ ಯಾರನ್ನು ಒಳಗೊಂಡ ಒಟ್ಟು 1500 ಕೂಲಿಕಾರರು ಕಾರ್ಮಿಕರ ದಿನಾಚರಣೆಯಲ್ಲಿ ಪಾಲ್ಗೊಂಡಿದ್ದರು.