ಆದಿತ್ಯನಾಥ್​ ಸರ್ಕಾರ ಕಳಪೆ ಸರ್ಕಾರ; ಎಸ್​ಪಿ 400 ಸೀಟು ಗೆಲ್ಲಲಿದೆ ಎಂದ ಅಖಿಲೇಶ್

 ಆದಿತ್ಯನಾಥ್​ ಸರ್ಕಾರ ಕಳಪೆ ಸರ್ಕಾರ; ಎಸ್​ಪಿ 400 ಸೀಟು ಗೆಲ್ಲಲಿದೆ ಎಂದ ಅಖಿಲೇಶ್

ಪ್ರಸ್ತುತ ಬಿಜೆಪಿ ಸರ್ಕಾರದ ಅವಧಿಯಲ್ಲಿ ಬೆಲೆ ಏರಿಕೆ, ಕರಾಳ ಕೃಷಿ ಕಾನೂನುಗಳು ಮತ್ತು ಕಳಪೆ ಕಾನೂನು ಮತ್ತು ಸುವ್ಯವಸ್ಥೆಯಂತಹ ಸಮಸ್ಯೆಗಳನ್ನು ಎತ್ತಿ ಹಿಡಿಯಲು ಸಮಾಜವಾದಿ ಪಕ್ಷವು ಗುರುವಾರ ಉತ್ತರ ಪ್ರದೇಶದ ಎಲ್ಲಾ ಜಿಲ್ಲೆಗಳಲ್ಲಿ ‘ಸೈಕಲ್ ಯಾತ್ರೆ’ ಆರಂಭಿಸಲಿದೆ.

ಸಮಾಜವಾದಿ ಪಕ್ಷದ ಮುಖ್ಯಸ್ಥ ಮತ್ತು ಮಾಜಿ ಮುಖ್ಯಮಂತ್ರಿ ಅಖಿಲೇಶ್ ಯಾದವ್ ಅವರು 2022 ವಿಧಾನಸಭಾ ಚುನಾವಣೆಯಲ್ಲಿ ಎಸ್‌ಪಿ 400 ವಿಧಾನಸಭಾ ಸ್ಥಾನಗಳನ್ನು ಗೆಲ್ಲುವ ಮೂಲಕ ದಾಖಲೆ ನಿರ್ಮಿಸಲಿದೆ.  ಉತ್ತರ ಪ್ರದೇಶದ ಜನರು ಬಿಜೆಪಿ ಸರ್ಕಾರದ ಆಡಳಿತ ವೈಖರಿ ಬಗ್ಗೆ ಅಸಮಾಧಾನಗೊಂಡಿದ್ದಾರೆ. ಅಲ್ಲದೇ, ಆಡಳಿತ ಪಕ್ಷವು ಎಲ್ಲಾ ಸ್ಥಾನಗಳಲ್ಲಿ ಅಭ್ಯರ್ಥಿಗಳನ್ನು ಸುಲಭವಾಗಿ ಹುಡುಕಲು ಆಗುವುದಿಲ್ಲ ಎಂದು ವ್ಯಂಗ್ಯವಾಡಿದ್ದಾರೆ.

ಇಲ್ಲಿಯವರೆಗೆ ನಾವು ರಾಜ್ಯದಲ್ಲಿ 2022 ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ 350 ಪ್ಲಸ್ ಸೀಟುಗಳನ್ನು ಗೆಲ್ಲುತ್ತೇವೆ ಎಂದು ಹೇಳಿಕೊಳ್ಳುತ್ತಿದ್ದೆವು ಆದರೆ ಈಗ ಜನರು ಬಿಜೆಪಿ ಬಗ್ಗೆ ತುಂಬಾ ಅಸಮಾಧಾನಗೊಂಡಿದ್ದು ಸಮಾಜವಾದಿ ಪಕ್ಷ 400 ಸ್ಥಾನಗಳನ್ನು ಪಡೆಯತ್ತದೆ ಎಂದು ಹೇಳುತ್ತೇನೆ. ಜನರು ಬಿಜೆಪಿ ಬಗ್ಗೆ ಅತೃಪ್ತರಾಗಿದ್ದಾರೆ ಮತ್ತು ಅವರು ಎಲ್ಲಾ ಸ್ಥಾನಗಳಲ್ಲಿ ಅಭ್ಯರ್ಥಿಗಳನ್ನು ಕಣಕ್ಕೆ ಇಳಿಸಲು ಸಾಧ್ಯವಿಲ್ಲ. ರಾಜ್ಯದಲ್ಲಿ ಬ್ರಾಹ್ಮಣರು, ದಲಿತರು ಮತ್ತು ಮುಸ್ಲಿಂ ಸಮುದಾಯ ಬಿಜೆಪಿ ತುಳಿತಕ್ಕೊಳಗಾಗಿದೆ ಮತ್ತು ಕಿರುಕುಳ ಅನುಭವಿಸಿದೆ ಎಂದು ಲಕ್ನೋದ ಎಸ್‌ಪಿ ಪ್ರಧಾನ ಕಚೇರಿಯಿಂದ ಸೈಕಲ್ ಯಾತ್ರೆಯನ್ನು ಆರಂಭಿಸುವ ಮೊದಲು ಪತ್ರಿಕಾಗೋಷ್ಠಿಯಲ್ಲಿ ಮಾತನಾಡುತ್ತಾ ಯಾದವ್ ಹೇಳಿದರು.

ಎಸ್‌ಪಿ ಸರ್ಕಾರದ ಅವಧಿಯಲ್ಲಿ ಮಾಡಿದ ಕೆಲಸವನ್ನು ಇಂದಿಗೂ ಬಿಜೆಪಿ ಜನರು ಉದ್ಘಾಟಿಸುತ್ತಿದ್ದಾರೆ, ಅವರು ಕೆಲಸ ಮಾಡಲಿಲ್ಲ ಮತ್ತು ಈಗ ಜನರನ್ನು ಗೊಂದಲಕ್ಕೀಡುಮಾಡಲು ಹೋಗಿ ತಾವೇ ಗೊಂದಲಕ್ಕೊಳಗಾಗಿದ್ದಾರೆ ಎಂದು ಅಖಿಲೇಶ್​ ಚಾಟಿ ಬೀಸಿದರು.
ಯುಪಿ ದೇಶದ ಅಗ್ರಸ್ಥಾನ ಹೊಂದಿದ ರಾಜ್ಯ ಎಂದು ಬಿಜೆಪಿ ಸರ್ಕಾರ ನೀಡಿದ ಹೇಳಿಕೆಗೆ ಪ್ರತಿಕ್ರಿಯಿಸಿದ ಅಖಿಲೇಶ್ ಯಾದವ್, “ಜಾಹೀರಾತುಗಳಲ್ಲಿ ಸರ್ಕಾರವು ನಂಬರ್ ಒನ್ ಎಂದು ಹೇಳಿಕೊಳ್ಳುತ್ತದೆ, ಆದರೆ, ಅವರು ಅಪೌಷ್ಟಿಕತೆಯಲ್ಲಿ ರಾಜ್ಯವನ್ನು ನಂಬರ್ ಒನ್ ಮಾಡಿದ್ದಾರೆ, ಮೃತ ದೇಹಗಳು ಗಂಗಾನದಿಯ ದಡದಲ್ಲಿ ತೇಲುವುದರಲ್ಲಿ ನಂಬರ್​ ಒನ್​ ಮಾಡಿದ್ದಾರೆ, ರಾಜ್ಯದ ಜನರಿಗೆ ಆಮ್ಲಜನಕವನ್ನು ನೀಡಲು ಸಾಧ್ಯವಾಗದೆ ಮತ್ತು ರಾಜ್ಯದಲ್ಲಿ ಹೆಚ್ಚುತ್ತಿರುವ ನಿರುದ್ಯೋಗ ಸಮಸ್ಯೆಯಲ್ಲಿ ನಂಬರ್​ ಒನ್​ ಮಾಡಿದ್ದಾರೆ. ಉದ್ಯೋಗ ಕೇಳುವ ಯುವಕರನ್ನು ಹೊಡೆಯುವುದರಲ್ಲಿ, ಮಹಿಳೆಯರ ವಿರುದ್ಧದ ಅಪರಾಧಗಳಲ್ಲಿ, ಸರಿಯಾದ ವೈದ್ಯಕೀಯ ಚಿಕಿತ್ಸೆ ಸಿಗದೆ ಸಾಯುವ ಜನರಲ್ಲಿ ಮತ್ತು ಗೌರವಾನ್ವಿತ ನ್ಯಾಯಾಂಗದ ನಿಂದನೆಯಲ್ಲಿ ರಾಜ್ಯವು ಮೊದಲ ಸ್ಥಾನದಲ್ಲಿದೆ ಎಂದು ಯೋಗಿ ಸರ್ಕಾರವನ್ನು ಚೇಡಿಸಿದ್ದಾರೆ.

ಪ್ರಸ್ತುತ ಬಿಜೆಪಿ ಸರ್ಕಾರದ ಅವಧಿಯಲ್ಲಿ ಬೆಲೆ ಏರಿಕೆ, ಕರಾಳ ಕೃಷಿ ಕಾನೂನುಗಳು ಮತ್ತು ಕಳಪೆ ಕಾನೂನು ಮತ್ತು ಸುವ್ಯವಸ್ಥೆಯಂತಹ ಸಮಸ್ಯೆಗಳನ್ನು ಎತ್ತಿ ಹಿಡಿಯಲು ಸಮಾಜವಾದಿ ಪಕ್ಷವು ಗುರುವಾರ ಉತ್ತರ ಪ್ರದೇಶದ ಎಲ್ಲಾ ಜಿಲ್ಲೆಗಳಲ್ಲಿ ‘ಸೈಕಲ್ ಯಾತ್ರೆ’ ಆರಂಭಿಸಲಿದೆ.

ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್ ಆರು ಕಿಲೋಮೀಟರ್‌ಗಳವರೆಗೆ ಸೈಕಲ್​ ತುಳಿಯಲಿದ್ದಾರೆ. – ಲಕ್ನೋದ 19 ವಿಕ್ರಮಾದಿತ್ಯ ಮಾರ್ಗ್‌ನಲ್ಲಿರುವ ಸಮಾಜವಾದಿ ಪಕ್ಷದ ಪ್ರಧಾನ ಕಚೇರಿಯಿಂದ ಜನೇಶ್ ಮಿಶ್ರಾ ಪಾರ್ಕ್ ವರೆಗೆ ಗುರುವಾರ ಬೆಳಿಗ್ಗೆ 10 ಗಂಟೆಗೆ ಬೆಲೆ ಏರಿಕೆ, ನಿರುದ್ಯೋಗ, ಕೃಷಿ ಕಾನೂನುಗಳು ಮತ್ತು ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ವಿರೋಧಿಸಿ. ಅವರ ಪತ್ನಿ ಹಾಗೂ ಮಾಜಿ ಸಂಸದೆ ಡಿಂಪಲ್ ಯಾದವ್ ಅವರು ಕನೌಜ್‌ನಲ್ಲಿ ಸೈಕಲ್ ಯಾತ್ರೆಯಲ್ಲಿ ಭಾಗವಹಿಸಿದರು.