ಕೋಲಾರ ಜಿಲ್ಲೆಯಲ್ಲಿ ವರುಣನ ಆರ್ಭಟ: ದಶಕದ ನಂತರದ ತುಂಬಿ ಹರಿದ ಮಾರ್ಕಂಡೇಯ ಕೆರೆ

ಕೋಲಾರ: ಕೋಲಾರ ಜಿಲ್ಲೆಯಲ್ಲಿ ಕಳೆದ ಮೂರು ದಿನಗಳಿಂದ ನಿರಂತರವಾಗಿ ಮಳೆ ಸುರಿಯುತ್ತಿದೆ. ಇದರಿಂದ ಜನ ಜೀವನ ಸಂಪೂರ್ಣವಾಗಿ ಅಸ್ತವ್ಯಸ್ತಗೊಂಡಿದೆ. ಭಾರಿ ಮಳೆಯಿಂದ ಜಿಲ್ಲೆಯ ಬಹುತೇಕ ಕೆರೆಗಳು ತುಂಬಿ ಹರಿಯುತ್ತಿವೆ. ಜಿಲ್ಲೆಯಲ್ಲಿ ದಾಖಲೆ ಪ್ರಮಾಣದಲ್ಲಿ ಮಳೆಯಾಗಿದ್ದು, ಭಾರಿ ಪ್ರಮಾಣದ ನೀರು ಹರಿದು ಬಂದಿದ್ದು, ದೊಡ್ಡ ಕೆರೆಗಳು ಕೊಡಿ ಹರಿಯುತ್ತಿವೆ.

ನಿರಂತರ ಮಳೆಗೆ ಬೂದಿಕೋಟೆಯ ಮಾರ್ಕಂಡೇಯ ಡ್ಯಾಂ ಕೊಡಿ ಹರಿದಿದೆ.2005ರ ನಂತರ ಮಾರ್ಕಂಡೇಯ ಕೆರೆ ಕೊಡಿ ಹರಿದಿದ್ದು, ಈ ಭಾಗದ ಜನರಲ್ಲಿ ಸಂತಸ ತಂದಿದೆ. ಸುಮಾರು 16 ವರ್ಷಗಳ ನಂತರ ಕೆರೆ ಕೊಡಿ ಹರಿದಿದ್ದು, ಇಲ್ಲಿನ ಸುತ್ತಮುತ್ತಲಿನ ಗ್ರಾಮಗಳ ಜನರು ತಂಡೋಪ ತಂಡಗಳಾಗಿ ಬಂದು ಕೆರೆ ವೀಕ್ಷಿಸುತ್ತಿದ್ದಾರೆ.
ಸ್ವಾತಂತ್ರ್ಯ ಪೂರ್ವದಲ್ಲಿ ನಿರ್ಮಾಣವಾದ ಕೆರೆಯ ಹತ್ತಾರು ಗ್ರಾಮಗಳಿಗೆ ನೀರಿನ ಮೂಲವಾಗಿತ್ತು. ಇತ್ತೀಚಿನ ದಿನಗಳಲ್ಲಿ ಕೆರೆಯ ನೀರನ್ನು ಮಾಲೂರು ತಾಲ್ಲೂಕಿನ ಗ್ರಾಮಗಳಿಗೆ ಪುರೈಕೆ ಮಾಡಲಾಗುತ್ತಿತ್ತು.