ಆ.೧೫ರಿಂದ ರಾಜ್ಯಾದ್ಯಂತ ರೈತ ಬಂಧು ಅಭಿಯಾನ

ರೈತನ ಮಿತ್ರ, ಎಂದೇ ಕರೆಯಲ್ಪಡುವ ಎರೆಹುಳುಗಳಿಂದ ಸಾವಯವ ಗೊಬ್ಬರ ತಯಾರಿಕೆಯನ್ನು ಉತ್ತೇಜಿಸುವ ದೃಷ್ಟಿಯಿಂದ ಇದೇ ಆಗಸ್ಟ್ ೧೫ರಿಂದ ರೈತ ಬಂಧು ಅಭಿಯಾನವನ್ನು ರಾಜ್ಯಾದ್ಯಂತ ಹಮ್ಮಿಕೊಳ್ಳಲಾಗಿದೆ
೭೫ನೇ ಸ್ವಾತಂತ್ರ‍್ಯೊತ್ಸವದ ಆಜಾದಿ ಕಾ ಅಮೃತ ಮಹೋತ್ಸ ಅಂಗವಾಗಿ ಮಹಾತ್ಮ ಗಾಂಧಿ ನರೇಗಾ ಯೋಜನೆಯಡಿ ಆಗಸ್ಟ್ 15 ರಿಂದ ಅಕ್ಟೋಬರ್ 15 ರವರೆಗೆ ಎರಡು ತಿಂಗಳ ಅವಧಿವರೆಗೆ ಅಭಿಯಾನ ನಡೆಯಲಿದೆ. ಜಿಲ್ಲಾ, ತಾಲ್ಲೂಕು ಮತ್ತು ಗ್ರಾಮ ಪಂಚಾಯಿತಿಗಳ ಮಟ್ಟದಲ್ಲಿ ಸ್ಥಳೀಯ ಜನಪ್ರತಿನಿಧಿಗಳ ನೇತೃತ್ವದಲ್ಲಿ ಅಭಿಯಾನಕ್ಕೆ ಚಾಲನೆ ನೀಡಲಾಗುವುದು.
ರೈತರನ್ನು ಎರೆಹುಳು ಗೊಬ್ಬರ ಘಟಕ ನಿರ್ಮಾಣ ಮಾಡಿಕೊಳ್ಳುವಂತೆ ಅಭಿಯಾನದ ಮೂಲಕ ಉತ್ತೇಜಿಸಲಾಗುತ್ತಿದೆ. ಪ್ರತಿ ಗ್ರಾಮ ಪಂಚಾಯಿತಿಗೆ ಕನಿಷ್ಠ 25 ರಂತೆ ಎರೆಹುಳು ತೊಟ್ಟಿ ನಿರ್ಮಾಣದ ಗುರಿಯನ್ನು ಸರ್ಕಾರ ನೀಡಿದ್ದುದೆ. ಎರಡು ಅಳತೆಯ ಎರೆಹುಳು ಘಟಕಗಳ ನಿರ್ಮಾಣಕ್ಕೆ ತಲಾ ರೂ.27 ಸಾವಿರ ಹಾಗೂ ರೂ.21 ಸಾವಿರ ಅನುದಾನ ನೀಡಲಾಗುತ್ತದೆ.
ಎರೆಹುಳು ಗೊಬ್ಬರದ ಬಳಕೆಯಿಂದ ಉತ್ಪಾದನಾ ವೆಚ್ಚ ಕಡಿಮೆಯಾಗಿ ರೈತರ ಆದಾಯ ಹೆಚ್ಚಳಕ್ಕೆ ಸಹಕಾರಿ, ತ್ಯಾಜ್ಯಗಳ ಸದ್ಬಳಕೆಯಿಂದ, ಮಾಲಿನ್ಯ ಮುಕ್ತ ಸ್ವಚ್ಛ ಪರಿಸರ ನಿರ್ಮಾಣ , ರೈತರಲ್ಲಿ ಸಾವಯವ ಕೃಷಿಯನ್ನು ಉತ್ತೇಜಿಸಿ, ಜಾಗೃತಿ ಮೂಡಿಸುವುದು ಹಾಗೂ ಮಹಿಳಾ ಸ್ವಸಹಾಯ ಗುಂಪುಗಳಿಗೆ ಹಾಗೂ ರೈತರಿಗೆ ಎರೆಹುಳು ಗೊಬ್ಬರದ ಉತ್ಪಾದನೆ ಹಾಗೂ ಉದ್ಯಮಶೀಲತೆಯ ಅವಕಾಶಗಳ ಬಗ್ಗೆ ಪೂರಕ ಮಾಹಿತಿ ನೀಡಿ ಪ್ರೋತ್ಸಾಹಿಸುವುದು ಈ ಅಭಿಯಾನದ ಉದ್ದೇಶವಾಗಿದೆ.
ಈ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಸಾರ್ವಜನಿಕರು ತಮ್ಮ ಗ್ರಾಮ ಪಂಚಾಯತಿ ಅಥವ ಉಚಿತ ಸಹಾಯವಾಣಿ:1800-4258666 ಸಂಪರ್ಕಿಸಬಹುದಾಗಿದೆ.