ಮನೆ ಮನೆಯಲ್ಲೂ ಧ್ವಜರೋಹಣಕ್ಕೆ ಮಾಲೂರು ತಾಲ್ಲೂಕು ಕಾರ್ಯನಿರ್ವಾಹಕ ಆಧಿಕಾರಿಗಳಾ ಮುನಿರಾಜು ಚಾಲನೆ ನೀಡಿದರು. ತಾಲ್ಲೂಕು ಪಂಚಾಯತಿ ವತಿಯಿಂದ ಸಾಮಾರ್ಥ್ಯಸೌಧಸದಲ್ಲಿ ಮನೆ ಮನೆಯಲ್ಲೂ ಧ್ವಜರೋಹಣ ಜಾಗೃತಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಈ ವೇಳೆ ಮಾತಾನಾಡಿದ ತಾ.ಪಂ ಇಒ, ಸ್ವಾತಂತ್ರ್ಯೋತ್ಸವದ ಈ ಅಮೃತ ಮಹೋತ್ಸವ ಸಂದರ್ಭದಲ್ಲಿ ಆಗಸ್ಟ್ 13 ರಿಂದ 15 ರ ವರೆಗೆ ಪ್ರತಿ ಮನೆಯಲ್ಲೂ ತಿರಂಗಾ ಧ್ವಜವನ್ನು ಹಾರಿಸುವಂತೆ ಮನವಿ ಮಾಡಿದರು. ಈಗಾಗಲೇ ತಾಲ್ಲೂಕು ಪಂಚಾಯತಿಯಿಂದ ಗ್ರಾಮ ಪಂಚಾಯತಿಗಳಿಗೆ ತ್ರಿವರ್ಣಧ್ವಜಗಳನ್ನು ಸರಬರಾಜು ಮಾಡಲಾಗಿದೆ. ಎಲ್ಲಾ ಸಿಬ್ಬಂದಿ ತಮ್ಮ ಮನೆಗಳ […]Read More
ಕೋಲಾರ: ನರೇಗಾ ನೆರವಿನಿಂದ ಮಾಲೂರು ತಾಲ್ಲೂಕಿನ ಸರ್ಕಾರಿ ಶಾಲೆಗಳಿಗೆ ಹೈಟೆಕ್ ಸ್ಪರ್ಶ ಸಿಕ್ಕಿದೆ. ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯಲ್ಲಿ ಈ ಹಿಂದೆ ಕೂಲಿ ಕಾರ್ಮಿಕರಿಗೆ ಉದ್ಯೋಗ ನೀಡುವುದರ ಜೊತೆಗೆ ಗ್ರಾಮೀಣ ಪ್ರದೇಶದಲ್ಲಿ ಮೂಲಸೌಕರ್ಯ ನಿರ್ಮಿಸಲಾಗುತ್ತಿತ್ತು. ಆದರೆ ಈಗ ಸರ್ಕಾರಿ, ಶಾಲೆ ಅಂಗನವಾಡಿ ಕೇಂದ್ರಗಳಿಗೆ ಮೂಲ ಸೌಕರ್ಯಗಳನ್ನು ನಿರ್ಮಿಸಲಾಗುತ್ತಿದೆ. ಈ ಮೂಲಕ ನರೇಗಾ ಅನುದಾನ ಬಳಸಿ, ಮಾದರಿ ಶಾಲೆ, ಅಂಗನವಾಡಿಗಳನ್ನು ನಿರ್ಮಾಣ ಮಾಡಲಾಗುತ್ತಿದೆ. ಜಿಲ್ಲಾ ಪಂಚಾಯತಿಯ ಮುಖ್ಯ ಕಾರ್ಯನಿರ್ವಹಕ ಅಧಿಕಾರಿಗಳಾದ ಉಕೇಶ್ ಕುಮಾರ್, ಸೂಚನೆಯಂತೆ […]Read More
ಮೈಸೂರು:ಡಾ.ಎಚ್.ಆರ್. ಕೃಷ್ಣಮೂರ್ತಿ ಹೊಸಬೀಡು ಅವರ ಸಾವು ಅರ್ಥಶಾಸ್ತ್ರ ಸಾಹಿತ್ಯಕ್ಕೆ ತುಂಬಲಾರದ ನಷ್ಟವನ್ನುಂಟು ಮಾಡಿದೆ ಎಂದು ಅರ್ಥಶಾಸ್ತ್ರ ನಿವೃತ್ತ ಪ್ರಾಧ್ಯಾಪಕ ಡಾ.ಬಿ. ಗೋಪಾಲ್ ಸಿಂಗ್ ವಿಷಾದ ವ್ಯಕ್ತಪಡಿಸಿದರು. ನಗರದ ಮಹಾರಾಣಿ ಕಲಾ ಕಾಲೇಜಿನ ಸ್ನಾತಕೋತ್ತರ ಅಧ್ಯಯನ ಕೆಂದ್ರದಲ್ಲಿ ಮೈಸೂರು ಅರ್ಥಶಾಸ್ತ್ರ ಅಧ್ಯಾಪಕರ ಸಂಘ, ಮಹಾರಾಣಿ ಕಲಾ ಕಾಲೇಜು, ಸ್ನಾತಕೋತ್ತರ ಕೇಂದ್ರದ ವತಿಯಿಂದ ಬುಧವಾರ ಹಮ್ಮಿಕೊಂಡಿದ್ದ ಡಾ.ಎಚ್.ಆರ್. ಕೃಷ್ಣಮೂರ್ತಿ ಅವರಿಗೆ ಶ್ರದ್ಧಾಂಜಲಿ ಸಭೆಯಲ್ಲಿ ಅವರು ಮಾತನಾಡಿದರು. ನಾನು ಕಂಡ ಜನಪ್ರಿಯ ಅರ್ಥಶಾಸ್ತ್ರ ಬರಹಗಾರರು, ಜನಪರ ಆಲೋಚಕರಾಗಿದ್ದ ಡಾ.ಎಚ್.ಆರ್. ಕೃಷ್ಣಮೂರ್ತಿ ಅವರ […]Read More
ಕೋಲಾರ: ಬಯಲುಸೀಮೆ ಕೋಲಾರದ ಮಿನಿ ಕೆ.ಆರ್.ಎಸ್ ಎಂದೇ ಖ್ಯಾತಿಯ ಮಾರ್ಕೆಂಡೇಯ ಡ್ಯಾಂ ತುಂಬಿ ಹರಿಯುತ್ತಿದ್ದು, ಮತ್ತೆ ಜೀವಕಳೆ ಬಂದಿದೆ. ಹಲವು ವರ್ಷಗಳ ಬಳಿಕ ಕಳೆದ ವರ್ಷ ಡ್ಯಾಂ ತುಂಬಿ ಹರಿದಿತ್ತು. ಆದರೆ ಈ ಬಾರಿ ಮುಂಗಾರು ಆರಂಭದಲ್ಲೆ ಡ್ಯಾಂ ಕೋಡಿ ಹರಿದಿದ್ದು, ಪ್ರವಾಸಿಗರನ್ನು ಕೈಬಿಸಿ ಕರೆಯುತ್ತಿದೆ. ಮೈಸೂರು ಮಹಾರಾಜರ ಕಾಲದಲ್ಲಿ ನಿರ್ಮಾಣವಾದ, ಡ್ಯಾಂ, ಕೆ.ಆರ್.ಎಸ್ ರೀತಿಯಲ್ಲಿ ಮಿನಿ ಕೆ.ಆರ್.ಎಸ್ ಎಂದೇ ಪ್ರಸಿದ್ದಿ. ಆದರೆ ಮಳೆ ಇಲ್ಲದೆ ಹತ್ತಾರು ವರ್ಷಗಳಿಂದ ಬರಡಾಗಿತ್ತು. ಕಳೆದ ವರ್ಷದಿಂದ ಡ್ಯಾಂನಲ್ಲಿ ನೀರು ತುಂಬಿದ್ದೇ […]Read More
ಮೈಸೂರು: ನಗರದ ಆದಿಚುಂಚನಗಿರಿ ರಸ್ತೆಯಲ್ಲಿರುವ (ಹೊಸ ನ್ಯಾಯಾಲಯದ ರಸ್ತೆ) ಶಿವಾರ್ಚಕ ಸಂಘದ ಉಚಿತ ವಿದ್ಯಾರ್ಥಿ ನಿಲಯಕ್ಕೆ ಶಿವಾರ್ಚಕ ಸಮಾಜದ ವಿದ್ಯಾರ್ಥಿಗಳಿಂದ 2022-23ನೇ ಸಾಲಿಗೆ ಅರ್ಜಿ ಆಹ್ವಾನಿಸಲಾಗಿದೆ. ಸಂಸ್ಕೃತಾಭ್ಯಾಸ, ಪದವಿ (ಬಿಎಸ್ಸಿ, ಎಂಎಸ್ಸಿ, ಬಿಇ, ಎಂ.ಟೆಕ್, ಎಂಬಿಬಿಎಸ್), ತಾಂತ್ರಿಕ ಮತ್ತು ವೈದ್ಯಕೀಯ ಕಾಲೇಜುಗಳಲ್ಲಿ ವ್ಯಾಸಾಂಗ ಮಾಡುತ್ತಿರುವ ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದೆ. ಭರ್ತಿ ಮಾಡಿದ ಅರ್ಜಿಯೊಂದಿಗೆ ಕಾಲೇಜು ದೃಢೀಕರಣ, ಜಾತಿ ಪ್ರಮಾಣ ಪತ್ರ, ಎರಡು ಭಾವಚಿತ್ರ ಸೇರಿದಂತೆ ಅಗತ್ಯ ದಾಖಲೆಗಳನ್ನು ಜೂ.30ರೊಳಗೆ ಸಲ್ಲಿಸತಕ್ಕದ್ದು. ಹೆಚ್ಚಿನ ಮಾಹಿತಿಗೆ ಕಾರ್ಯದರ್ಶಿ ಪ್ರದೀಪ್ ಮೊ: […]Read More
– ಸಂಜಯ್ ಹೊಯ್ಸಳ ಕಾಟಿ/ಕಾಡೆಮ್ಮೆ ಎಂದೇ ಕರೆಸಿಕೊಳ್ಳುವ ಇದು ಗೋವಾದ ರಾಜ್ಯ ಪ್ರಾಣಿ. ಕಾಡಲ್ಲಿ ಇದು ಹುಲಿಗಳ ಪ್ರಮುಖ ಬಲಿ ಪ್ರಾಣಿ. ನೋಡಲು ಇದು ಎಮ್ಮೆಯಂತಿದ್ದರೂ ವಾಸ್ತವವಾಗಿ ಎತ್ತಿನ ಜಾತಿಗೆ (Bovidae) ಸೇರಿದ ಪ್ರಾಣಿ. ಟನ್ ಗಟ್ಟಲೇ ತೂಕ ಹೊಂದಿದ ಕಾಟಿಗೆ ಕಾಡಲ್ಲಿ ಹುಲಿ ಬಿಟ್ಟರೆ ಬೇರೆ ಬೇಟೆಗಾರ ಪ್ರಾಣಿ ಇಲ್ಲ. ವಯಸ್ಕ ಗಂಡು ಕಾಟಿ ಒಂಟಿಯಾಗಿದ್ದರೆ, ಉಳಿದವು ಸದಾ ಗುಂಪಿನಲ್ಲಿ ಕೌಟುಂಬದ ರೀತಿ ವಾಸಿಸುತ್ತವೆ. ಅಪಾಯದಂಚಿನಲ್ಲಿರುವ ಪ್ರಾಣಿಗಳಲ್ಲಿ ಒಂದಾದ ಈ ಪ್ರಾಣಿ ಭಾರತದ ಪ್ರಮುಖ ಸಂರಕ್ಷಿತ […]Read More
ಚಾಮರಾಜನಗರ: ಕೊಳ್ಳೇಗಾಲ ತಾಲೂಕಿನ ಅರಣ್ಯ ಪ್ರದೇಶದಲ್ಲಿ ಅಕ್ರಮವಾಗಿ ಜಿಂಕೆ ಕೊಂದು ತಲೆ ಮತ್ತು ಕಾಲನ್ನು ಸಾಗಿಸಲು ಯತ್ನಿಸುತ್ತಿದ್ದ ಮೂವರನ್ನು ಅರಣ್ಯ ಇಲಾಖೆ ಸಿಬ್ಬಂದಿ ಶನಿವಾರ ಬಂಧಿಸಿದ್ದಾರೆ. ತಾಲೂಕಿನ ರಾಚಪ್ಪಾಜಿ ನಗರದ ನಿವಾಸಿ ಮಾದಪ್ಪ (53,) ಹೊಳಸಾಲ (53), ಸುಂಡ್ರಹಳ್ಳಿ ಕೃಷ್ಣ ( 32) ಬಂಧಿತರು. ಜಿಂಕೆ ಬೇಟೆಯಾಡಲೆಂದು ಉರುಳು ಹಾಕಿದ್ದ ಹಂತಕರು ಜಿಂಕೆ ಕೊಂದು ಅದರ ಕಾಲು, ತಲೆ, ಚರ್ಮವನ್ನು ಬೇರೆ ಕಡೆ ಸಾಗಿಸಲು ಮುಂದಾಗಿದ್ದರು. ಈ ಬಗ್ಗೆ ಖಚಿತ ಮಾಹಿತಿ ಮೇರೆಗೆ ಅರಣ್ಯ ಇಲಾಖೆ ಅಧಿಕಾರಿಗಳು […]Read More
ಮೈಸೂರು: ದೇಶ ಭಕ್ತರು ದೇಶ ಕಾಯೋದಕ್ಕೆ ಹೋಗುತ್ತಾರೆ. ಬೆಂಕಿ ಹಚ್ಚುವ ಕೆಲಸ ಮಾಡಬಾರದು. ನೇರವಾಗಿ ಹೇಳುತ್ತಿದ್ದೇನೆ. ಈ ಗಲಾಟೆಯಿಂದ ಕಾಂಗ್ರೆಸ್ ಇದೆ ಎಂದು ಗೃಹ ಸಚಿವ ಅರಗ ಜ್ಞಾನೇಂದ್ರ ಹೇಳಿದರು. ಭಾನುವಾರ ವಿಶ್ವ ಯೋಗ ದಿನದ ಸಿದ್ಧತೆ ಪರಿಶೀಲಿಸಿ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅಗ್ನಿ ಪಥ ಒಂದು ಒಳ್ಳೆಯ ಯೋಜನೆ. ಅದಕ್ಕಾಗಿ ಯುವ ಜನಾಂಗ ಮೋದಿಗೆ ಅಭಿನಂದನೆ ಸಲ್ಲಿಸಬೇಕು. ಕರ್ನಾಟಕ ರಾಜ್ಯದ ಗೃಹ ರಕ್ಷಕ ದಳ, ಅಗ್ನಿ ಶಾಮಕ ದಳ ಸೇರಿದಂತೆ ಬೇರೆ ಬೇರೆ ಸೆಕ್ಯೂರಿಟಿ […]Read More
ಮೈಸೂರು: ಶಾಸಕ ಸಾ.ರಾ.ಮಹೇಶ್ ಪತ್ನಿ ಅನಿತಾ ಮಹೇಶ್ 27 ವರ್ಷಗಳ ನಂತರ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಉತ್ತೀರ್ಣರಾಗಿದ್ದಾರೆ. ಇಪ್ಪತ್ತೇಳು ವರ್ಷಗಳ ನಂತರ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಖಾಸಗಿ ವಿದ್ಯಾರ್ಥಿಯಾಗಿ ಪರೀಕ್ಷೆ ಬರೆದಿದ್ದ ಅನಿತಾ ಅವರು, ಕಲಾ ವಿಭಾಗದಲ್ಲಿ 418 ಅಂಕ ಪಡೆದು ಪ್ರಥಮ ದರ್ಜೆಯಲ್ಲಿ ತೇರ್ಗಡೆಯಾಗಿದ್ದಾರೆ. 1993ರಲ್ಲಿ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ತೇರ್ಗಡೆ ಹೊಂದಿದ್ದರು. ನಂತರ ಮುಂದಿನ ವಿದ್ಯಾಭ್ಯಾಸ ಮುಂದುವರಿಸಿರಲಿಲ್ಲ.Read More
ಮೈಸೂರು: ವಿಶ್ವ ಯೋಗ ದಿನಾಚರಣೆಗಾಗಿ ನಗರಕ್ಕೆ ಆಗಮಿಸುವ ಪ್ರಧಾನಿ ನರೇಂದ್ರ ಮೋದಿ ರ‌್ಯಾಡಿಸನ್ ಬ್ಲೂ ಹೋಟೆಲ್‌ನಲ್ಲಿ ಉಳಿದುಕೊಳ್ಳಲಿದ್ದಾರೆ. ನಗರದಲ್ಲಿ ಮೋದಿ ಜೂ.20 ಮತ್ತು 21ರಂದು ರ‌್ಯಾಡಿಸನ್ ಬ್ಲೂ ಹೋಟೆಲ್‌ನಲ್ಲಿ ಉಳಿದುಕೊಳ್ಳಲಿದ್ದು, ಈ ಎರಡು ದಿನಗಳಲ್ಲಿ ಭದ್ರತೆ ಹಾಗೂ ಆತಿಥ್ಯದಲ್ಲಿ ಯಾವುದೇ ಲೋಪವಾಗದಂತೆ ಎಚ್ಚರ ವಹಿಸಲಾಗುತ್ತಿದೆ. ಮೋದಿ ಕಳೆದ ಬಾರಿ ನಗರಕ್ಕೆ ಭೇಟಿ ನೀಡಿದ ಸಂದರ್ಭ ಸಹ ರ‌್ಯಾಡಿಸನ್ ಬ್ಲೂ ಹೋಟೆಲ್‌ನಲ್ಲೇ ಉಳಿದುಕೊಂಡಿದ್ದರು. ಪ್ರಧಾನಿ ಭೇಟಿ ಸಂದರ್ಭ ಭದ್ರತೆಗೆ ಹೆಚ್ಚಿನ ಒತ್ತು ನೀಡಲಾಗುತ್ತದೆ. ಈ ಹಿನ್ನೆಲೆಯಲ್ಲಿ ಪ್ರಧಾನಿ ಉಳಿದುಕೊಳ್ಳುವ […]Read More